Advertisement
ಪರೀಕ್ಷೆ ಮುಗಿಸಿ ಬಂದಾಗ ಹುಡುಗಿಯರೆಲ್ಲ ಏನೋ ಪಿಸುಗುಟ್ಟುತ್ತಿದ್ದರು. ಕಿವಿ ಚುರುಕಾಯಿತು. ಅವಳ ಬಗೆಗಿನ ಮಾತುಗಳೇ ಕೇಳುತ್ತಿದ್ದವು. ಹೆಸರು ಪ್ರೀತ. ನನಗೆ ಅನಿಸಿದ್ದು ಸುಳ್ಳಾಗಿರಲಿಲ್ಲ. ಮೊದಲ ದಿನದ ಪರೀಕ್ಷೆಯಿಂದಲೂ ಆಕೆ ಅದೊಂದೇ ಉಡುಪಿನಲ್ಲಿದ್ದಾಳಂತೆ. ಅದೂ ಎಲ್ಲೊ ಒಂದು ಕಡೆ ಹರಿದಿತ್ತು. ಪ್ರೀತಳ ಪ್ರೀತಿಯ ಚೂಡಿದಾರವೆಂದುಕೊಂಡಿ¨ªೆ . ಅಲ್ಲ ಅದು ಅವಳ ಅದೃಷ್ಟದ ಚೂಡಿದಾರವಾಗಿತ್ತು. ಯಾಕೋ ತುಂಬ ಕುತೂಹಲವೆನಿಸಿತು. ಗೆಳತಿಯರ ಮಾತುಗಳಿಂದ ಪ್ರಭಾವಿತಳಾಗಿ ಅವಳನ್ನು ಗಮನಿಸಲು ಶುರುಮಾಡಿಕೊಂಡೆ. ಪರೀಕ್ಷೆ ಇದ್ದಷ್ಟು ದಿನ ಬಟ್ಟೆ ಒಗೆಯಲಿಲ್ಲ . ಅದೇ ಹರಿದ ಚೂಡಿದಾರದಲ್ಲಿ ಮಾನ ಕಾಪಾಡಿಕೊಳ್ಳುತ್ತಿದ್ದಳು. ರಾತ್ರಿ ಮಲಗುವ ಮುನ್ನ ಪೆನ್ನು ಎಂಬ ಶಸ್ತ್ರವನ್ನು ದೇವರಿಗೆ ಒಪ್ಪಿಸಿ ಬೆಳಗ್ಗೆ ಅದನ್ನು ಹಿಡಿದು ಹತ್ತು ನಿಮಿಷದ ಪ್ರಾರ್ಥನೆ ಸಲ್ಲಿಸಿ ಕಾಲೇಜಿನ ಕಡೆ ನಡೆಯುತ್ತಿದ್ದಳು. ಹಾಸ್ಟೆಲಿನಲ್ಲಿ ಓದುವಾಗಲೂ ಅಷ್ಟೇ, ಹರಿದ ಒಂದು ಅಂಗಿ, ಜಾಕೆಟು, ಮಣ್ಣಿನ ಬಣ್ಣದ ಪ್ಯಾಂಟು, ಓದುವ ಮುನ್ನ ತನ್ನ ಇಷ್ಟ ದೇವರನ್ನೆಲ್ಲ ನೆನೆಸಿ ಒಂದು ಕಾಗದದಲ್ಲಿ ಬರೆದು, ಒಂದು ಕಣ್ಣು ದೇವರ ಹೆಸರುಗಳನ್ನು ನೋಡುತ್ತಿದ್ದರೆ, ಇನ್ನೊಂದು ಪುಸ್ತಕವನ್ನು ನೋಡುತ್ತಿರುತ್ತದೆ. ಮುಂಜಾನೆ ನಿದಿರೆಯಿಂದ ಎದ್ದು ಒಂದುವೇಳೆ ತಪ್ಪಿ ನಮ್ಮ ಮುಖ ಕಂಡರೂ ವಾಪಸು ಮಲಗಿ ಮತ್ತೆ ಎದ್ದು ಅರ್ಧ ತಾಸು ದೇವರ ಜೊತೆ ಒಪ್ಪಂದದ ಮಾತುಕತೆಯಾಗುತ್ತದೆ. ಬಳಸೋ ಕನ್ನಡಿಯೂ ಒಂದೇ ಆಗಿರಬೇಕು. ಹೋಗೋವಾಗ ಪೊರಕೆಯನ್ನು ನೋಡೋ ಹಾಗೂ ಇಲ್ಲ . ಇನ್ನೂ ಏನೇನೋ ! ಇಷ್ಟೆಲ್ಲ ನಡೆಯುತ್ತಿದ್ದರೂ ನನಗೆ ಗೊತ್ತೇ ಇರಲಿಲ್ಲ !
ದೀಪ್ತಿ ಚಾಕೋಟೆ ವಿ. ವಿ. ಕಾಲೇಜು, ಮಂಗಳೂರು