Advertisement

ಶಿಕ್ಷಣದಿಂದ ಉತ್ತಮ ಅವಕಾಶ

12:05 PM Sep 29, 2018 | Team Udayavani |

ದಾವಣಗೆರೆ: ಸತತ ಪರಿಶ್ರಮದಿಂದ ವಿದ್ಯಾರ್ಜನೆ ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಸ್‌.ವಿ. ಹಲಸೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

Advertisement

ಶುಕ್ರವಾರ, ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಜೆ.ಎಚ್‌. ಪಟೇಲ್‌ ಕಾಲೇಜು ಘಟಿಕೋತ್ಸವ, ಪದವಿ
ಪ್ರದಾನ ಕಾರ್ಯಕ್ರಮ ಹಾಗೂ ಚಿಗುರು-2018 ಉದ್ಘಾಟಿಸಿ, ಮಾತನಾಡಿದ ಅವರು, ವಿದ್ಯಾರ್ಥಿಗಳ ಕಾಯಕ ಎಂದರೆ ಚೆನ್ನಾಗಿ ಓದುವುದು. ಶಿಕ್ಷಕರ ಕಾಯಕ ಉತ್ತಮ ಬೋಧನೆ. ವಿದ್ಯಾರ್ಥಿಗಳು ವಿದ್ಯಾರ್ಜನೆ ಕಾಯಕವನ್ನು ಚೆನ್ನಾಗಿ ಮಾಡಬೇಕು. ಮುಂದೆ ಒಳ್ಳೆಯ ಜೀವನ ಕಟ್ಟಿಕೊಳ್ಳುವಂತಾಗಬೇಕು ಎಂದು ಆಶಿಸಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ವತ್‌ ಮತ್ತು ಕೌಶಲ್ಯ ಇದ್ದರೆ ಮನೆ ಬಾಗಿಲಿಗೆ ಉದ್ಯೋಗವಕಾಶ ಅರಸಿಕೊಂಡು ಬರಲಿವೆ. ಅವಕಾಶ ಬರುವಂತಾಗಲು ಚೆನ್ನಾಗಿ ಓದಬೇಕು. ಈಗಿನ ಆಧುನಿಕ ಕಾಲ ಬೇಡುವ ಕೌಶಲ್ಯವಂತರಾಗಬೇಕು. ಶಿಕ್ಷಣ ಎಲ್ಲ ರೀತಿಯ ಅವಕಾಶ ಮತ್ತು ಗೌರವ ತಂದುಕೊಡುತ್ತದೆ ಎಂಬುದನ್ನು ಮನದಲ್ಲಿಟ್ಟುಕೊಂಡು ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.

ಎಲ್ಲರ ಜೀವನದಲ್ಲಿ ಶಿಕ್ಷಣ ಎನ್ನುವುದು ಬೆಳಕು ಮತ್ತು ಮಾರ್ಗದರ್ಶನ ನೀಡಲಿದೆ. ಕತ್ತಲೆ ದೂರ ಮಾಡಿ ಬೆಳಕು ನೀಡುವಂತಹ ವಿದ್ಯೆಯನ್ನು ಏಕಾಗ್ರತೆಯಿಂದ ಕಲಿಯಬೇಕು. ನಾವು ಪದವೀಧರ ಮತ್ತು ಉದ್ಯೋಗಸ್ಥರಾಗಲು ಅವಕಾಶ ಮಾಡಿಕೊಟ್ಟಂತಹ ತಂದೆ-ತಾಯಿ, ಗುರು ವೃಂದ ಹಾಗೂ ಕಲಿತ ಶಾಲಾ-ಕಾಲೇಜುಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಜೀವನದಲ್ಲಿ ಉನ್ನತ ಹಂತಕ್ಕೇರುವ ಗುರಿ ಹೊಂದಿರಬೇಕು. ಅ ಗುರಿ ತಲುಪುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅದರಂತೆ ಅಧ್ಯಯನ ಮಾಡಬೇಕು. ಜೀವನದಲ್ಲಿ ಸದಾ ಸತ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸತ್ಯ ಮತ್ತು ಕಾಯಕ ನಿಷ್ಠೆ ಅತೀ ಮುಖ್ಯ ಎಂದು ತಿಳಿಸಿದರು.

Advertisement

ವಿದ್ಯಾರ್ಥಿ ಸಮುದಾಯ ಸದಾ ಧನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಋಣಾತ್ಮಕ ಚಿಂತನೆ ದುಷ್ಪರಿಣಾಮಕ್ಕೆ ಕಾರಣವಾದರೆ. ಧನಾತ್ಮಕ ಚಿಂತನೆ ಒಳ್ಳೆಯ ಜೀವನ ರೂಪಿಸಿಕೊಳ್ಳಲು ಹಾದಿ ಮಾಡಿಕೊಡುತ್ತದೆ. ಪ್ರತಿಯೊಬ್ಬರು ಜಾಣರಾಗಿ ಜೀವನ ಸಾಗಿಸಬೇಕು ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳಾಡಿದ ಜೆ.ಎಚ್‌. ಪಟೇಲ್‌ ಕಾಲೇಜು ಕಾರ್ಯದರ್ಶಿ ದೊಗ್ಗಳ್ಳಿ ಗೌಡ್ರು ಪುಟ್ಟರಾಜ್‌, ಕಾಲೇಜು ಘಟಿಕೋತ್ಸದ ಮೂಲಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು. ಜೆ.ಎಚ್‌. ಪಟೇಲ್‌ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ| ಎಚ್‌. ವಿಶ್ವನಾಥ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಪ್ರತಿಭಾ ಪಿ. ದೊಗ್ಗಳ್ಳಿ ಇತರರು ಇದ್ದರು. ಶಬೀರ್‌, ಸೈಯದ್‌ ಆಶಯಗೀತೆ ಹಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next