Advertisement
ಅಸಮರ್ಪಕ ಮಳೆ ಕಾರಣದಿಂದಾಗಿ ಮೂರು ವರ್ಷಗಳ ಹಿಂದೆ ಅಂದರೆ 2017ರಲ್ಲಿ ಭೂಮಿಯ ಮೇಲಿನ ಬಹುತೇಕ ಜಲಮೂಲಗಳೆಲ್ಲ ಬತ್ತಿ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಹಾಹಾಕಾರ ಏಳುವಂತಾಗಿತ್ತು. ಕುಡಿಯುವ ನೀರು, ಕೃಷಿಗಾಗಿ ಕೆಲವು ಕಡೆಗಳಲ್ಲಿ ಕೊಳವೆಬಾವಿಗಳನ್ನು ಸಾವಿರ ಅಡಿವರೆಗೂ ಕೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಎರಡು ವರ್ಷ ಉತ್ತಮ ಮಳೆಯಾಗುವ ಜತೆಗೆ ಪ್ರಸಕ್ತ ವರ್ಷ ಸಮೃದ್ಧ ಮಳೆಯಾಗಿದ್ದರಿಂದ ಜಲಮೂಲಗಳೆಲ್ಲ ಭರ್ತಿಯಾಗಿ ಅಂತರ್ಜಲ ಮಟ್ಟವೂ ಏರಿಕೆಯಾಗಿದೆ. ಸಂಪೂರ್ಣ ಬತ್ತಿ ಬೆಂಕಿಯಾಗಿದ್ದ ಭೂಮಿ ತಾಯಿಯ ಒಡಲು ತಂಪಾಗಿದ್ದು, ಭೂಮಿತಾಯಿ ಮಕ್ಕಳಾದ ಅನ್ನದಾತರ ಮುಖದಲ್ಲೂ ಮಂದಹಾಸ ಮೂಡಿಸಿದೆ.
Related Articles
Advertisement
ವರ್ಷವಾರು ಸ್ಥಿರ ಅಂತರ್ಜಲ ಮಟ್ಟ: ದಾವಣಗೆರೆ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 11.99 ಮೀ, 2014ರಲ್ಲಿ 11.53 ಮೀ,2015ರಲ್ಲಿ 11.32 ಮೀ, 2016 ರಲ್ಲಿ 13.02 ಮೀ, 2017ರಲ್ಲಿ 16.59 ಮೀ, 2018ರಲ್ಲಿ 15.60 ಮೀ, 2019ರಲ್ಲಿ 17.13 ಮೀ ಇತ್ತು. 2020ರಲ್ಲಿ 13.59 ಮೀ ಆಗಿದೆ. ಹರಿಹರ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013 ರಲ್ಲಿ6.59 ಮೀ, 2014 ರಲ್ಲಿ 4.15 ಮೀ, 2015 ರಲ್ಲಿ 3.11 ಮೀ, 2016ರಲ್ಲಿ 4.59 ಮೀ, 2017ರಲ್ಲಿ 7.02 ಮೀ, 2018ರಲ್ಲಿ 5.17 ಮೀ, 2019ರಲ್ಲಿ
5.60 ಮೀ ಇತ್ತು. ಈ ಬಾರಿ 5.84
ಮೀಗೆ ಅಂತರ್ಜಲ ಮಟ್ಟ ಏರಿದೆ. ಚನ್ನಗಿರಿ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 9.23 ಮೀ, 2014ರಲ್ಲಿ 7.56 ಮೀ, 2015ರಲ್ಲಿ 6.65 ಮೀ, 2016ರಲ್ಲಿ 7.74 ಮೀ, 2018ರಲ್ಲಿ 8.87 ಮೀ, 2019ರಲ್ಲಿ 8.87ಮೀ ಇತ್ತು. ಪ್ರಸಕ್ತ ವರ್ಷ ಅಂತರ್ಜಲ ಮಟ್ಟ 7.15 ಮೀ ಆಗಿದೆ. ಹೊನ್ನಾಳಿ ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ9.46 ಮೀ, 2014ರಲ್ಲಿ 8.70 ಮೀ, 2015 ರಲ್ಲಿ 6.56 ಮೀ, 2016 ರಲ್ಲಿ 8.37 ಮೀ, 2017ರಲ್ಲಿ 8.47 ಮೀ, 2018ರಲ್ಲಿ 4.91 ಮೀ, 2019 ರಲ್ಲಿ 5.02 ಮೀ ಆಗಿತ್ತು. ಈ ಸಲಅಂತರ್ಜಲ ಮಟ್ಟ 4.33 ಮೀಮೇಲೇರಿದೆ. ಜಗಳೂರು ತಾಲೂಕಿನಲ್ಲಿ ಸ್ಥಿರ ಅಂತರ್ಜಲ ಮಟ್ಟ 2013ರಲ್ಲಿ 21.89 ಮೀ, 2014 ರಲ್ಲಿ 21.65 ಮೀ, 2015ರಲ್ಲಿ 22.44 ಮೀ, 2016 ರಲ್ಲಿ 25.09 ಮೀ, 2017ರಲ್ಲಿ 27.44 ಮೀ, 2018 ರಲ್ಲಿ 21.99ಮೀ, 2019ರಲ್ಲಿ 25.23 ಮೀ ಇತ್ತು. ಈ ವರ್ಷ 20.05 ಮೀ ಬಂದಿದ್ದು ಅಪಾರ ಏರಿಕೆ ಕಂಡಿದೆ. ಒಟ್ಟಾರೆ ಈ ಬಾರಿಯ ಉತ್ತಮ ಮಳೆಯಿಂದಾಗಿ ಜಿಲ್ಲೆಯ ಸ್ಥಿರ ಅಂತರ್ಜಲಮಟ್ಟ ಹೆಚ್ಚಾಗಿದೆ. ಹಾಗಾಗಿ ಜಲ ಸಂಚಕಾರದಿಂದ ಮುಕ್ತಿ ಸಿಕ್ಕಂತಾಗಿದೆ.
ಸರಾಸರಿ 211ಮಿಮೀ ಅಧಿಕ ಮಳೆ : ಜಿಲ್ಲೆಯಲ್ಲಿ 2013ರಲ್ಲಿ ಸರಾಸರಿ 651ಮಿಮೀ, 2014 ರಲ್ಲಿ 921 ಮಿಮೀ, 2015ರಲ್ಲಿ 688 ಮಿಮೀ, 2016ರಲ್ಲಿ 466 ಮಿಮೀ, 2017ರಲ್ಲಿ 746 ಮಿಮೀ, 2018ರಲ್ಲಿ 633 ಮಿಮೀ, 2019ರಲ್ಲಿ 681ಮಿಮೀ ಮಳೆಯಾಗಿತ್ತು. ಪ್ರಸಕ್ತ ವರ್ಷ ಜನವರಿಯಿಂದ ಇಲ್ಲಿಯವರೆಗೆ 813 ಮಿಮೀ ಮಳೆಯಾಗಿದೆ. ಈವರೆಗಿನ ವಾಡಿಕೆ ಮಳೆ ಪ್ರಮಾಣ 602 ಮಿಮೀ ಆಗಿದ್ದು, ಸರಾಸರಿ 211ಮಿಮೀ ಹೆಚ್ಚಿನ ಮಳೆಯಾಗಿದೆ.
ಪ್ರಸಕ್ತ ವರ್ಷ ಹೆಚ್ಚುಮಳೆಯಾಗಿದ್ದರಿಂದಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. 2017ರಲ್ಲಿ ಜಲಮೂಲಗಳೆಲ್ಲ ಬತ್ತಿ ಅಂತರ್ಜಲ ಮಟ್ಟ ಹೆಚ್ಚು ಕೆಳಗೆ ಹೋಗಿತ್ತು. ಜಿಲ್ಲೆಯಲ್ಲಿ 46ಅಧ್ಯಯನ ಬಾವಿಗಳಿದ್ದು ಪ್ರತಿ ತಿಂಗಳು ಸ್ಥಿರ ಅಂತರ್ಜಲಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಈ ಅಧ್ಯಯನದ ಆಧಾರದಲ್ಲಿ ಜಿಲ್ಲೆಯ ಸ್ಥಿರ ಅಂತರ್ಜಲ ಮಟ್ಟ ಈ ವರ್ಷ ಸುಧಾರಿಸಿದೆ.-ಬಸವರಾಜ್ ಆರ್., ಹಿರಿಯ ಭೂ ವಿಜ್ಞಾನಿ.
-ಎಚ್.ಕೆ. ನಟರಾಜ