Advertisement

ಉತ್ತಮ ಹವ್ಯಾಸ ವ್ಯಕ್ತಿತ್ವ ವಿಕಸನಕ್ಕೆ ಬುನಾದಿ

05:44 AM Jan 11, 2019 | |

ಕಲಬುರಗಿ: ಉತ್ತಮ ಹವ್ಯಾಸಗಳು, ಏಕಾಗ್ರತೆ, ಆಸಕ್ತಿಗಳು ವ್ಯಕ್ತಿತ್ವ ವಿಕಸನಕ್ಕೆ ಭದ್ರ ಬುನಾದಿ ಆಗಬಲ್ಲವು. ಆದ್ದರಿಂದ ವಿದ್ಯಾರ್ಥಿಗಳು ಹದಿಹರೆಯದ ಮನೋದೈಹಿಕ ಸಮಸ್ಯೆಗಳಿಂದ ಹೊರಬಂದು ಶೈಕ್ಷಣಿಕ ಸಾಧನೆ ಕಡೆಗೆ ಗಮನಹರಿಸಿ ಸಾಧನೆ ಮಾಡುವಂತೆ ಮನೋತಜ್ಞ ಡಾ| ಸಿ.ಆರ್‌. ಚಂದ್ರಶೇಖರ ಸಲಹೆ ನೀಡಿದರು.

Advertisement

ಕಾಯಕ ಫೌಂಡೇಶನ್‌ ವಸತಿ ಸಹಿತ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸ್ತ್ರೀರೋಗ ತಜ್ಞೆ, ವೈದ್ಯ ಸಾಹಿತಿ ದಿ| ಡಾ| ಲೀಲಾವತಿ ದೇವದಾಸ ಅವರ ಸಂಸ್ಮರಣೆ ನಿಮಿತ್ತ ಕಾಯಕ ಫೌಂಡೇಷನ್‌ ಎಜುಕೇಷನ್‌ ಟ್ರಸ್ಟ್‌ , ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್‌ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಅಲ್ಪ ಸಂತೋಷಗಳಿಗೆ ಮನಸ್ಸು ಹರಿ ಬಿಡಬಾರದು. ಓದಿಗೆ ಮನಸ್ಸು ಏಕಿಕೃತ ಇಟ್ಟುಕೊಳ್ಳುವುದು ಬಹು ಮುಖ್ಯವಾಗಿದೆ. ಒಟ್ಟಾರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ಸತಜೆಗಳಾಗಿ ರೂಪುಗೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಯಕ ಶಿಕ್ಷಣ ಸಂಸ್ಥೆಯ ಶಿವರಾಜ ಟಿ. ಪಾಟೀಲ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ಪ್ರಾಮಾಣಿಕತೆ, ದಕ್ಷತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು.

ಡಾ| ಇಂದಿರಾ ವೀರಭದ್ರಪ್ಪ ಮಾತನಾಡಿ, ದಿ| ಡಾ| ಲೀಲಾವತಿ ದೇವದಾಸ ಅವರ ಶ್ರದ್ಧೆ, ಕರ್ತವ್ಯ ಪ್ರಜ್ಞೆ, ಭೋಧನಾ ಶೈಲಿ, ಸಮಾಜಮುಖೀ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಇದೇ ವೇಳೆ ಮೂರು ಪುಸ್ತಕ ಬಿಡುಗಡೆ ಮಾಡಲಾಯಿತು. ಸ್ವಪ್ನ ರೆಡ್ಡಿ ಪಾಟೀಲ, ಎಸ್‌.ಎಸ್‌. ಹಿರೇಮಠ, ಪಾಚಾರ್ಯ ಡಾ| ಶಶಿಶೇಖರ ರೆಡ್ಡಿ, ಜಿ.ಎಂ. ಸಾಲಿಮಠ ಹಾಜರಿದ್ದರು. ರೋಷಿನಿ ಎನ್‌. ಘೋಟ್ಕೆ ಸ್ವಾಗತಿಸಿದರು. ಭಾಗ್ಯಶ್ರೀ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next