Advertisement

ವಿದಾಯ ಹೇಳಿದ ಸ್ಕಿವರ್‌ ಬ್ರಂಟ್‌

11:04 PM May 05, 2023 | Team Udayavani |

ಲಂಡನ್‌: ಇಂಗ್ಲೆಂಡ್‌ ವನಿತಾ ತಂಡದ ಹಿರಿಯ ವೇಗಿ ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

Advertisement

2004ರಲ್ಲಿ ಇಂಗ್ಲೆಂಡ್‌ ತಂಡವನ್ನು ಪ್ರತಿನಿಧಿಸತೊಡಗಿದ ಬ್ರಂಟ್‌ 267 ಅಂತಾ ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಎಲ್ಲ ಮಾದರಿಗಳಲ್ಲಿ ಒಟ್ಟು 335 ವಿಕೆಟ್‌ ಉರುಳಿಸಿದ ಸಾಧನೆ ಇವರದು. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ ಪರ ಅತ್ಯಧಿಕ ವಿಕೆಟ್‌ ಉರುಳಿಸಿದ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್‌ನ‌ 3 ವಿಶ್ವಕಪ್‌ ವಿಜಯಗಳಲ್ಲಿ, 4 ಆ್ಯಶಸ್‌ ಜಯಭೇರಿಯಲ್ಲಿ ಸ್ಕಿವರ್‌ ಬ್ರಂಟ್‌ ಕೊಡುಗೆ ಅಪಾರ.

“ಕಳೆದ 19 ವರ್ಷಗಳಿಂದ ನಾನು ಇಂಗ್ಲೆಂಡ್‌ ತಂಡದ ಭಾಗವಾಗಿದ್ದೆ. ಇದೊಂದು ಸುದೀರ್ಘ‌ ಪಯಣ. ಇಷ್ಟೊಂದು ಎತ್ತರಕ್ಕೆ ಏರುವ, ಇಷ್ಟು ವರ್ಷ ಗಳ ಕಾಲ ದೇಶವನ್ನು ಪ್ರತಿನಿಧಿಸುವ ಯಾವ ನಿರೀಕ್ಷೆ ಯನ್ನೂ ನಾನು ಹೊಂದಿರಲಿಲ್ಲ. ನನ್ನ ಸಾಧನೆಯಿಂದ ಕುಟುಂಬ ವರ್ಗಕ್ಕೆ ಖುಷಿಯಾದರಷ್ಟೇ ಸಾಕು ಎಂದು ಭಾವಿಸಿದವಳು ನಾನು. ಆದರೆ ಇದು ಈ ಚೌಕಟ್ಟನ್ನೂ ಮೀರಿ ನಿಂತಿತು. ಮುಂದಿನ ದಿನಗಳನ್ನು ಕುಟುಂಬದವರೊಂದಿಗೆ ಕಳೆಯುವುದೇ ನನ್ನ ಬಯಕೆ” ಎಂಬುದಾಗಿ 37 ವರ್ಷದ ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌ ಹೇಳಿದರು.

ಮುಂಬರುವ ಪ್ರತಿಷ್ಠಿತ ಆ್ಯಶಸ್‌ ಸರಣಿಗೂ ಮೊದಲೇ, ಆಸ್ಟ್ರೇಲಿಯ ಕೈಯಿಂದ ಆ್ಯಶಸ್‌ ಮರಳಿ ಪಡೆಯುವ ಯೋಜನೆಯಲ್ಲಿರುವಾಗಲೇ ಕ್ಯಾಥರಿನ್‌ ಸ್ಕಿವರ್‌ ಬ್ರಂಟ್‌ ನಿವೃತ್ತಿಯ ನಿರ್ಧಾರಕ್ಕೆ ಬಂದದ್ದು ಇಂಗ್ಲೆಂಡ್‌ಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ “ದ ಹಂಡ್ರೆಡ್‌’ ಪಂದ್ಯಾವಳಿಯಲ್ಲಿ ಇನ್ನೂ ಒಂದು ಋತುವಿನಲ್ಲಿ ಆಡುವ ಯೋಜನೆ ಹಾಕಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next