Advertisement

ದಳಪತಿ ವಿಜಯ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼPokkiriʼ ರೀ ರಿಲೀಸ್:‌ ಫ್ಯಾನ್ಸ್‌ ಖುಷ್‌

03:54 PM Jun 04, 2024 | Team Udayavani |

ಚೆನ್ನೈ: ʼಲಿಯೋʼ ಬಳಿಕ ದಳಪತಿ ವಿಜಯ್‌ ಅವರ ಮುಂದಿನ ಸಿನಿಮಾಕ್ಕಾಗಿ ಅವರ ಫ್ಯಾನ್ಸ್‌ ಗಳು ಕಾಯುತ್ತಿದ್ದಾರೆ. ಸದ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಲು ಸಿದ್ದರಾಗಿರುವ ವಿಜಯ್‌ ಅದಕ್ಕಿಂತ ಮುಂಚೆ ಈಗಾಗಲೇ ಅನೌನ್ಸ್‌ ಮಾಡಿರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

ದಳಪತಿ ವಿಜಯ್‌ ಇದೇ ತಿಂಗಳಿನಲ್ಲಿ ತನ್ನ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರ ಫ್ಯಾನ್ಸ್‌ ಗಳಿಗೆ ಸರ್ಪ್ರೈಸ್‌ ವೊಂದನ್ನು ನೀಡಲಾಗಿದೆ.

2007 ರಲ್ಲಿ ರಿಲೀಸ್‌ ಆಗಿದ್ದ ಮಾಸ್‌ ಮಸಾಲ ʼ ಪೋಕಿರಿʼ ರೀ ರಿಲೀಸ್‌ ಆಗಲಿದೆ. ಈ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡಿದ್ದರು. ತೆಲುಗಿನ ಮಹೇಶ್‌ ಬಾಬು ಅವರ ʼಪೋಕಿರಿʼ ಸಿನಿಮಾದ ರಿಮೇಕ್‌ ಆಗಿ ಬಂದಿದ್ದರೂ ಕಾಲಿವುಡ್‌ ನಲ್ಲಿ ಈ ಚಿತ್ರ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು.

ವಿತರಕ ಕರಣ್ ಐಂಗಾರನ್ ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಇದೇ  ಜೂ.21 ರಂದು ದಳಪತಿ ವಿಜಯ್‌ ಅವರ 50ನೇ ಹುಟ್ಟುಹಬ್ಬ(ಜೂ.22 ರಂದು) ʼಪೋಕಿರಿʼ ಚಿತ್ರ ಮತ್ತೆ ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ ಎಂದು ಪೋಸ್ಟರ್‌ ಹಂಚಿಕೊಂಡು ಹೇಳಿದ್ದಾರೆ.

4K ಮತ್ತು Dolby Atmos ಧ್ವನಿಯಲ್ಲಿ ಸಿನಿಮಾ ಮರು ಬಿಡುಗಡೆ ಆಗಲಿದೆ.

Advertisement

ದಳಪತಿ ವಿಜಯ್, ಚಿತ್ರದಲ್ಲಿ ಆಸಿನ್, ಪ್ರಕಾಶ್ ರಾಜ್, ವಡಿವೇಲು, ಬೃಂದಾ ಪರೇಖ್, ನಾಸರ್, ಶ್ರೀಮನ್, ನೆಪೋಲಿಯನ್ ಮುಂತಾದವರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next