ಹುಬ್ಬಳ್ಳಿ: ಮನುಷ್ಯ ಭೌತಿಕ ಸಂಪತ್ತು ಹೊಂದಿದ್ದರೂ ಮಾನಸಿಕ ಶಾಂತಿ ಸಮಾಧಾನಗಳಿಲ್ಲ. ಧಾರ್ಮಿಕ ಮೌಲ್ಯಗಳ ಸಂರಕ್ಷಣೆ ಮತ್ತು ಪರಿಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣಗೊಳಲು ಸಾಧ್ಯ. ಈ ದಿಶೆಯಲ್ಲಿ ಮಠಗಳು ಜನಸಮುದಾಯದಲ್ಲಿ ಶಾಂತಿ-ನೆಮ್ಮದಿ ಬೆಳೆಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ| ವೀರಸೋಮೇÍ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ದ್ಯಾಮನಕೊಪ್ಪ ಹುಲಕೊಪ್ಪದ ಹೋಟೇಶ್ವರ ಹಿರೇಮಠ ರಂಭಾಪುರಿ ಪೀಠದ ಶಾಖಾ ಮಠವಾಗಿದೆ. ಹಲವು ವರ್ಷಗಳಿಂದ ನಿಂತು ಹೋದ ಗುರು ಪರಂಪರೆ ಮತ್ತೆ ಪುನರುತ್ಥಾನಗೊಳ್ಳುತ್ತಿರುವುದು ಸಂತಸದ ಸಂಗತಿ. ಪರಿಪಕ್ವಗೊಂಡ 85 ವಯಸ್ಸಿನ ಶ್ರೀ ಬಸವರಾಜ ಸ್ವಾಮಿಗಳವರಿಗೆ ಶ್ರೀ ಶಿವರಾಮ ಶಿವಾಚಾರ್ಯ ಸ್ವಾಮಿಗಳು ಎಂಬ ನೂತನ ನಾಮಾಂಕಿತದಿಂದ ಶ್ರೀಗುರು ಪಟ್ಟಾಧಿಕಾರ ನೆರವೇರಿದ್ದು ಭಕ್ತ ಸಂಕುಲಕ್ಕೆ ಹರುಷ ತಂದಿದೆ ಎಂದರು. ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀಗಳು ನೂತನ ಸ್ವಾಮಿಗಳಿಗೆ ಧಾರ್ಮಿಕ ಸಂಸ್ಕಾರ ನೀಡಿ ಷಟ್ಸ್ಥ§ಲ ಬ್ರಹ್ಮೋಪದೇಶ ನೀಡಿ ಗುರುತ್ವಾಧಿಕಾರ ಅನುಗ್ರಹಿಸಿದರು. ಕಲಘಟಗಿ ಹನ್ನೆರಡು ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಿರಕೋಳ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು.
ನೂತನವಾಗಿ ಪಟ್ಟಾಭಿಷಿಕ್ತರಾದ ಶಿವರಾಮ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳವರ ಆದೇಶದಂತೆ ಮುನ್ನಡೆದು ವೀರಶೈವ ಧರ್ಮಸಂಸ್ಕೃತಿ ಮತ್ತು ಗುರುಪರಂಪರೆ ಬೆಳೆಸುವುದಾಗಿ ಸಂಕಲ್ಪ ಕೈಗೊಂಡರು. ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಜಿ.ವಿ. ಹಿರೇಮಠ ನಿರೂಪಿಸಿದರು.
Advertisement
ಕಲಘಟಗಿ ತಾಲೂಕಿನ ದ್ಯಾಮನಕೊಪ್ಪ ಹುಲಕೊಪ್ಪದ ಶ್ರೀ ಹೋಟೇಶ್ವರ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸತ್ಯ ಶುದ್ಧವಾದ ಬದುಕಿಗೆ ಸಂಸ್ಕಾರ ಸಂಸ್ಕೃತಿ ಮುಖ್ಯ. ವೀರಶೈವ ಧರ್ಮದ ಮಠಗಳು ಸಂಸ್ಕಾರ ಸಂವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತ ಬಂದಿವೆ. ತತ್ವಕ್ಕಿಂತ ಆಚರಣೆಗೆ ಪ್ರಾಮುಖ್ಯತೆ ಕೊಟ್ಟ ಧರ್ಮ ಕಾಯಕ ದಾಸೋಹದ ಮೂಲಕ ಬದುಕಿನ ಉನ್ನತಿಗೆ ಕಾರಣವಾಗಿದೆ. ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತವನ್ನು ಬೋಧಿಸಿ ಭಕ್ತರ ಬಾಳಿಗೆ ಬೆಳಕು ತೋರಿದ್ದಾರೆ. ತತ್ವತ್ರಯಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುñ್ತದೆ ಎಂದು ಹೇಳಿದರು.