Advertisement

ಸಜ್ಜನರು-ಸುಶಿಕ್ಷಿತರು ಶಿಕ್ಷಕರಾಗಲಿ: ಮಂಟೂರ

11:14 AM Feb 02, 2019 | |

ಮುದ್ದೇಬಿಹಾಳ: ಇಲ್ಲಿನ ಜವಾಹರಲಾಲ್‌ ನೆಹರು ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಬಿ. ಚಲವಾದಿ ಅವರಿಗೆ ಮುದ್ದೇಬಿಹಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.

Advertisement

ಸಾನ್ನಿಧ್ಯ ವಹಿಸಿದ್ದ ಪ್ರವಚನಕಾರ ಡಾ| ಈಶ್ವರ ಮಂಟೂರ ಮಾತನಾಡಿ, ಸಜ್ಜನರು, ಸುಶೀಕ್ಷಿತರು ಶಿಕ್ಷಕರಾಗಬೇಕು. ಅಂದಾಗ ಮಾತ್ರ ಶಿಕ್ಷಕರು ಸಮಾಜಕ್ಕೆ ಮಾದರಿ ಎನ್ನಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಆಚಾರವಂತರು ಸ್ವಾಮಿಗಳಾಗಬೇಕು. ಪ್ರಾಮಾಣಿಕರು ಅಧಿಕಾರಿಗಳಾಗಬೇಕು. ಸುಶೀಲ ಚಾರಿತ್ರ್ಯವಂತರು ಶಿಕ್ಷಕರಾಗಬೇಕು. ರಾಷ್ಟ್ರಭಕ್ತರು ರಾಜಕಾರಣಿ ಆಗಬೇಕು. ದೇಶಭಕ್ತರು ಸೈನಿಕರಾಗಬೇಕು. ಅಂದಾಗ ಮಾತ್ರ ದೇಶ ಭವ್ಯವಾಗುತ್ತದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಢವಳಗಿಯ ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ನಿವೃತ್ತ ಮುಖ್ಯಾಧ್ಯಾಪಕ ಎಸ್‌.ಎಸ್‌. ಪಾಟೀಲ ವಿಶೇಷ ಉಪನ್ಯಾಸ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಚಲವಾದಿ ಅವರು, ತಮ್ಮ ಸೇವಾ ದಿನಗಳನ್ನು ಸ್ಮರಿಸಿದರು. ಎಲ್ಲ ರೀತಿಯ ಸಹಕಾರ ನೀಡಿದ ದೈಹಿಕ ಶಿಕ್ಷಕ ವೃಂದ, ತಾಲೂಕಿನ ಶಿಕ್ಷಕರು ಮತ್ತು ಬಿಇಒ, ಬಿಆರ್‌ಸಿಸಿ ಕಚೇರಿ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.

Advertisement

ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಎಂ.ಎಂ. ಬೆಳಗಲ್ಲ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್‌.ಆರ್‌. ಕಟ್ಟಿಮನಿ, ನಿರ್ದೇಶಕ ಎಚ್.ಎಲ್‌.ಕರಡ್ಡಿ, ಜಿಲ್ಲಾ ಮಾಧ್ಯಮಿಕ ಶಾಲಾ ಮಂಡಳಿ ಸದಸ್ಯ ಬಿ.ಎಸ್‌. ಪಾಟೀಲ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಬಿಜೆಪಿ ಧುರೀಣ ಸಿ.ಪಿ. ಸಜ್ಜನ, ತಾಪಂ ಮಾಜಿ ಸದಸ್ಯ ಶ್ರೀಶೈಲಗೌಡ ಬಿರಾದಾರ, ಬಸಯ್ಯ ಹಿರೇಮಠ, ಎಂ.ಜಿ.ಹೊಕ್ರಾಣಿ, ಬಾಲಚಂದ್ರ ನಡುವಿನಮನಿ, ಎಸ್‌.ಎಸ್‌.ಬಾಣಿ, ಕೆ.ಎಂ. ಇಬ್ರಾಹಿಂಪುರ, ಎಂ.ವೈ. ಗೌಂಡಿ, ಎಂ.ಎಲ್‌. ಕೆಂಭಾವಿ, ಎಸ್‌.ಎಲ್‌. ಗುರವ, ಎಸ್‌.ಆರ್‌. ಸುಲ್ಪಿ, ಕೆ.ಬಿ.ಸಜ್ಜನ ಇದ್ದರು. ಎಸ್‌.ಬಿ.ಚಲವಾದಿ ಮತ್ತು ಎಸ್‌.ಡಿ. ಗಾಂಜಿ ಅವರನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next