Advertisement

ಉತ್ತಮ ಸೇವೆಯೇ ಜನಮಾನಸದಲ್ಲಿ ಚಿರಾಯು

12:50 PM Jul 03, 2018 | |

ತಿ.ನರಸೀಪುರ: ಸರ್ಕಾರಿ ನೌಕರರಿಗೆ ವೃತ್ತಿ ಮತ್ತು ನಿವೃತ್ತಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಸೇವಾ ಅವಧಿಯಲ್ಲಿ ಸಾರ್ವಜನಿಕರಿಗೆ ಸಲ್ಲಿಸುವ ಉತ್ತಮ ಸೇವೆಯೇ ಜನಮಾನಸಲ್ಲಿ ಚಿರಾಯುವಾಗಿ ಉಳಿಯಲಿದೆ ಎಂದು ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಹೇಳಿದರು.

Advertisement

ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ ನಿವೃತ್ತಿಗೊಂಡ ಬಿಸಿಯೂಟ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಮಾತನಾಡಿ, ಸರ್ಕಾರಿ ನೌಕರ ಅಥವಾ ಅಧಿಕಾರಿಯಾಗಿ ನಿಗಧಿತ ಹುದ್ಧೆಗೆ ನಿಯೋಜನೆಗೊಳ್ಳುವ ಪ್ರತಿಯೊಬ್ಬರೂ ಕೂಡ ಸವಾಲು ಮತ್ತು ಸಮಸ್ಯೆಗಳನ್ನು ಶಾಲ ಮನೋಭಾವದಿಂದ ಸ್ವೀಕರಿಸಿ ಕೆಲಸ ಮಾಡಿದರೆ ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗುತ್ತದೆ ಎಂದರು.

ಶಾಸಕಾಂಗದ ನಂತರ ಹೆಚ್ಚಿನ ಜವಾಬ್ದಾರಿ ಇರುವುದು ಕಾರ್ಯಾಂಗದ ಮೇಲೆ ಇರುವುದರಿಂದ ಸರ್ಕಾರಿ ನೌಕರೆಲ್ಲರೂ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಬೇಕು. ಸಾಧ್ಯವಾದಷ್ಟು ಜನರ ಕೆಲಸವನ್ನು ಮಾಡಿಕೊಟ್ಟರೆ ಯಾವುದೇ ಚುನಾಯಿತ ಜನಪ್ರತಿನಿಧಿ ಬಳಿ ದೂರುವುದಿಲ್ಲ.

ಪ್ರಾಥಮಿಕ ಹಂತದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿದಾಗ ಸಾರ್ವಜನಿಕರು ಮತ್ತು ಸಹದ್ಯೋಗಿಗಳ ವಿಶ್ವಾಸವನ್ನು ಗಳಿಸಬಹುದು. ಈ ದೆಸೆಯಲ್ಲಿ ಅಕ್ಷರ ದಾಸೋಹ ಅಧಿಕಾರಿಯಾಗಿದ್ದ ಮಲ್ಲಿಕಾರ್ಜುನ ಅವರು ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿದ್ದಾರೆ ಎಂದು ತಿಳಿಸಿದರು.

ನರಸೀಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಆರ್‌.ಗಂಗಾಧರ್‌ ಮಾತನಾಡಿ, ಬಿಸಿಯೂಟ ನಿರ್ವಹಣೆ ಸೇರಿದಂತೆ ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿರುವ ಮಲ್ಲಿಕಾರ್ಜುನ ಅವರು ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ. ಅಕ್ಷರ ದಾಸೋಹ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಹೆಚ್ಚಿನ ಶ್ರಮ ಹಾಕಿದ್ದರು. ಅವರ ನಿವೃತ್ತಿ ಬದುಕು ಕ್ರಿಯಾಶೀಲತೆಯಿಂದ ಇರಲಿ ಎಂದು ಶುಭ ಹಾರೈಸಿದರು. 

Advertisement

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ..ಶಿವಶಂಕರಮೂರ್ತಿ, ಬಿಆರ್‌ಸಿ ಜೆ.ಮಂಜುಳಾ, ದೈಹಿಕ ಪರೀಕ್ಷಣಾಧಿಕಾರಿ ಸಂಪತ್‌ ದೊರೈರಾಜ್‌, ಪ್ರಭಾರ ಬಿಸಿಯೂಟ ಸಹಾಯಕ ನಿರ್ದೇಶಕ ಮಂಟೇಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ರಾಜ್ಯ ಉಪಾಧ್ಯಕ್ಷ ಕುಪ್ಯ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ಸಿಆರ್‌ಪಿ ಸೋಸಲೆ ನಾಗೇಶ,

ಪಿಯು ಪ್ರಾಂಶುಪಾಲ ಮೋಹನ್‌, ನಿವೃತ್ತ ಪ್ರಾಂಶುಪಾಲ ಟಿ.ಆರ್‌.ಜಯರಾಮು, ಶಿಕ್ಷಣ ಸಂಯೋಜಕರಾದ ವೀರಭದ್ರಯ್ಯ, ಧನರಾಜ್‌, ನಂಜುಂಡಸ್ವಾು, ಬಿಆರ್‌ಪಿ ಶಂಕರ್‌, ಚಂದ್ರು, ಶಿವಕುಮಾರ್‌, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಹೆಚ್‌.ಡಿ.ಮಾದಪ್ಪ, ದೈಹಿಕ ಶಿಕ್ಷಕರಾದ ಪುಟ್ಟರಾಜು, ಬಿ.ಶಶಿಧರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next