Advertisement

Bantwal ಮಹಿಳೆ ನೇಣು ಬಿಗಿದು ಆತ್ಮಹತ್ಯೆ

12:46 AM May 18, 2024 | Team Udayavani |

ಬಂಟ್ವಾಳ: ಬಡಗಬೆಳ್ಳೂರಿನ ವರಟೀಲುವಿನಲ್ಲಿ ಮಹಿಳೆಯೊಬ್ಬರು ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ.

Advertisement

ವರಟೀಲು ನಿವಾಸಿ ಇಂದಿರಾ ಕುಲಾಲ್ (42) ಆತ್ಮಹತ್ಯೆ ಮಾಡಿಕೊಂಡವರು. ಮಹಿಳೆಯು ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪತಿಯ ಜತೆಗೂಡಿ ಕುಡಿತದ ಚಟ ಹೊಂದಿದ್ದರು. ಹೀಗಾಗಿ ಅವರ ಇಬ್ಬರು ಮಕ್ಕಳು ಪಕ್ಕದಲ್ಲೇ ಇರುವ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಮೃತ ಮಹಿಳೆಯು ಪುತ್ರನಲ್ಲಿ ಹಣ ಕೇಳಿದ್ದು, ಹೀಗಾಗಿ ಹಣ ನೀಡಲು ಹೋದಾಗ ಆಕೆ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ಮಹಿಳೆಯ ಪುತ್ರಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next