Advertisement
ವಿಮಾ ಕ್ಷೇತ್ರದಲ್ಲಿ ಶೇ. 45ರಷ್ಟು ಹೆಚ್ಚಳ :
Related Articles
Advertisement
ದಿಲ್ಲಿಯಲ್ಲಿ ಶೇ. 16ರಷ್ಟು ನೇಮಕಾತಿ ಹೆಚ್ಚಳ :
ಮೆಟ್ರೊ ಉದ್ಯೋಗ ಮಾರುಕಟ್ಟೆಯಲ್ಲಿ ಡಿಸೆಂಬರ್‌ನಲ್ಲಿ ಅತೀ ಹೆಚ್ಚು ಚೇತರಿಕೆ ಕಂಡುಬಂದಿದೆ. ನವೆಂಬರ್ ಬಳಿಕ ಪುಣೆ ಶೇ. 18ರಷ್ಟು ಮತ್ತು ದಿಲ್ಲಿಯಲ್ಲಿ ಶೇ. 16ರಷ್ಟು ಹೆಚ್ಚಿನ ಪ್ರಮಾಣದ ನೇಮಕಾತಿಗಳು ನಡೆದಿವೆ. 2ನೇ ಹಂತದ ನಗರಗಳ ಪೈಕಿ ಕೊಯಮತ್ತೂರಿನಲ್ಲಿ ಸುಮಾರು ಶೇ. 30ರಷ್ಟು, ಅಹ್ಮದಾಬಾದ್‌ನಲ್ಲಿ ಶೇ. 20ರಷ್ಟು ಮತ್ತು ಜೈಪುರದಲ್ಲಿ ಶೇ. 15ರಷ್ಟು ಹೆಚ್ಚಳ ದಾಖಲಾಗಿದೆ.
ಹೊಟೇಲ್ ಉದ್ಯಮದಲ್ಲಿ ಶೇ. 13 ಚೇತರಿಕೆ :
ಟಿಕೆಟಿಂಗ್ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಗಳು ಡಿಸೆಂಬರ್‌ನಲ್ಲಿ ಶೇ. 46ರಷ್ಟು ಏರಿಕೆ ಕಂಡಿದೆ. ಕೋವಿಡ್-19 ಕಾರಣದಿಂದಾಗಿ ಹೆಚ್ಚು ನಷ್ಟ ಅನುಭವಿಸಿದ ಹೊಟೇಲ್/ ರೆಸ್ಟೋರೆಂಟ್ ಉದ್ಯಮದಲ್ಲಿ ನವೆಂಬರ್‌ನಲ್ಲಿ ಶೇ. 13ರಷ್ಟು ಹೆಚ್ಚಿನ ನೇಮಕಾತಿಗಳು ನಡೆದಿವೆ.
ಯಾರಿಗೆ ಬೇಡಿಕೆ? :
ಬೋಧನೆ, ಶಿಕ್ಷಣಕ್ಕೆ ಪೂರಕವಾದ ವಲಯಗಳಲ್ಲಿ ಶೇ. 27 ರಷ್ಟು, ಮಾನವ ಸಂಪನ್ಮೂಲ/ಆಡಳಿತ ಕೇಂದ್ರಗಳಲ್ಲಿ ಶೇ. 22ರಷ್ಟು ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಕಳೆದ ತಿಂಗಳು ಉದ್ಯೋಗ ಕ್ಷೇತ್ರದಲ್ಲಿ ಶೇ. 18ರಷ್ಟು ಬೇಡಿಕೆ ಹೆಚ್ಚಾಗಿದೆ.
ಜೂನ್ ತ್ತೈಮಾಸಿಕದಲ್ಲಿ ಶೇ. 56ರಷ್ಟು ಕುಸಿತ :
ಕೋವಿಡ್ ಸಾಂಕ್ರಾಮಿಕದಿಂದಾಗಿ ತೀವ್ರ ಹಿನ್ನಡೆ ಕಂಡಿದ್ದ ಆತಿಥ್ಯ, ಪ್ರಯಾಣ, ಆಟೋ ಮತ್ತು ಚಿಲ್ಲರೆ ಕ್ಷೇತ್ರಗಳು ಹಳಿಗೆ ಮರಳುತ್ತಿವೆ. ಡಿಸೆಂಬರ್‌ನಲ್ಲಿನ ನೇಮಕಾತಿ ಅಂಕಿ ಅಂಶಗಳು 2021ರಲ್ಲಿ ಬಲವಾದ ಚೇತರಿಕೆ ಕಾಣುವ ಸಾಧ್ಯತೆಯನ್ನು ಸೂಚಿಸುತ್ತವೆ. ಪ್ರಸಕ್ತ ಹಣಕಾಸು ವರ್ಷದ ಜೂನ್ ತ್ತೈಮಾಸಿಕದಲ್ಲಿ ನೇಮಕಾತಿಗಳು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ. 56ರಷ್ಟು ಕಡಿಮೆಯಾಗಿತ್ತು. ಆದರೆ ಅನಂತರದ ತ್ತೈಮಾಸಿಕಗಳಲ್ಲಿ ಸುಧಾರಣೆ ಕಂಡಿದೆ.
ವರ್ಷಾಂತ್ಯದಲ್ಲಿ ಹೇಗಿತ್ತು? :
2020ರ ಡಿಸೆಂಬರ್‌ಗೆ ಅಂತ್ಯಗೊಂಡ ತ್ತೈಮಾಸಿಕದಲ್ಲಿ ನೇಮಕಾತಿಯು 2019ರ ಡಿಸೆಂಬರ್ ತ್ತೈಮಾಸಿಕಕ್ಕಿಂತ ಕೇವಲ ಶೇ. 18ರಷ್ಟು ಕಡಿಮೆಯಾಗಿದೆ. ಐಟಿ ಮತ್ತು ಬಿಪಿಒ ಜತೆಗೆ, ವೈದ್ಯಕೀಯ ಮತ್ತು ಔಷಧ ಕ್ಷೇತ್ರದಲ್ಲಿ ನೇಮಕಾತಿಗಳು ಹೆಚ್ಚಾಗಿವೆ.