Advertisement

ಉದ್ಯೋಗಿ ಸ್ನೇಹಿ ಕಂಪನಿ ಪಟ್ಟಿಯಲ್ಲಿ ಹಿಂದುಳಿದ ಗೂಗಲ್‌-ಫೇಸ್‌ಬುಕ್‌

10:15 AM Dec 12, 2019 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಜಾಗತಿಕ ಮಟ್ಟದಲ್ಲಿ ತನ್ನ ಅಧಿಪತ್ಯ ಸಾಧಿಸಿರುವ ಫೇಸ್‌ಬುಕ್‌ ಮತ್ತು ಗೂಗಲ್‌ ಕಂಪನಿಗಳ ಕುರಿತು ಅಚ್ಚರಿ ಸುದ್ದಿಯೊಂದು ಹೊರಬಿದ್ದಿದ್ದು, ಉದ್ಯೋಗ ಸ್ನೇಹಿ ಕಂಪನಿಗಳ ಪಟ್ಟಿಯಲ್ಲಿ ಕಳಪೆ ಪ್ರದರ್ಶನ ತೋರಿಸಿದೆ ಎಂದು ವರದಿ ತಿಳಿಸಿದೆ.

Advertisement

ಉದ್ಯೋಗ ಸ್ನೇಹಿ ಕಂಪನಿಗಳ ವಾರ್ಷಿಕ ವರದಿಯನ್ನು ಗ್ಲಾಸ್‌ಡೋರನ್‌ ಬಿಡುಗಡೆ ಮಾಡಿದ್ದು, ಅಗ್ರಸ್ಥಾನ ಪಡೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿದ್ದ ಗೂಗಲ್‌ ಮತ್ತು ಫೇಸ್‌ಬುಕ್‌ ಕಂಪನಿಗಳು ವಂಚಿತವಾಗಿವೆ ಎಂದು ವರದಿ ತಿಳಿಸಿದೆ.

ಕಳೆದ ಮೂರು ವರ್ಷಗಳಿಂದ ಅಗ್ರಹತ್ತು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದ ಫೇಸ್‌ಬುಕ್‌ 23ನೇ ಸ್ಥಾನಕ್ಕೆ ಇಳಿದಿದ್ದು, ಕಳೆದ ಎಂಟು ವರ್ಷದಿಂದ ಅಗ್ರ ಹತ್ತರಲ್ಲಿ ಸ್ಥಾನ ಕಾಯ್ದುಕೊಂಡಿದ್ದ ಗೂಗಲ್‌ ಈ ವರ್ಷದ ವರದಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದೆ.

ಅಗ್ರ 25ರಲ್ಲಿ ಇದ್ದ ಆ್ಯಪಲ್‌ ಸಂಸ್ಥೆ ಈ ಬಾರಿ 84ನೇ ಶ್ರೇಯಾಂಕದಲ್ಲಿದ್ದು, ಆಂತರಿಕವಾಗಿ ಧನಾತ್ಮಕ ವಾತಾವರಣದ ಕೊರತೆ ಇರುವ ಅಮೇಜಾನ್‌ ಸಂಸ್ಥೆ ಈ ಪಟ್ಟಿಯಿಂದ ಹೊರ ಉಳಿದಿದೆ. ಇನ್ನೂ ಕ್ಲೌಡ್ ಕಂಪ್ಯೂಟಿಂಗ್‌ ಸಾಫ್ಟ್ವೇರ್‌ ಕಂಪೆನಿ ಹಬ್‌ಸ್ಪಾಟ್‌ ಈ ಬಾರಿ ಉದ್ಯೋಗಿ ಸ್ನೇಹಿ ಕಂಪೆನಿಗಳ ಲಿಸ್ಟ್‌ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದು, ಬ್ರೈನ್‌ ಕಂಪೆನಿ ಹಾಗೂ ಡಾಕ್ಯುಸೈನ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದೆ.

ಉದ್ಯೋಗಿಗಳು ತಮ್ಮ ಕಂಪೆನಿಯ ನಿರ್ಧಾರ, ಸೌಲಭ್ಯ, ಕೆಲಸದ ಒತ್ತಡ, ಉದ್ಯೋಗಿಗಳ ನಡುವಿನ ಸಂಬಂಧ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ನೀಡಿದ ಪ್ರತಿಕ್ರಿಯೆನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next