Advertisement

ಗುಡ್‌ಫೆಲೊ ಕ್ಲಾಸಿಕ್‌ ಸ್ಕ್ವಾಷ್‌: ಭಾರತದ ಅಭಯ್‌ ಸಿಂಗ್‌ಗೆ ಪ್ರಶಸ್ತಿ

11:36 PM Feb 25, 2024 | Team Udayavani |

ಹೊಸದಿಲ್ಲಿ: ಏಷ್ಯನ್‌ ಗೇಮ್ಸ್‌ ಪದಕ ವಿಜೇತ ಅಭಯ್‌ ಸಿಂಗ್‌ ಅವರು ಟೊರೊಂಟೊದಲ್ಲಿ ನಡೆದ ಗುಡ್‌ಫೆಲೊ ಕ್ಲಾಸಿಕ್‌ ಸ್ಕ್ವಾಷ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಅವರ ಎಂಟನೇ ಪಿಎಸ್‌ಎ ಪ್ರಶಸ್ತಿಯಾಗಿದೆ.

Advertisement

ಅಗ್ರ ಶ್ರೇಯಾಂಕದ ಅಭಯ್‌ ಫೈನಲ್‌ ಹೋರಾಟದಲ್ಲಿ ವೇಲ್ಸ್‌ನ ಎಲಿಯಟ್‌ ಮೊರಿಸ್‌ ದೆವೆÅಡ್‌ ಅವರನ್ನು 3-0 ಅಂತರದಿಂದ ಸುಲಭವಾಗಿ ಮಣಿಸಿದರು. ಇದು ಅಭಯ್‌ ಈ ವರ್ಷ ಗೆದ್ದ ಎರಡನೇ ಚಾಲೆಂಜರ್‌ ಪ್ರಶಸ್ತಿಯಾಗಿದೆ. ಅವರು ಕಳೆದ ತಿಂಗಳು ಮುಂಬಯಿಯಲ್ಲಿ ನಡೆದ ಜೆಎಸ್‌ಡಬ್ಲ್ಯು ವಿಲ್ಲಿಂಗ್ಡನ್‌ ಕೂಟದ ಪ್ರಶಸ್ತಿ ಜಯಿಸಿದ್ದರು. 25ರ ಹರೆಯದ ಅಭಯ್‌ ಮಾರ್ಚ್‌ನಲ್ಲಿ ಕೆನಡಿಯನ್‌ ಓಪನ್‌ನಲ್ಲಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next