ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಹಾಲಿ ತಿಂಗಳ ಕೊನೆಯ ವಾರದ ಆರಂಭದ ದಿನ ಹೂಡಿಕೆದಾರರ ಮೊಗದಲ್ಲಿ ಸಂತಸ ತಂದಿದೆ.
ದಿನಾಂತ್ಯಕ್ಕೆ ಬಿಎಸ್‌ಇ ಸೂಚ್ಯಂಕ 433.30 ಏರಿಕೆಯಾಗಿ 53,161.28ರಲ್ಲಿ ಮುಕ್ತಾಯವಾಗಿದೆ.
ಜೂ. 10ರ ಬಳಿಕ ಇದು ಗರಿಷ್ಠ ಪ್ರಮಾಣದ ಏರಿಕೆ ಯಾಗಿದೆ. ಮಧ್ಯಂತರದಲ್ಲಿ 781.52 ಪಾಯಿಂಟ್ಸ್ ವರೆಗೆ ಏರಿಕೆಯಾಗಿತ್ತು.
ಕಳೆದ ಗುರುವಾರ, ಶುಕ್ರವಾರ ಮತ್ತು ಜೂ. 27- ಹೀಗೆ ಮೂರು ದಿನ ಗಳಲ್ಲಿ ಬಿಎಸ್‌ಇ ಸೂಚ್ಯಂಕ 1,378 ಪಾಯಿಂಟ್ಸ್ ಏರಿಕೆಯಾಗಿದೆ.
ನಿಫ್ಟಿ ಸೂಚ್ಯಂಕ ಕೂಡ 132.80 ಪಾಯಿಂಟ್ಸ್ ಏರಿಕೆಯಾಗಿ 15,832.05ರಲ್ಲಿ ಮುಕ್ತಾಯವಾಗಿದೆ. ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾದದ್ದು, ಅಮೆರಿಕದ ಡಾಲರ್ ಮೌಲ್ಯ ವೃದ್ಧಿಯಾದದ್ದು ಸೇರಿದಂತೆ ಹಲವು ಧನಾತ್ಮಕ ಬೆಳವಣಿಗೆಗಳಿಂದ ಈ ಚೇತರಿಕೆ ಕಂಡಿದೆ.
ಜಗತ್ತಿನ ಹಲವು ಷೇರು ಪೇಟೆಗಳಲ್ಲೂ ಧನಾತ್ಮಕ ವಹಿವಾಟು ನಡೆದಿದೆ.
ಐರೋಪ್ಯ ಒಕ್ಕೂಟ, ಚೀನ ಮತ್ತು ಅಮೆರಿಕಗಳಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಕುಸಿದ ಕಾರಣ ಕಚ್ಚಾ ತೈಲದ ಬೆಲೆ ಮತ್ತಷ್ಟು ಇಳಿಕೆಯಾಗಲಿದೆ.
ಬಿಎಸ್‌ಇ ಸೂಚ್ಯಂಕ ಏರಿಕೆಯಾದರೂ, ಅಮೆರಿಕದ ಡಾಲರ್ ಎದುರು ದಿನಾಂತ್ಯಕ್ಕೆ ರೂಪಾಯಿ 4 ಪೈಸೆ ಕುಸಿತ ಕಂಡು, 78.37 ರೂ.ಗಳಿಗೆ ಮುಕ್ತಾಯವಾಗಿದೆ.