Advertisement

ಮಾಥೆರಾನ್‌ ಗಿರಿಧಾಮದ ಟಾಯ್‌ ರೈಲಿಗೆ ಉತ್ತಮ ಪ್ರತಿಕ್ರಿಯೆ

05:19 PM Mar 23, 2021 | Team Udayavani |

ಮುಂಬಯಿ: ಮಾಥೆರಾನ್‌ ಗಿರಿಧಾಮದಲ್ಲಿರುವ ಟಾಯ್‌ ರೈಲಿನಲ್ಲಿ 2020ರ ನವೆಂಬರ್‌ನಿಂದ 1,00,000ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿರುವುದಾಗಿ ಮಧ್ಯ ರೈಲ್ವೇ ತಿಳಿಸಿದೆ.

Advertisement

ನೆರಲ್‌ ಮತ್ತು ಮಾಥೆರನ್‌ ಗಿರಿಧಾಮದ ನಡುವೆ ಚಲಿಸಲಿರುವ ಟಾಯ್‌ ರೈಲು ಪ್ರಸ್ತುತ ಮಾಥೆರಾನ್‌ ಮತ್ತು ಅಮನ್‌ ಲಾಡ್ಜ್ ರೈಲ್ವೇ ನಿಲ್ದಾಣಗಳ ನಡುವೆ ಕಾರ್ಯನಿರ್ವಹಿಸುತ್ತಿದ್ದು, ಮಧ್ಯ ರೈಲ್ವೇ ಪ್ರಯಾಣಿಕರು ಮತ್ತು ನೆರಲ್‌ ನಿವಾಸಿಗಳ ಬೇಡಿಕೆಯ ಬಳಿಕ ಟಾಯ್‌ ರೈಲು ಸೇವೆಗಳನ್ನು ಪುನರಾರಂಭಿಸಿತು. ಟಾಯ್‌ ರೈಲು ಸೇವೆಗಳ ಟಿಕೆಟ್‌ ಮಾರಾಟದಿಂದ 67 ಲಕ್ಷ ರೂ. ಗಳಿಗೂ ಹೆಚ್ಚು ಲಾಭ ಗಳಿಸಲಾಗಿದೆ. ಮಾಥೆರಾನ್‌ ಮತ್ತು ಅಮನ್‌ ಲಾಡ್ಜ್ ರೈಲ್ವೇ ನಿಲ್ದಾಣಗಳ ನಡುವೆ ಪ್ರಯಾಣಿಸುವವರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿರುವುದಾಗಿ ಕೇಂದ್ರ ರೈಲ್ವೇ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಜನವರಿಯಲ್ಲಿ ರೈಲಿನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಫೆಬ್ರವರಿಯಲ್ಲಿ ಮತ್ತೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಜನವರಿಯಲ್ಲಿ ಟಾಯ್‌ ರೈಲಿನ ಮೂಲಕ ಸುಮಾರು 33,515 ಮಂದಿ ಪ್ರಯಾಣಿಸಿದರೆ, ಫೆಬ್ರವರಿಯಲ್ಲಿ 20,548 ಮಂದಿ ಪ್ರಯಾಣಿಸಿದ್ದು, ಮಾ. 15ರ ವರೆಗೆ 11,507 ಮಂದಿ ಸಹಿತ ಒಟ್ಟು 1,10,702 ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸಿದ್ದಾರೆ.

ಈ ರೈಲು ಸೇವೆಯ ಆರಂಭದಲ್ಲಿ 2 ಟಾಯ್‌ ರೈಲುಗಳನ್ನು ಅಮನ್‌ ಲಾಡ್ಜ್ ಮತ್ತು ಮಾಥೆರಾನ್‌ ನಡುವೆ ಓಡಿಸಲಾಯಿತು. ಬಳಿಕ 4 ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸಲಾಯಿತು. ಈ ಹಿಂದೆ ಮಧ್ಯ ರೈಲ್ವೇ ಮಾಥೆರಾನ್‌ನ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಲು ಪಾರ್ಸೆಲ್‌ ರೈಲು ಸೇವೆಗಳನ್ನು ಪುನರಾರಂಭಿಸಿತ್ತು. ಕಳಪೆ ಪ್ರತಿಕ್ರಿಯೆಯ ಬಳಿಕ 2020ರ ಜೂ. 2 ರಂದು ಸೇವೆಗಳು ಸ್ಥಗಿತಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next