Advertisement
ಉತ್ತಮ ರಸ್ತೆಯಿದ್ದರೂ, ವಾಹನಗಳು ಬಂದರೆ ಪಾದಚಾರಿಗಳು ಒದ್ದೆಯಾಗು ವುದು ಖಚಿತ. ಇಲ್ಲಿ ನೀರು ಕಾಂಕ್ರೀಟ್ ರಸ್ತೆಯಲ್ಲೇ ಹೋಗಬೇಕಿದೆ.
ವಾರ್ಡ್‌ನ ರಸ್ತೆಗಳಲ್ಲಿ ಹೋಗು ತ್ತಿದ್ದಂತೆ ಕಾಣುತ್ತಿದ್ದುದು ಮಾತ್ರ ಚರಂಡಿಯಿಲ್ಲದ ರಸ್ತೆ. ವಾರ್ಡ್ ಎಷ್ಟೇ ಅಭಿವೃದ್ಧಿ ಯಾಗಿದ್ದರೂ, ಜನರಿಗೆ ಎಷ್ಟೇ ಉತ್ತಮ ಸೌಲಭ್ಯಗಳು, ಸೌಕರ್ಯಗಳು ದೊರೆತಿದ್ದರೂ ನೀರೆಲ್ಲ ರಸ್ತೆಯಲ್ಲಿಯೇ ಹರಿಯುವುದು ಕಾಣುತ್ತದೆ. ಇದು ಇಡೀ ವಾರ್ಡಿನ ಹೆಸರಿಗೆ ಒಂದು ಕಪ್ಪುಚುಕ್ಕೆ. ಇಲ್ಲಿ ಚರಂಡಿ ಮಾಡಲು ಅವಕಾಶವೇ ಇಲ್ಲದಂತೆ ರಸ್ತೆ ಆವರಿಸಿದೆ. ರಸ್ತೆಯ ಇಕ್ಕೆಲದಲ್ಲಿ ಕಂಪೌಂಡ್ ಗೋಡೆಗಳಿವೆ. ಹಾಗಾಗಿ ಚರಂಡಿ ಕೆಲಸ ಬಾಕಿ
ಆಗಿರಬಹುದು. ಕಾಂಕ್ರೀಟ್ ರಸ್ತೆ ಮಾಡಿದ ಕಾರಣ ಕಾಂಕ್ರಿಟ್ ರಸ್ತೆಯಡಿ ಭಾಗದಲ್ಲಿ ಚರಂಡಿ ಮಾಡಿ ಅದರ ಮೇಲೆ ಗಟ್ಟಿ ಸ್ಲಾéಬ್ ಹಾಕುವ ಮೂಲಕ ನೀರಿನ ಸರಾಗ ಹರಿವಿಗೆ ವ್ಯವಸ್ಥೆ ಮಾಡಬಹುದಿತ್ತು. ಮಳೆ ಬಂದರೆ ಸಮಸ್ಯೆ
ಚರಂಡಿ ಇಲ್ಲದ್ದರಿಂದ ನೀರು ಆಸುಪಾಸಿನ ಮನೆಗಳಿಗೆ ಬಾರದಂತೆ ತಡೆ ಇಲ್ಲ. ಮಳೆ ನೀರು ತಡೆಯಲು ನಿವಾಸಿಗಳಿಗೆ ಪ್ರಾರ್ಥನೆಯೊಂದಷ್ಟೇ ಇದೆ. ಇಲ್ಲಿ ಘನ ವಾಹನ ಸಂಚರಿಸುವುದಿಲ್ಲ. ಆದ್ದರಿಂದ ಚರಂಡಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದಿತ್ತು ಎನ್ನುತ್ತಾರೆ ಸ್ಥಳೀಯರು. ಇದೇ ರಸ್ತೆಯಲ್ಲಿ ಮುಂದೆ ಸಾಗಿದಂತೆ ಆದಿಶಕ್ತಿ ಕಾಳಿ ದೇವಸ್ಥಾನವಿದೆ. ಅಲ್ಲಿಗೂ ಭಕ್ತರು ಆಗಮಿಸುತ್ತಾರೆ. ಆದರೆ ಮಳೆ ಬಂದರೆ ಇದೇ ತೊಂದರೆಯಾಗಿದೆ. ಇಲ್ಲಿನ ಆಡಳಿತ ಚರಂಡಿ ವ್ಯವಸ್ಥೆಗೆ ಅನುದಾನ ಬಿಡುಗಡೆ ಮಾಡುವ ಮೂಲಕ ಈ ಪ್ರದೇಶದ ಜನರ ಗೋಳು ನಿವಾರಿಸಬೇಕಿದೆ.
Related Articles
ನಾನು ಸುಮಾರು 20 ಮನೆಗಳಿಗೆ ತೊಂದರೆಯಾಗದಂತೆ ಕ್ರಮ ತೆಗೆದು ಕೊಂಡಿದ್ದೇನೆ. ಚರಂಡಿ ರಚನೆಗೆ ಅತಿಕ್ರಮಣವಾದ ಜಾಗದ ಸಮಸ್ಯೆ ಇದ್ದು ಜನರ ಸಹಕಾರವಿದ್ದರೆ ಕಾಮಗಾರಿ ನಡೆಸಲಾಗುವುದು.
– ನಾಗರಾಜ್ ಕಾಮಧೇನು, ವಾರ್ಡ್ ಸದಸ್ಯರು
Advertisement
ಚರಂಡಿ ಇಲ್ಲರಸ್ತೆಯ ಎರಡೂ ಬದಿ ಚರಂಡಿ ಇಲ್ಲ. ಹಾಗಾಗಿ ಮಳೆ ನೀರು ಮನೆಯಂಗಳಕ್ಕೆ ಬರುತ್ತದೆ ಅಥವಾ ರಸ್ತೆಯಲ್ಲಿಯೇ ಹರಿದು ನಡೆದಾಡಲೂ ತ್ರಾಸ ಪಡುವಂತಾಗುತ್ತದೆ. ಸ್ವಲ್ಪ ಗಮನ ನೀಡಿದರೆ ಒಳಿತು.
– ಜಯಂತಿ, ಸ್ಥಳೀಯರು – ಲಕ್ಷ್ಮೀ ಮಚ್ಚಿನ