Advertisement
36 ವರ್ಷದ ಅಭಿಷೇಕ್ ನಾಯರ್ ಎಡಗೈ ಬ್ಯಾಟ್ಸ್ ಮನ್, ಬಲಗೈ ಮಧ್ಯಮ ವೇಗಿಯಾಗಿದ್ದರು. ಭಾರತ ಪರ ಆಡಿದ್ದು 3 ಏಕದಿನ ಪಂದ್ಯ ಮಾತ್ರ. ಈ ಮೂರೂ ಪಂದ್ಯಗಳನ್ನು 2009ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಆಡಿದ್ದರು. ಆದರೆ ಕ್ರೀಸಿಗಿಳಿಯುವ ಅವಕಾಶ ಲಭಿಸಿದ್ದು ಒಮ್ಮೆ ಮಾತ್ರ. ಇದರಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದರು. ಐಪಿಎಲ್‌ನಲ್ಲಿ ಮುಂಬೈ, ಪಂಜಾಬ್ ಮತ್ತು ಪುಣೆ ತಂಡಗಳನ್ನು ಪ್ರತಿನಿಧಿಸಿದ್ದರು.
ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇವರದು ಉಲ್ಲೇಖನೀಯ ಸಾಧನೆ. ಒಂದೂವರೆ ದಶಕ ಕಾಲ ಮುಂಬಯಿ ತಂಡವನ್ನು ಪ್ರತಿನಿಧಿಸಿದ ನಾಯರ್ 103 ಪಂದ್ಯಗಳಿಂದ 5,749 ರನ್ ಗಳಿಸುವ ಜತೆಗೆ 173 ವಿಕೆಟ್ ಕಬಳಿಸಿದ್ದಾರೆ. ತಂಡವನ್ನು ಸಂಕಷ್ಟದಿಂದ ಪಾರುಮಾಡುವಲ್ಲಿ ನಿಷ್ಣಾತರಾಗಿದ್ದ ನಾಯರ್, ಕೋಚ್ ಆಗಿ ಮುಂದುವರಿಯುವ ಯೋಜನೆಯಲ್ಲಿದ್ದಾರೆ. “ಈ ವರೆಗಿನ ನನ್ನ ಕ್ರಿಕೆಟ್ ಜೀವನದ ಕುರಿತು ನನಗೆ ಸಂಪೂರ್ಣ ತೃಪ್ತಿ ಇದೆ. ಇಷ್ಟು ಕಾಲ ಮುಂಬಯಿ ಪರ ಆಡಲು ಅವಕಾಶ ನೀಡಿದ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು ಅಭಿಷೇಕ್ ನಾಯರ್ ಹೇಳಿದ್ದಾರೆ.