Advertisement
ಗರಿಕೆಮಠ ಅರ್ಕಗಣಪತಿ ದೇವಸ್ಥಾನದ ಮುಖ್ಯಸ್ಥ ರಾಮ್‌ಪ್ರಸಾದ್ ಅಡಿಗ ಕಾರ್ಯಕ್ರಮ ಉದ್ಘಾಟಿಸಿ, ಸಂಘಟನೆ ಮೂಲಕ ಮಾಡುವ ಸೇವೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಹಾಗೂ ಮಾನಸಿಕ ನೆಮ್ಮದಿ ದೊರೆಯುತ್ತದೆ. ಜನನಿ ಯುವ ಕನ್ನಡ ಸಂಘವು ಉಚಿತ ಆ್ಯಂಬುಲೆನ್ಸ್ ಸೇವೆಯ ಮೂಲಕ ಜೀವ ಉಳಿಸುವ ಪುಣ್ಯ ಕಾರ್ಯ ಮಾಡುತ್ತಿದೆ ಎಂದರು.
Related Articles
ಈ ಸಂದರ್ಭ ಶತಾಯುಷಿ ಪುಟ್ಟ ನಾಯ್ಕ ಯಡ್ತಾಡಿ ಅವರನ್ನು ಸಮ್ಮಾನಿಸಲಾಯಿತು. ಪ್ರತಿಭಾÌನಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯಧನವನ್ನು ವಿತರಿಸಲಾಯಿತು. ಸಂಸ್ಥೆಯ ಉಚಿತ ಆ್ಯಂಬುಲೆನ್ಸ್‌ನ ಚಾಲಕರಾಗಿ ಸಹರಿಸಿದ ಶೇಖರ ಪೂಜಾರಿ, ವೈಕು. ಸುಂದರ್ ಎತ್ತಿನಟ್ಟಿ, ಜಯರಾಮ ಮರಕಾಲ, ದಿನೇಶ ಪೂಜಾರಿ, ಅಮೃತ್ ಪೂಜಾರಿ, ದಿನೇಶ ಕುಮಾರ್, ಶ್ರೀನಿವಾಸ್ ನಾಯ್ಕ, ರಾಘವೇಂದ್ರ ನಾಯಕ್ ಅವರನ್ನು ಸಮ್ಮಾನಿಸಲಾಯಿತು.
Advertisement
ಸಂಸ್ಥೆಯ ಆ್ಯಂಬುಲೆನ್ಸ್ ನಿರ್ವಹಣೆಗೆ ದಾನಿಗಳಾದ ಶಿರಿಯಾರ ಫ್ರೆಂಡ್ಸ್‌ನ ಎಂ.ಕೆ.ಗಣೇಶ್, ವಿನಯ್ ಪೂಜಾರಿ, ಅಶೋಕ್ ಆಚಾರ್ ಸಾೖಬ್ರಕಟ್ಟೆ ಹಾಗೂ ಶ್ರೀನಿವಾಸ್ ಹೆಗ್ಡೆ 20ಸಾವಿರ ಸಹಾಯಧನ ಹಾಗೂ ಉದ್ಯಮಿ ಗೋಪಾಲಕೃಷ್ಣ ಶೆಟ್ಟಿ ಕೊಳ್ಕೆಬೈಲು 25 ಸಾವಿರ, ಅಶೋಕ್ ಪ್ರಭು ಸಾೖಬ್ರಕಟ್ಟೆ 10ಸಾವಿರ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಉದ್ಯಮಿ ಪ್ರಸಾದ್ ಆರ್. ಭಟ್ ಅವರು ಸಹಾಯಧನ ನೀಡಿದರು. ಕಟಿಲೇಶ್ವರೀ ಬಾಟಿÉಂಗ್ ಕಂಪನಿಯ ಶಿವರಾಮ ಕೊಠಾರಿ ಆ್ಯಂಬುಲೆನ್ಸ್‌ನ ಸರ್ವೀಸ್ ವೆಚ್ಚವನ್ನು ಹಾಗೂ ರವೀಂದ್ರನಾಥ ಕಿಣಿ ವಿಮಾ ಮೊತ್ತವನ್ನು ನೀಡುವುದಾಗಿ ಘೋಷಿಸಿದರು.
ದಾನಿಗಳಾದ ಉದ್ಯಮಿ ಕೊಳ್ಕೆಬೆ„ಲು ಗೋಪಾಲಕೃಷ್ಣ ಶೆಟ್ಟಿ, ಬೆಳ್ವೆ ಸತೀಶ್ ಕಿಣಿ, ಶಿವರಾಮ ಕೊಠಾರಿ, ಯಡ್ತಾಡಿ ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಮುಂತಾದವರು ಉಪಸ್ಥಿತರಿದ್ಧರು.
ಸಂಘದ ಗೌರವಾಧ್ಯಕ್ಷ ಎಂ.ರವೀಂದ್ರನಾಥ ಕಿಣಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಆನಂದ ಪ್ರಸ್ತಾವಿಕ ಮಾತನಾಡಿ, ರಾಘವೇಂದ್ರ ಹೆಸ್ಕೂತ್ತೂರು, ವಸಂತ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಸುರೇಶ ಭಟ್ ವಂದಿಸಿದರು.