Advertisement

Google: ಅಗ್ಗದ ಟಿಕೆಟ್‌ ಬುಕಿಂಗ್‌ಗೂ ಗೂಗಲ್‌ ನೆರವು

09:28 PM Aug 30, 2023 | Team Udayavani |

ನವದೆಹಲಿ: ವಿಮಾನ ಪ್ರಯಾವನ್ನು ಸುಗಮಗೊಳಿಸುವುದರ ಜತೆಗೆ ವೆಚ್ಚವನ್ನೂ ಕಡಿಮೆಗೊಳಿಸುವ ನಿಟ್ಟಿನಲ್ಲಿ ಗೂಗಲ್‌ ಸಂಸ್ಥೆಯ ಗೂಗಲ್‌ ಫ್ಲೈಟ್ಸ್‌ ವೆಬ್‌ಸೈಟ್‌ ಹೊಸ ಫೀಚರ್‌ ಒಂದನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಪ್ರಯಾಣಿಕರಿಗೆ ಯಾವ ಸಂದರ್ಭದಲ್ಲಿ ಕಡಿಮೆ ವೆಚ್ಚದಲ್ಲಿ ವಿಮಾನ ಆಸನ ಕಾಯ್ದಿರಿಸುವಿಕೆ ಸಾಧ್ಯವೆಂಬುದು ತಿಳಿಯಲಿದೆ.

Advertisement

ಈಗಾಗಲೇ ಗೂಗಲ್‌ ಫ್ಲೈಟ್ಸ್‌ನಲ್ಲಿ ಬೆಲೆಗಳ ಏರಿಳಿತ ಗಮನಿಸುವ ವ್ಯವಸ್ಥೆಯಿದೆ, ಬದಲಾವಣೆಯಾದಾಗ ಮುನ್ಸೂಚನೆಗಳನ್ನೂ ನೀಡಲಾಗುತ್ತದೆ. ಇದರ ಜತೆಗೆ ಇನ್ನು ಮುಂದೆ ಯಾವ ಸಂದರ್ಭದಲ್ಲಿ ಟಿಕೆಟ್‌ ಕಾಯ್ದಿರಿಸಿದರೆ ಶುಲ್ಕ ಕಡಿಮೆ ಇರುತ್ತದೆ ಎಂಬುದನ್ನೂ ನೂತನ ವ್ಯವಸ್ಥೆ ತಿಳಿಸುತ್ತೆ. ಅಂದರೆ, ಮುಂದಿನ ಎರಡು ತಿಂಗಳಲ್ಲಿ ನೀವು ಪ್ರವಾಸ ಕೈಗೊಳ್ಳುವಂತಿದ್ದರೆ ಅದನ್ನು ವೆಬ್‌ಸೈಟ್‌ಗೆ ತಿಳಿಸಿದರೆ ಸಾಕು, ಅದು ಯಾವ ಸಂದರ್ಭದಲ್ಲಿ ಟಿಕೆಟ್‌ ಕಡಿಮೆ ಇರುತ್ತದೆ ಎಂಬುದನ್ನು ಗಮನಿಸಿ, ಲೆಕ್ಕಾಚಾರ ಮಾಡಿ, ಯಾವ ಸಮಯದಲ್ಲಿ ಬುಕ್‌ ಮಾಡಬೇಕೆಂದು ನಿಮಗೆ ತಿಳಿಸುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next