Advertisement

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಒಂದು ಸಿಹಿ, ಮತ್ತೊಂದು ಕಹಿ ಸುದ್ದಿ!

03:13 PM Jun 17, 2017 | Team Udayavani |

ಬೆಂಗಳೂರು: ಒಂದೆಡೆ ಮೆಟ್ರೋ ಮೊದಲ ಲೋಕಾರ್ಪಣೆಗೆ ಕ್ಷಣಗಣನೆ ನಡೆಯುತ್ತಿದ್ದರೆ ಮತ್ತೊಂದೆಡೆ ಮೆಟ್ರೋ ಪ್ರಯಾಣಿಕರಿಗೆ ಒಂದು ಸಿಹಿ ಮತ್ತು ಕಹಿ ಸುದ್ದಿಯೊಂದು ಹೊರಬಿದ್ದಿದೆ. ಹೌದು 2011ರ ನಂತರ ಮೆಟ್ರೋ ಪ್ರಯಾಣ ದರ ಏರಿಕೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಲು ನಿರ್ಧರಿಸಿರುವುದಾಗಿ ಬಿಎಂಆರ್ ಸಿ ಉನ್ನತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಅದೇ ರೀತಿ ಖುಷಿ ಸುದ್ದಿ ಏನಪ್ಪಾ ಅಂದ್ರೆ ಮೆಟ್ರೋ ಸಂಚಾರದ ಸಮಯವನ್ನು ವಿಸ್ತರಿಸಿರುವುದು.

Advertisement

ಮೆಟ್ರೋ ಪ್ರಯಾಣ ದರದಲ್ಲಿ ಶೇ.10ರಿಂದ ಶೇ.12ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಮೆಟ್ರೋ ಸಂಚಾರದಿಂದ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ ಶೇ.10ರಷ್ಟು ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ವರದಿ ವಿವರಿಸಿದೆ.

ಮೆಟ್ರೋ ಪ್ರಯಾಣ ದರ ಈಗಾಗಲೇ ಇರುವ ಕನಿಷ್ಠ 10 ರೂ. ಹಾಗೂ 40 ರೂ.ವರೆಗೆ ಪ್ರಯಾಣ ದರ ಇತ್ತು. ಹಾಗಾಗಿ ಇನ್ನು ಶೇ.10ರಷ್ಟು ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿರುವುದಾಗಿ ಬಿಎಂಆರ್ ಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಸಂಚಾರ ಅವಧಿ ವಿಸ್ತರಣೆ:
ಮೆಟ್ರೋ ರೈಲು ಸಂಚಾರದ ಅವಧಿ ಈಗ 10ಗಂಟೆಗೆ ಮುಕ್ತಾಯವಾಗುತ್ತಿದೆ. ಇನ್ನು ಮುಂದೆ ರಾತ್ರಿ 11ಗಂಟೆವರೆಗೆ ಮೆಟ್ರೋ ಸಂಚಾರದ ಅವಧಿ ವಿಸ್ತರಿಸಲು ಬಿಎಂಆರ್ ಸಿ ಅಧಿಕಾರಿಗಳು ಹೇಳಿದ್ದಾರೆ.ಬೆಳಗ್ಗೆ 5 ಗಂಟೆಗೆ ಕೇವಲ ಮೆಟ್ರೋ ಪೈಲಟ್‌ ಗಳಿಗೆ (ಚಾಲಕರಿಗೆ) ಮಾತ್ರ ಪ್ರವೇಶಾವಕಾಶವಿದ್ದ ರೈಲಿನಲ್ಲಿ ಇನ್ನು ಮುಂದೆ ಸಾರ್ವಜನಿಕರ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್ 19ರಿಂದಲೇ ನೂತನ ಸಮಯ ಜಾರಿಯಾಗಲಿದೆ ಎಂದು ಮೆಟ್ರೋ ನಿಗಮ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next