Advertisement
ನಗರದಲ್ಲಿ 2018ರ ಲಾಕ್ ಡೌನ್ ನಲ್ಲಿ ದಾವಣಗೆರೆಯ ಕೆಬಿಆರ್ ಡ್ರಾಮಾ ಕಂಪನಿಯ ನಾಟಕಕಾರ, ಕಲಾವಿದ ಚಿಂದೋಡಿ ಶ್ರೀಕಂಠೇಶ ಅವರು ನೋಡ್ಯಾಳ ರೊಕ್ಕ, ಬರತಾಳ ಪಕ್ಕ ನಾಟಕ ಬರೆದಿದ್ದರು. ಅದು ಈಗ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಹಾಕಿದ ನಾಟಕ ಟೆಂಟ್ ನಲ್ಲಿ ನಿತ್ಯ ಎರಡು ಪ್ರದರ್ಶನ ಕಾಣುತ್ತಿದೆ.
Related Articles
Advertisement
ಆಗ ಬಹುತೇಕ ಕಲಾವಿದರೆಲ್ಲ ಇಲ್ಲೇ ಉಳಿದರು. ಆ 2 ತಿಂಗಳ ಸಮಯದಲ್ಲಿ ಕಂಪನಿಯ ಯಜಮಾನರೂ ಆದ ಚಿಂದೋಡಿ ಶ್ರೀಕಂಠೇಶ ಅವರು ಈ ನಾಟಕ ಬರೆಯಲು ಆರಂಭಿಸಿದರು. ತಾಯಿಕೃಪೆ ಒಳ್ಳೆಪ್ರತಿಕ್ರಿಯೆ ಇದೆ ಎನ್ನುತ್ತಾರೆ ಶ್ರೀಕಂಠೇಶ.
ಹಲವಡೆ ಪ್ರದರ್ಶನ:
ನೋಡ್ಯಾಳ ರೊಕ್ಕ, ಬರ್ತಾಳ ಪಕ್ಕ ನಾಟಕ ಈಗಗಾಗಲೇ ಕೊಪ್ಪಳ ಸೇರಿದಂತೆ ಅನೇಕ ಕಡೆ ಪ್ರದರ್ಶನ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿಯದ್ದೂ ಸೇರಿಸಿ ಶಿರಸಿಯಲ್ಲಿ ಇದರ ಪ್ರದರ್ಶನ ಒಟ್ಟೂ 300 ದಾಟಿದೆ ಎಂಬುದು ಖುಷಿ ಎನ್ನುತ್ತಾರೆ ನಾಟಕಕಾರ, ಕಲಾವಿದ ಶ್ರೀಕಂಠೇಶ.
ಶ್ರೀಕಂಠೇಶ ಅವರು ಈ ಮೊದಲು ಹಿಂದೆ ನಿದ್ದೆಗೆಡಿಸ್ಯಾಳ ಬಸಲಿಂಗಿ, ಸಿಂಪಲ್ ಹುಡುಗ ಡಿಂಪಲ್ ಹುಡುಗಿ ನಾಟಕ ಬರೆದಿದ್ದರು. ಇದೀಗ ಈ ರಂಗ ಪ್ರಯೋಗ ಮೂರನೇ ಕೃತಿ 300 ಪ್ರದರ್ಶನ ದಾಟಿಸಿದೆ.
ಕೌಟುಂಬಿಕ ಕಥಾನಕ:
ನಿವೃತ್ತ ಅಂಚೆ ಅಧಿಕಾರಿ ಕುಟುಂಬ, ಮಗಳ ಮದುವೆ, ವರದಕ್ಷಿಣೆ, ಕಡ್ನಿ ಮಾರಾಟ ಸುತ್ತ ಇದೆ. ಒಂದೇ ಕಡೆ ಕಡ್ನಿ ಮಾರಾಟ, ಹಣ ಪಡೆದ ಬೀಗರು, ಮಧು ಮಕ್ಕಳ ಪ್ರಥಮ ರಾತ್ರಿ ದೃಶ್ಯವನ್ನು ಲೈಟಿಂಗ್ ಬೆಳಕಿನಲ್ಲಿ ಸಂಯೋಜಿಸಿದ್ದಾರೆ. ಹಾಸ್ಯ ಈ ನಾಟಕದ ವಿಶೆಷವಾಗಿದೆ. ಬೀಗರ ಪಾತ್ರವನ್ನು ವಿಶಿಷ್ಟವಾಗಿ ಕಟ್ಟಲಾಗಿದೆ.
ಚಲನಚಿತ್ರ ನಟ ವಿಜಯಕುಮಾರ ಕೂಡ ಪಾತ್ರ ಮಾಡುತ್ತಿದ್ದಾರೆ. ಚಿಂದೋಡಿ ವಿಜಯಕುಮಾರ್ ಜೊತೆ ಅಜಿತ್ ಕುಮಾರ, ರಾಘು, ಸಿ.ಕೆ.ಮಂದಾಕಿನಿ, ಸಿ.ವಿ.ದೀಪಾ, ಕಾಂಚನ, ಚಿಂದೋಡಿ ಶ್ರೀಕಂಠೇಶ, ಕಿಶೋರಕುಮಾರ, ಲಕ್ಷ್ಮೀ, ಆನಂದ ಇತರರು ರಂಗದಲ್ಲಿ ಇದ್ದಾರೆ.
ಅಪರೂಪದ ಕಥಾ ಹಂದರದ ನಾಟಕ. ಕಳೆದ ಲಾಕ್ ಡೌನ್ ವೇಳೆ ಬರೆದ ನಾಟಕ. ಇಡೀ ಕುಟುಂಬ ನರ್ತಿಸುವ ಹಾಡೂ ಇದೆ.–ಶ್ರೀಕಂಠೇಶ, ನಾಟಕಕಾರ
ಈ ನಾಟಕದಲ್ಲಿ ಹಾಸ್ಯ ಇಷ್ಟವಾಯಿತು. ಹೊಸತನ ಇತ್ತು.-ಮಧುರಾ ಭಟ್ಟ ಕಕ್ಕಳ್ಳಿ