ರಷ್ಯಾ ಕ್ರಮಕ್ಕೆ ಒಂದೊಂದು ದೇಶದಲ್ಲಿ ಒಂದು ರೀತಿಯಲ್ಲಿ ಆಕ್ರೋಶ, ನಿರ್ಬಂಧ ವ್ಯಕ್ತವಾಗುತ್ತಿದೆ.
ಈಗ ಅಮೆರಿಕ ತಾಂತ್ರಿಕ ದೈತ್ಯ ಸಂಸ್ಥೆಗಳಾದ ಗೂಗಲ್ ಹಾಗೂ ಫೇಸ್‌ಬುಕ್‌ಗಳು ತಮ್ಮದೇ ರೀತಿಯಲ್ಲಿ ನಿರ್ಬಂಧ ಹೇರಿವೆ.
ರಷ್ಯಾದ ಸರ್ಕಾರಿ ಮಾಧ್ಯಮಗಳು ಗೂಗಲ್ ಹಾಗೂ ಅದರ ಇತರೆ ಸಹಸಂಸ್ಥೆಗಳ ಮೂಲಕ ಆರ್ಥಿಕ ಲಾಭ ಪಡೆಯುವುದಕ್ಕೆ ನಿಷೇಧ ಹಾಕಲಾಗಿದೆ. ಯೂಟ್ಯೂಬ್‌ನಲ್ಲಿರುವ ರಷ್ಯಾ ಸರ್ಕಾರಿ ಮಾಧ್ಯಮಗಳ ವಾಹಿನಿಗಳು ಈಗ ಜಾಹೀರಾತು ಲಾಭ ಪಡೆಯಲು ಆಗುತ್ತಿಲ್ಲ.
ಇದನ್ನೂ ಓದಿ:ಸ್ತ್ರೀ ವಂಚಕನ 19 ನೇ ಮದುವೆ ಯತ್ನ ವಿಫಲ ಗೊಳಿಸಿದ ಪೊಲೀಸರು
ಹಾಗೆಯೇ ಗೂಗಲ್‌ನಲ್ಲೂ ಈ ಮಾಧ್ಯಮಗಳಿಗೆ ಯಾವುದೇ ಜಾಹೀರಾತು ಸಿಗುತ್ತಿಲ್ಲ. ಫೇಸ್‌ಬುಕ್ ಕೂಡ ರಷ್ಯಾ ಮಾಧ್ಯಮಗಳು ಆರ್ಥಿಕ ಲಾಭ ಪಡೆಯುವುದಕ್ಕೆ ನಿರ್ಬಂಧ ಹೇರಿವೆ. ಆದರೆ ಈ ಸಂಸ್ಥೆಗಳ ಕ್ರಮ ಕೇವಲ ರಷ್ಯಾದ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿವೆ!.