Advertisement

Kamal Hasan: ರೀ- ರಿಲೀಸ್‌ ಆದ ಮೊದಲ ದಿನವೇ 1 ಕೋಟಿ ರೂ. ಗಳಿಕೆ ಕಂಡ ʼಇಂಡಿಯನ್‌ʼ

06:30 PM Jun 08, 2024 | Team Udayavani |

ಚೆನ್ನೈ: ಕಮಲ್‌ ಹಾಸನ್‌ ಅವರ ವೃತ್ತಿ ಬದುಕಿನಲ್ಲಿ ದೊಡ್ಡ ಹಿಟ್‌ ಆದ ʼಇಂಡಿಯನ್‌ʼ ಸಿನಿಮಾದ ಸೀಕ್ವೆಲ್‌ ರಿಲೀಸ್‌ ಗೆ ದಿನ ನಿಗದಿಯಾಗಿದೆ.

Advertisement

ಶಂಕರ್‌ ನಿರ್ದೇಶನದಲ್ಲಿ 1996 ರಲ್ಲಿ ಬಂದ ʼಇಂಡಿಯನ್‌ʼ ಸಿನಿಮಾ ಬಾಕ್ಸ್‌ ಆಫೀಸ್‌ ನಲ್ಲಿ  ಭರ್ಜರಿ ಕಮಾಯಿ ಮಾಡಿತ್ತು. ದೇಶ ಪ್ರೇಮವನ್ನು ಸಾರಿದ ಕಥೆಯಲ್ಲಿ ಕಮಲ್‌ ಹಾಸನ್‌ ಅವರ ಡಬಲ್ ರೋಲ್‌ ಪಾತ್ರದ ಅಭಿನಯ ಪ್ರತಿ ಸಿನಿ ಪ್ರೇಮಿಯ ಮನ ಗೆದ್ದಿತ್ತು.

ʼಇಂಡಿಯನ್‌ -2ʼ ರಿಲೀಸ್‌ ಗೂ ಮುನ್ನ ಚಿತ್ರತಂಡ ಮೊದಲ ಭಾಗವನ್ನು ರಿಲೀಸ್‌ ಮಾಡಿದೆ. ಥಿಯೇಟರ್‌ ನಲ್ಲಿ ʼಇಂಡಿಯನ್‌ʼ ರೀ ರಿಲೀಸ್‌ ಆಗಿದ್ದು, ಮೊದಲ ದಿನವೇ ಭರ್ಜರಿ ಆರಂಭವನ್ನು ಪಡೆದುಕೊಂಡಿದೆ.

ರೀ ರಿಲೀಸ್‌ ಅಗಿರುವ ʼಇಂಡಿಯನ್‌ʼ ಮೊದಲ ದಿನ 1 ಕೋಟಿ ರೂಪಾಯಿ ಗಳಿಕೆಯನ್ನು ಕಂಡಿದೆ. ಆ ಮೂಲಕ ಕಮಲ್‌ ಹಾಸನ್‌ ಫ್ಯಾನ್ಸ್‌ ಗಳು ʼಇಂಡಿಯನ್‌ʼ ರೀ- ರಿಲೀಸ್‌ ನ್ನು ಹಬ್ಬವನ್ನಾಗಿ ಆಚರಿಸಿದ್ದಾರೆ.

1 ಕೋಟಿ ರೂ.ಗಳಿಕೆ ಕಂಡಿದ್ದರೂ, ಇತ್ತೀಚೆಗೆ ರೀ ರಿಲೀಸ್‌ ಆದ ʼಗಿಲ್ಲಿʼ ದಾಖಲೆಯನ್ನು ʼಇಂಡಿಯನ್‌ʼಗೆ ಮುರಿಯಲು ಸಾಧ್ಯವಾಗಿಲ್ಲ. ದಳಪತಿ ವಿಜಯ್‌ ಅವರ ʼಗಿಲ್ಲಿʼ ರೀ- ರಿಲೀಸ್‌ ಆದ ಮೊದಲ ದಿನವೇ 10 ಕೋಟಿ ಗಳಿಕೆ ಕಂಡು ದಾಖಲೆ ಬರೆದಿತ್ತು.

Advertisement

ʼಇಂಡಿಯನ್‌ʼ ನಲ್ಲಿ ಕಮಲ್‌ ಹಾಸನ್‌ ಜೊತೆಗೆ ಮನೀಶಾ ಕೊಯಿರಾಲ, ಊರ್ಮಿಳಾ ಮಾತೋಂಡ್ಕರ್, ಸುಕನ್ಯಾ, ಮನೋರಮಾ ಗೌಂಡಮಣಿ ಮುಂತಾದವರು ನಟಿಸಿದ್ದರು.

‘ಇಂಡಿಯನ್‌ -2ʼ ಜುಲೈ 12 ರಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಿ ರಿಲೀಸ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next