Advertisement

ಕರಾವಳಿ, ಒಳನಾಡಿನಲ್ಲಿ ಉತ್ತಮ ಮಳೆ, ಕೆಲವೆಡೆ ಹಾನಿ

01:41 AM Apr 12, 2019 | Team Udayavani |

ಮಂಗಳೂರು / ಉಡುಪಿ/ ಕಾಸರಗೋಡು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಅನೇಕ ಕಡೆ ಗುರುವಾರ ಉತ್ತಮ ಗಾಳಿ ಮಳೆಯಾದ ವರದಿಯಾಗಿದೆ.

Advertisement

ಕಾಸರಗೋಡು ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚು ಸಹಿತ ಲಘು ಮಳೆಯಾಗಿದೆ. ಸಂಜೆ ಬೀಸಿದ ಗಾಳಿಗೆ ಶ್ರೀ ಮಹಾಲಿಂಗೇಶ್ವರ ದೇವ ಸ್ಥಾನದ ಗದ್ದೆಯಲ್ಲಿ ಜಾತ್ರೆಗಾಗಿ ಅಳವಡಿಸ ಲಾಗಿದ್ದ ವ್ಯಾಪಾರ ಮಳಿಗೆಗಳ ತಗಡು ಶೀಟ್‌ಗಳು ಹಾರಿ ಹೋಗಿದೆ.

ಆಲಿಕಲ್ಲು ಮಳೆ
ಪುತ್ತೂರು ತಾಲೂಕು ಗ್ರಾಮಾಂತರ ಭಾಗಗಳಾದ ಕೌಡಿಚ್ಚಾರು, ಬಡಗ ನ್ನೂರು, ಈಶ್ವರಮಂಗಲ, ಸುಳ್ಯ ಪದವುಗಳಲ್ಲಿ ಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಪುತ್ತೂರು-ಮಂಗಳೂರು ರಾಜ್ಯ ಹೆದ್ದಾರಿಯ ಮಿತ್ತೂರು ಬಳಿ ಮರ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಟ್ಲದಲ್ಲಿಯೂ ಗಾಳಿ ಮಳೆಗೆ ವಿದ್ಯುತ್‌ ಕಂಬಗಳು ಉರುಳಿ ವಿದ್ಯುತ್‌ ಸರಬರಾಜು ವ್ಯತ್ಯಯವಾಗಿತ್ತು.

ಕೊಡಿಪ್ಪಾಡಿಯ ಬಟ್ರಪಾಡಿ ಸುಂದರ ನಾಯ್ಕ… ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಮನೆಯ ಮುಂದೆ ಇದ್ದ ಶ್ವಾನ ಸಿಡಿಲಿನ ಆಘಾತಕ್ಕೆ ಸತ್ತಿದೆ. ಮನೆಯಲ್ಲಿದ್ದ ಮಹಿಳೆ ಮತ್ತು ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿ¨ªಾರೆ.

ಬೆಳ್ಳಾರೆ ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ. ಉಪ್ಪಿನಂಗಡಿ, ವೇಣೂರು, ನಾರಾವಿ, ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಗುರುವಾಯನಕರೆ, ಕಡಬ, ಸುಳ್ಯ, ಬಂಟ್ವಾಳ, ಪುಂಜಾಲ ಕಟ್ಟೆ, ಮಲೆಬೆಟ್ಟು ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ.

Advertisement

ಉಪ್ಪಿನಂಗಡಿಯಲ್ಲಿ ಗಾಳಿಮಳೆ
ಗುರುವಾರ ಸಂಜೆ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಪರಿಸರದಲ್ಲಿ ಬೀಸಿದ ಭಾರೀ ಗಾಳಿಮಳೆಗೆ ಹಲವೆಡೆ ಮರಗಳು ಉರುಳಿಬಿದ್ದು, ವಿದ್ಯುತ್‌ ಸಂಪರ್ಕ ಅಸ್ತವ್ಯಸ್ತಗೊಂಡಿತ್ತು.

ಉಪ್ಪಿನಂಗಡಿಯ ಕೋಟೆ, 34ನೇ ನೆಕ್ಕಿಲಾಡಿ ಪರಿಸರದಲ್ಲಿ ಅಡಿಕೆ ಮರಗಳು ತುಂಡರಿಸಲ್ಪಟ್ಟು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿಣಾಮ ಕಂಬಗಳಿಗೆ ಹಾನಿಯಾಗಿದೆ.

ಬಿಳಿಯೂರು ಪರಿಸರದಲ್ಲಿ ಹಲವೆಡೆ ಮರಗಳು ಉರುಳಿ ಮನೆಗಳಿಗೂ ಹಾನಿಯುಂಟಾಗಿದೆ. ಮನೆಯಲ್ಲಿದ್ದ ಕೆಲವು ಮಂದಿ ಗಾಯಗೊಂಡಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.

ಉಡುಪಿ ಜಿಲ್ಲೆ: ವಿವಿಧೆಡೆ ಮಳೆ
ಉಡುಪಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಕಾರ್ಕಳ, ಹೆಬ್ರಿ, ಸಿದ್ದಾಪುರ ಪರಿಸರದಲ್ಲಿ ಗುಡುಗು, ಮಿಂಚು ಸಹಿತ ಮಳೆ ಯಾಗಿದೆ. ಉಡುಪಿಯಲ್ಲಿ ಹನಿ ಮಳೆಯಾಗಿದೆ. ಕಾರ್ಕಳದ ಮಾಲೆಬೆಟ್ಟಿನಲ್ಲಿ ಬೀಸಿದ ಗಾಳಿ ಮಳೆಗೆ ಮರಗಳು ಧರೆಗೆ ಉರುಳಿವೆ. ಕೊಲ್ಲೂರು, ಇಡೂರು, ಹಾಲ್ಕಲ್‌, ಜಡ್ಕಲ್‌, ವಂಡ್ಸೆಯಲ್ಲಿ ಮಳೆಯಾಗಿದೆ.

ಮುಡಿಪು: ಶಾಲೆಗೆ ಹಾನಿ
ಉಳ್ಳಾಲ ಮತ್ತು ಮುಡಿಪು ಪರಿಸರ ದಲ್ಲಿ ಸಂಜೆ ವೇಳೆಗೆ ಬಲವಾದ ಗಾಳಿ ಬೀಸಿದ್ದು, ಮುಡಿಪು ಬಳಿಯ ಹೂಹಾಕುವಕಲ್ಲು ಸರಕಾರಿ ಉ. ಪ್ರಾ. ಶಾಲೆ ಮತ್ತು ಪರಿಸರದ ಮನೆಗಳ ಹೆಂಚುಗಳು ಗಾಳಿಗೆ ಹಾರಿಹೋಗಿದೆ.

ಎರಡು ದಿನ ಮಳೆ ಸಾಧ್ಯತೆ
ಅರಬಿ ಸಮುದ್ರದ ಕಡೆಯಿಂದ ಗಾಳಿ ಬೀಸುತ್ತಿದ್ದು, ಅದರ ಪ್ರಭಾವ ದಿಂದ ಮುಂದಿನ ಎರಡು ದಿನಗಳ ಕಾಲ ಗುಡುಗು, ಸಿಡಿಲು ಸಹಿತ ಗಾಳಿ ಮಳೆಯಾಗಲಿದೆ ಎಂದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next