Advertisement

ಮೀನುಗಾರಿಕೆಗೆ ವಿಫ‌ುಲ ಅವಕಾಶ

08:46 AM Jul 27, 2020 | Suhan S |

ಕೋಲಾರ: ಜಿಲ್ಲೆಯ ಕೆರೆಗಳಿಗೆ ಕೆ.ಸಿ. ವ್ಯಾಲಿ ನೀರು ಭರ್ತಿಯಾಗುತ್ತಿರುವುದರಿಂದ ಮೀನುಗಾರಿಕೆಗೆ ವಿಫ‌ುಲ ಅವಕಾಶಗಳಿವೆ ಎಂದು ಇಲಾಖೆಯ ನಿರ್ದೇಶಕ ಆರ್‌. ರಾಮಕೃಷ್ಣ ತಿಳಿಸಿದರು.

Advertisement

ಜುಲೈ ಅಂತ್ಯಕ್ಕೆ ಸೇವೆಯಿಂದ ನಿವೃತ್ತರಾಗುತ್ತಿರುವ ಕಾರಣ, ನಗರದ ಮೀನುಗಾರಿಕೆ ಇಲಾಖೆ ಆವರಣದಲ್ಲಿ ಸಿಬ್ಬಂದಿ ಹಾಗೂ ಮೀನು ಕೃಷಿಕರು ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕೃಷಿಯಲ್ಲಿ ಲಾಭಗಳಿಸಲು ಸೋತಿರುವ ರೈತರು, ಒಳನಾಡು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನೋಪಾಯ ಕಂಡುಕೊಳ್ಳಬಹುದಾಗಿದೆ. ಗ್ರಾಮೀಣ ನಿರುದ್ಯೋಗಿ ಗಳು, ರೈತರು ಮೀನುಗಾರಿಕೆ ಇಲಾಖೆಯ ಮಾರ್ಗ ದರ್ಶನ ಹಾಗೂ ಸೌಲಭ್ಯ ಪಡೆದು, ಮೀನು ಸಾಕಾಣಿಕೆ ಯಲ್ಲಿ ತೊಡಗಿಸಿಕೊಂಡು ಆರ್ಥಿಕ ವಾಗಿ ಸಬಲರಾಗುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ ಇಲಾಖೆಯಿಂದ ಮೀನುಮರಿ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೇತಮಂಗಲ ಹಾಗೂ ಮಾರ್ಕಂ ಡಯ್ಯ ಜಲಾಶಯದ ಮೀನುಮರಿ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿ ಸೇರಿ ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಪ್ರಗತಿ ಕಾರ್ಯಗಳಿಗೆ 10 ಕೋಟಿ ರೂ. ಬಿಡು ಗಡೆ ಮಾಡಲಾಗಿದೆ ಎಂದು ನಿರ್ದೇಶಕ ತಿಳಿಸಿದರು.

ಬೆಂಗಳೂರು ವಿಭಾಗೀಯ ಮೀನುಗಾರರ ಸಹಕಾರ ಒಕ್ಕೂಟದ ಉಪಾಧ್ಯಕ್ಷರಾದ ಅ.ಮು.ಲಕ್ಷ್ಮೀನಾರಾಯಣ ಮಾತನಾಡಿದರು. ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಸಹಾಯಕ ನಿರ್ದೇಶಕ ಡಿ. ಶಿವ ಶಂಕರ್‌, ವಿ.ಸಿ.ಪೆದ್ದಣ್ಣ, ಮುನೆಯ್ಯ, ನಾಗೇಂದ್ರಬಾಬು, ಲೋಕೇಶ್‌, ಕೋಲಾರ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ನಂಜಪ್ಪ, ನಿರ್ದೇಶಕ ಕೋ.ನಾ.ಮಂಜು ನಾಥ್‌, ಇಲಾಖೆಯ ನೌಕರರಾದ ವಿಜಯಲಕ್ಷ್ಮೀ, ಆರ್‌. ಸುದೀಪ್‌, ಸಾರಥಿ, ಶಂಕರಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next