Advertisement

ಇನ್ನು ಮುಂದೆ ಗೂಗಲ್ ಕ್ಲಾಸ್ ಸಂಪೂರ್ಣ ನಿಯಂತ್ರಣ ಶಿಕ್ಷಕರ ಕೈಯಲ್ಲಿ.! ಏನಿದು ಹೊಸ ಫೀಚರ್?

01:53 PM Feb 20, 2021 | Team Udayavani |

ನವದೆಹಲಿ: ಪ್ರಸಿದ್ಧ ವೀಡಿಯೋ ಸಂವಾದದ ಆ್ಯಪ್ ಆಗಿರುವ ಗೂಗಲ್ ಮೀಟ್ ಶಿಕ್ಷಕರಿಗಾಗಿ ಎಲ್ಲಾ ವಿದ್ಯಾರ್ಥಿಗಳ ಸಂವಾದದ ಆಡಿಯೋವನ್ನು ಮ್ಯೂಟ್ ಮಾಡುವ ಸೌಲಭ್ಯವನ್ನು ಒಳಗೊಂಡಂತೆ ಹಲವು ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದೆ.

Advertisement

ಇತ್ತೀಚಿನ ದಿನಗಳಲ್ಲಿ ವೀಡಿಯೋ ಸಂವಾದದ ಸಮಯದಲ್ಲಿ ಶಿಕ್ಷಕರು ವಿವಿಧ ರೀತಿ ಕಿರುಕುಳವನ್ನು ಅನುಭವಿಸಿರುವ ಹಾಗೂ ಶ್ವೇತ ಅವರ ಸಂವಾದದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ನಿರ್ಧಾರವನ್ನು ಗೂಗಲ್ ಕೈಗೊಂಡಿದೆ.

ಇದೀಗ ನೂತನವಾಗಿ ನೀಡಿರುವ ಹೊಸ ಫೀಚರ್ ನಲ್ಲಿ ಶಿಕ್ಷಕರಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿದ್ದು, ಸಂಪೂರ್ಣ ಆನ್ ಲೈನ್ ತರಗತಿಯನ್ನು ಶಿಕ್ಷಕರು ನಿಯಂತ್ರಿಸಬಹುದಾಗಿದೆ.

ಎಲ್ಲಾ ವಿದ್ಯಾರ್ಥಿಗಳ ಸಂವಾದವನ್ನು ಶಿಕ್ಷಕರು ಮ್ಯೂಟ್ ಮಾಡಬಹುದಾದ್ದರಿಂದ ಯಾವುದೇ ಒಂದು ಗಹನವಾದ ಸಂವಾದ ನಡೆಯುವಾಗ ನಡುವೆ ಅನಾವಶ್ಯಕವಾದ ಶಬ್ದಗಳಿಂದ ತರಗತಿಯಲ್ಲಿನ ಏಕಾಗ್ರತೆ ಹಾಳಾಗುವ ಸಾಧ್ಯತೆ ಇರುತ್ತದೆ. ಅಂತಹ ಸನ್ನಿವೇಶವನ್ನು ತಪ್ಪಿಸಲು ಈ ಹೊಸ ಫೀಚರ್ ಸಹಾಯವಾಗಲಿದೆ ಎಂದು ಗೂಗಲ್ ತಿಳಿಸಿದೆ.

ಇದನ್ನೂ ಓದಿ:ರಾಮಮಂದಿರ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ಧೂಳಿಪಟವಾಗಲಿದೆ: ಬಿ.ವೈ.ವಿಜಯೇಂದ್ರ

Advertisement

ಹೊಸ ಫೀಚರ್ ನಲ್ಲಿ ಗೂಗಲ್ ಸಂವಾದದಲ್ಲಿ ಸುರಕ್ಷತೆಗೆ ಹೆಚ್ಚಿನ ಒಲವನ್ನು ನೀಡಿದ್ದು, ಶಿಕ್ಷಕರು ಯಾರು ಆನ್ ಲೈನ್ ಕ್ಲಾಸ್ ಗೆ ಅಟೆಂಡ್ ಆಗಬೇಕು ಯಾರು ಆಗಬಾರದು ಎಂಬುವುದನ್ನು ನಿರ್ಧರಿಸಬಹುದಾಗಿದೆ. ಅಲ್ಲದೆ ಯಾರು ತರಗತಿಗೆ ಸೇರಬಾರದು ಅಂತಹ ವ್ಯಕ್ತಿಗಳನ್ನು ಬ್ಲಾಕ್ ಮಾಡುವ ಸೌಲಭ್ಯವನ್ನು ಶಿಕ್ಷಕರಿಗೆ ನೀಡಲಾಗಿದ್ದು, ತರಗತಿಯಲ್ಲಿ ಯಾವ ವಿದ್ಯಾರ್ಥಿ ಸಂವಾದ ನಡೆಸಬಹುದು ಮತ್ತು ಯಾವ ವಿದ್ಯಾರ್ಥಿ ಸಂವಾದಲ್ಲಿ ಚಾಟ್ ಮಾಡಬಹುದು ಎಂಬದನ್ನೂ ಶಿಕ್ಷಕರೇ ನಿಯಂತ್ರಿಸಬಹುದಾಗಿದೆ.

ಈ ಹಿಂದೆ ಶಿಕ್ಷಕರು ಆನ್ ಲೈನ್ ಕ್ಲಾಸ್ ನಿಂದ ನಿರ್ಗಮಿಸಿದ ನಂತರವೂ ವಿದ್ಯಾರ್ಥಿಗಳು ಕ್ಲಾಸ್ ನಲ್ಲಿಯೇ ಇರಬಹುದಾಗಿತ್ತು. ಆದರೆ ಇದೀಗ ಶಿಕ್ಷಕರು ಕ್ಲಾಸ್ ಮುಗಿದ ಬಳಿ ಸಂಪೂರ್ಣ ತರಗತಿಯನ್ನು ಅಂತ್ಯಗೊಳಿಸುವ ಸೌಲಭ್ಯವನ್ನು ನೀಡಲಾಗಿದೆ.

ಮುಂಬರುವ ದಿನಗಳಲ್ಲಿ ಏಕಕಾಲದಲ್ಲಿ ಒಂದಕ್ಕಿಂತಲೂ ಅಧಿಕ ಶಿಕ್ಷಕರು  ಅಥವಾ ಕಾರ್ಯಕ್ರಮ ಸಂಯೋಜಕರು ಸಂಪೂರ್ಣ ಸಂವಾದವನ್ನು ನಿಯಂತ್ರಿಸುವ ಫೀಚರ್ ಅನ್ನು ಗೂಗಲ್ ನೀಡಲಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next