Advertisement
ಸುಬ್ರಹ್ಮಣ್ಯ ಬೈಪಾಸ್‌ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯಿಂದಾಗಿ ನೀರು ಹರಿಯಲು ಸಾಧ್ಯವಾಗದೆ ರಸ್ತೆಯಲ್ಲಿ ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕೆಲವು ವಾಹನಗಳು ನೀರು ತುಂಬಿದ ರಸ್ತೆಯಲ್ಲಿ ಬಾಕಿಯಾದ ಘಟನೆಯೂ ನಡೆಯಿತು.
ಸುಬ್ರಹ್ಮಣ್ಯದ ಬಿಲದ್ವಾರದ ವಾಲಗದ ಕೇರಿ ನಿವಾಸಿ ಆನಂದ ಅವರ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಹಾನಿಗೀಡಾಗಿದೆ. ಮನೆಮಂದಿ ಪ್ರಾಣಾಪಾಯದಿಂದ ಪಾರಾಗಿ ¨ªಾರೆ. ಪರಿಸರದ ಕೆಲವು ಮನೆಗಳಿಗೆ ಅಳವಡಿ ಸಿದ್ದ ಸಿಮೆಂಟ್ ಶೀಟ್‌ಗಳು ಗಾಳಿಗೆ ಹಾರಿ ಹೋಗಿದೆ. ವಸತಿಗೃಹ ಶೇಷನಾಗ ಆಶ್ರಯ ಮಳೆ ನೀರಿನಿಂದ ಆವೃತಗೊಂಡಿದೆ. ಉಡುಪಿ ಜಿಲ್ಲೆಯ ವಿವಿಧ ಕಡೆಯಲ್ಲಿ ಗುರುವಾರ ಸಂಜೆ ಗುಡುಗು ಸಹಿತ ತುಂತುರು ಮಳೆಯಾಗಿದೆ. ಉಡುಪಿ, ಕೋಟ, ಕೋಟೇಶ್ವರ ಪೆರ್ಡೂರು ಕಾರ್ಕಳ, ಕುಂದಾಪುರ, ಹೊಸಂಗಡಿ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ತಲ್ಲೂರು, ನಾವುಂದ, ಮರವಂತೆ, ಬಸೂÅರು, ಸಿದ್ದಾಪುರ ತುಂತುರು ಮಳೆಯಾಗಿದೆ. ಕಾಪು, ತೆಕ್ಕಟ್ಟೆ ಸೇರಿದಂತೆ ಇತರ ಕಡೆಗಳಲ್ಲಿ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣವಿತ್ತು.
Related Articles
ಹವಾಮಾನ ಇಲಾಖೆ ವರದಿಯ ಅನ್ವಯ ಕರಾವಳಿಯಲ್ಲಿ ಮೇ 15ರಿಂದ 19ರ ವರೆಗೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ.
Advertisement
ಕರಾವಳಿಯಲ್ಲಿ ಮೂರು ದಿನ ಯಲ್ಲೋ ಅಲರ್ಟ್ಮಂಗಳೂರು: ಬಂಗಾಲ ಕೊಲ್ಲಿಯಲ್ಲಿ ಸುಳಿಗಾಳಿ ಪರಿಣಾಮ ಮುಂದಿನ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆಯು “ಯಲ್ಲೋ ಅಲರ್ಟ್’ ಘೋಷಿಸಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಮುಂದಿನ ಮೂರು ದಿನಗಳ ಕಾಲ ಕರಾವಳಿ ಭಾಗದಲ್ಲಿ 64.5 ಮಿ.ಮೀ.ನಿಂದ 115.5 ಮಿ.ಮೀ. ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಗುಡುಗು ಸಿಡಿಲಿನೊಂದಿಗೆ ಗಾಳಿ ಕೂಡ ಹೆಚ್ಚಾಗಿ ಇರಲಿದೆ. ಗುರುವಾರ ಪಣಂಬೂರಿನಲ್ಲಿ 36.2 ಡಿ.ಸೆ. ಗರಿಷ್ಠ ಮತ್ತು 25.5 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದ ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಅವಧಿಗೂ ಮುನ್ನ ಮುಂಗಾರು ಸಾಧ್ಯತೆ
ನೈಋತ್ಯ ಬಂಗಾಲ ಕೊಲ್ಲಿಯಲ್ಲಿ ನಿಮ್ನ ಒತ್ತಡದ ಪರಿಣಾಮ ವಾಯುಭಾರ ಕುಸಿತ ಉಂಟಾಗಿದ್ದು, ಒಂದೆರಡು ದಿನಗಳಲ್ಲಿ ತೀವ್ರಗೊಳ್ಳುವ ಸಾಧ್ಯತೆ ಇದೆ. ಮುಂಬರುವ ಮುಂಗಾರು ಮಳೆಯ ಮೇಲೆ ಇದು ಪರಿಣಾಮ ಬೀರಲಿದೆ. ಸಾಮಾನ್ಯವಾಗಿ ಮೇ ಅಂತ್ಯ ಜೂನ್ ಮೊದಲ ವಾರದಲ್ಲಿ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸುತ್ತದೆ. ಬಳಿಕ ಮೂರ್‍ನಾಲ್ಕು ದಿನಗಳ ನಂತರ ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ಆಗಮಿಸುತ್ತದೆ. ಆದರೆ ಈ ಬಾರಿ ವಾಯುಭಾರ ಕುಸಿತದ ಪರಿಣಾಮ ಅವಧಿಗಿಂತ ಒಂದು ವಾರ ಮುನ್ನವೇ ರಾಜ್ಯಕ್ಕೆ ಮುಂಗಾರು ಅಪ್ಪಳಿಸಬಹುದು ಎಂದು ಅಂದಾಜಿಸಲಾಗಿದೆ.