Advertisement

ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ ಉತ್ತಮ ರಸ್ತೆ ನಿರ್ಮಾಣ

03:07 PM Sep 27, 2019 | Team Udayavani |

ದೇವನಹಳ್ಳಿ: ಕೇಂದ್ರ ಸರ್ಕಾರ ಒಂದೆಡೆ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದು, ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಆದರೆ, ಈಗ ಇದೇ ಪ್ಲಾಸ್ಟಿಕ್‌ ಬಳಸಿ ರಸ್ತೆ ನಿರ್ಮಿಸಲು ಬಿಐಎಎಲ್‌ ಮುಂದಾಗಿದೆ.ಇದಕ್ಕಾಗಿ ಪ್ಲಾಸ್ಟಿಕ್‌ ಬೇಕು ಚಳವಳಿ ಅಭಿಯಾನ ಕೈಗೊಂಡಿದೆ.

Advertisement

ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಐಎಎಲ್‌ನ ಮುಖ್ಯ ಯೋಜನಾಧಿಕಾರಿ ಟಾಮ್‌ ಶಿಮಿನ್‌, ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ 50 ಕಿ.ಮೀ. ದ್ವಿಪಥ ರಸ್ತೆ ನಿರ್ಮಿಸಲಾಗುವುದು.ಈ ಯೋಜನೆ ದೇಶದಲ್ಲೇ ಪ್ರಥಮವಾಗಿದ್ದು, ಇದಕ್ಕೆ ಐಟಿಸಿ ಹಾಗೂ ಬಿಗ್‌ಎಫ್ ಕೈ ಜೋಡಿಸಿವೆ ಎಂದು ತಿಳಿಸಿದರು. ಪ್ಲಾಸ್ಟಿಕ್‌ ಬೇಕು ಯೋಜನೆ ಬಗ್ಗೆ ಬೆಂಗಳೂರಿನ ನಾಗರಿಕರಲ್ಲಿ ಅರಿವು ಮೂಡಿಸಿ ಪ್ಲಾಸ್ಟಿಕ್‌ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.

ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್‌ ಅನ್ನು ಸಂಗ್ರಹಿಸಿ ರಸ್ತೆಗೆ ಉಪಯೋಗಿಸುತ್ತಿದ್ದೇವೆ. ಬಿಐಎಎಲ್‌ ದತ್ತು ಪಡೆದಿರುವ ಶಾಲೆಗಳಾದ ಬೆಟ್ಟಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಿಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಮಾದರಿ ಶಾಲೆ ಮತ್ತು ಅರ್ದೇಶನ ಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ದೇವನಹಳ್ಳಿ ತಾಲೂಕಿನ ಐದು ಗ್ರಾಪಂಗಳಲ್ಲಿ ಪ್ಲಾಸ್ಟಿಕ್‌ ಸಂಗ್ರಹಣೆ ಕುರಿತು ಜಾಗೃತಿ ಹಾಗೂ ಸಂಗ್ರಹಣಾ ಅಭಿಯಾನ ನಡೆಯಲಿದೆ.ಉತ್ತರ ಬೆಂಗಳೂರಿನ ಖಾಸಗಿ ಶಾಲೆಗಳು ಮತ್ತು ನಿವಾಸಿಗಳ ಕಲ್ಯಾಣ ಸಂಸ್ಥೆಗಳಲ್ಲಿ ಕೂಡ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಎರಡನೇ ಹಂತದಲ್ಲಿ ಬೆಂಗಳೂರಿನ 20ಕ್ಕೂ ಹೆಚ್ಚಿನ ಶಾಲೆಗಳಲ್ಲಿ ಪ್ಲಾಸ್ಟಿಕ್‌ ಸಂಗ್ರಹಣಾ ಅಭಿಯಾನವನ್ನು ವಿಸ್ತರಿಸಲಿದ್ದೇವೆ. ವಿಶ್ವ(ಬೆಟರ್‌ ವರ್ಲ್ಡ್) ಕಾರ್ಯಕ್ರಮದ ಮೂಲಕವೂ ಪ್ಲಾಸ್ಟಿಕ್‌ ಸಂಗ್ರಹಣೆ ಮಾಡಲಾಗುತ್ತದೆ. ಸನ್ ಫೀಸ್ಟ್ ಯಿಪ್ಪೀ ನೂಡಲ್ಸ್‌ ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಕ್ಕಾಗಿ ಒಂದು ಟನ್‌ ಪ್ಲಾಸ್ಟಿಕ್‌ ಕೊಡುಗೆ ನೀಡಲಿದೆ ಎಂದು ತಿಳಿಸಿದರು.

ಬಿಐಎಎಲ್‌ ಈ ಅಭಿಯಾನದ ಮೂಲಕ ಸಂಗ್ರಹಿಸಲಾದ ಪ್ಲಾಸ್ಟಿಕ್‌ ತ್ಯಾಜ್ಯನವನ್ನು ವಿಮಾಣ ನಿಲ್ದಾಣದ ಆವರಣದಲ್ಲಿ ರಸ್ತೆಗಳನ್ನು ನಿರ್ಮಿಸಲು ಬಳಸಲಿದ್ದೇವೆ. ಪ್ಲಾಸ್ಟಿಕ್‌ ಮತ್ತು ಬಿಟುಮನ್‌ಗಳನ್ನು ಬಳಸಿ ಪ್ರಯೋಗಾರ್ಥ ರಸ್ತೆನಿರ್ಮಾಣ ಯಶಸ್ವಿಯಾದ ನಂತರ ಬಿಐಎಎಲ್‌, ಪಾಲಿಮರೈಸ್ಡ್ ರಸ್ತೆಗಳ ನಿರ್ಮಾಣ ನಡೆಸಲು ನಿರ್ಧರಿಸಿದೆ. ಈ ರಸ್ತೆಗಳು ದೃಢವಾದ ಹಿಡಿತದ ಸಾಮರ್ಥ್ಯ ಹೊಂದಿದ್ದು, ತೀವ್ರ ರೀತಿಯ ವಾತಾವರಣ ಸ್ಥಿತಿಗಳನ್ನು ತಡೆದುಕೊಳ್ಳಬಲ್ಲವು. ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿ ಈ ರಸ್ತೆಗಳು ಆಕ್ಸ್‌ಪಾಲ್ಟ್ ರಸ್ತೆಗಳಿಗಿಂತಲೂ ದೀರ್ಘ‌ಕಾಲ ಬಾಳಿಕೆ ಬರಲಿವೆ ಎಂದು ನಿರೀಕ್ಷಿಸಲಾಗಿದೆ.

Advertisement

ಐಟಿಸಿ ಲಿಮಿಟೆಡ್‌ನ‌ ತಿಂಡಿತಿನಿಸುಗಳ ವ್ಯವಹಾರದ ಮುಖ್ಯ ಕಾರ್ಯಾಚರಣೆ ಅಧಿಕಾರಿ ಕವಿತಾ ಚರ್ತುವೇದಿ ಮಾತನಾಡಿ,ಬಿಗ್‌ ಎಫ್‌ಎಂನ ಉತ್ಪನ್ನ, ಮಾರುಕಟ್ಟೆ ಮತ್ತು ಥ್ವಿಂಕ್‌ ಬಿಗ್‌ ವಿಭಾಗದ ರಾಷ್ಟ್ರೀಯ ಮುಖ್ಯಸ್ಥರಾದ ಸುನೀಲ್‌ ಕುಮರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next