Advertisement

ಕ್ರಿಕೆಟಿಗ ದಿಲೀಪ್‌ ಸರ್ದೇಸಾಯಿಗೆ ಗೂಗಲ್‌ ಡೂಡಲ್‌ ಗೌರವ

06:15 AM Aug 09, 2018 | |

ಮುಂಬಯಿ: ಭಾರತದ ಖ್ಯಾತ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ದಿಲೀಪ್‌ ನಾರಾಯಣ್‌ ಸರ್ದೇಸಾಯಿ ಅವರಿಗೆ ಬುಧವಾರ ಡೂಡಲ್‌ ಮೂಲಕ ಗೂಗಲ್‌ 78ನೇ ಹುಟ್ಟುಹಬ್ಬದ ಗೌರವ ಸಲ್ಲಿಸಿದೆ. ಗೂಗಲ್‌ ಸರ್ಚ್‌ ವೇಳೆ ಹಸಿರು ಅಂಗಳದ ಹಿನ್ನೆಲೆಯಲ್ಲಿ ಬ್ಯಾಟಿಂಗ್‌ ನಡೆಸುತ್ತಿರುವ ಸರ್ದೇಸಾಯಿ ಅವರನ್ನು ಕಾಣಬಹುದಿತ್ತು.

Advertisement

1940ರ ಆಗಸ್ಟ್‌ 8ರಂದು ಗೋವಾದಲ್ಲಿ ಜನಿಸಿದ ದಿಲೀಪ್‌ ಸರ್ದೇಸಾಯಿ 1961ರಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಕ್ರಿಕೆಟಿಗೆ ಅಡಿಯಿರಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲೇ ಹಿಟ್‌ ವಿಕೆಟ್‌ ಆಗಿ ಔಟಾದ ವಿಶಿಷ್ಟ ದಾಖಲೆ ಇವರದಾಗಿತ್ತು.

ಭಾರತದ ಪರ 30 ಟೆಸ್ಟ್‌ಗಳಾನ್ನಡಿದ್ದ ಸರ್ದೇಸಾಯಿ 2,001 ರನ್‌ ಹೊಡೆದಿದ್ದರು. 212 ರನ್‌ ಸರ್ವಾಧಿಕ ಗಳಿಕೆ. 1971ರ ವೆಸ್ಟ್‌ ಇಂಡೀಸ್‌ ಪ್ರವಾಸಲ್ಲಿ 642 ರನ್‌ ಪೇರಿಸಿದ್ದು ಇವರ ಮಹಾನ್‌ ಸಾಧನೆಯಾಗಿ ದಾಖಲಾಗಿದೆ. ಒಂದು ದ್ವಿಶತಕ, 2 ಶತಕ ಹಾಗೂ ಒಂದು ಅರ್ಧ ಶತಕ ಇದರಲ್ಲಿ ಸೇರಿತ್ತು. ರಣಜಿಯಲ್ಲಿ ಅವರು ಮುಂಬಯಿ ತಂಡವನ್ನು ಪ್ರತಿನಿಧಿಸಿದ್ದರು. 2007ರ ಜುಲೈ 2ರಂದು ಸರ್ದೇಸಾಯಿ ನಿಧನರಾದರು.

Advertisement

Udayavani is now on Telegram. Click here to join our channel and stay updated with the latest news.

Next