Advertisement
ಸೋಮವಾರ ಇಲ್ಲಿನ ಡಿ.ಸಿ. ಕಚೇರಿ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರೊಂದಿಗೆ ಕಂದಾಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ. ಅಡಳಿತದಲ್ಲಿ ಬದಲಾವಣೆ ತರಬೇಕು. ಸರಳೀಕರಣಕ್ಕೆ ಆದ್ಯತೆ ಕೊಡಿ. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿಗಳು ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದ ಸಚಿವರು, ಕಂದಾಯ ಸಚಿವನಾದ ಮೇಲೆ ಈಗಾಗಲೆ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನೆ ನಡೆಸಿದ್ದು, ಇಂದು ಇಲ್ಲಿ ನಡೆಸಲಾಗುತ್ತಿದೆ. ಮುಂದೆ ಜಿಲ್ಲಾವಾರು ಸಹ ಪ್ರಗತಿ ಪರಿಶೀಲನೆ ಮಾಡುವುದಾಗಿ ಹೇಳಿದರು.
Related Articles
Advertisement
ಸಿಡಿಲು, ಮಿಂಚು ಕುರಿತು ಅರಿವು ಮೂಡಿಸಿ: ಕಲಬುರಗಿ ವಿಭಾಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ 3 ತಿಂಗಳಿನಲ್ಲಿ 24 ಸೇರಿದಂತೆ ರಾಜ್ಯದಲ್ಲಿ ಈ ವರ್ಷ ಸಿಡಿಲು, ಮಿಂಚಿನಿಂದ 80 ಜನ ಸಾವನಪ್ಪಿದ್ದಾರೆ. ಸಿಡಿಲು ಕುರಿತು ಹೆಚ್ಚಿನ ಅರಿವು ನೀಡಿದಲ್ಲಿ ಈ ಸಾವು ತಪ್ಪಿಸಬಹುದಿತ್ತು. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಡಿ. ಮಳೆಗಾಲ ಸಂದರ್ಭದಲ್ಲಿ ಸಿಡಿಲಿನಿಂದ ಸಾವನಪ್ಪುವರ ಸಂಖ್ಯೆ ಇತ್ತೀಚಿನ ವರ್ಷದಲ್ಲಿ ಹೆಚ್ಚುತ್ತಿದೆ. ಅರಿವಿನ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಇದನ್ನು ನಿಯಂತ್ರಿಸಬೇಕಿದೆ. ನೊಂದ ಕುಟುಂಬಗಳಿಗೆ ಸರ್ಕಾರ 24 ಗಂಟೆಯಲ್ಲಿ ಪರಿಹಾರ ನೀಡಬಹುದು, ಆದರೆ ಹೋದ ಜೀವ ಮತ್ತೆ ಮರುಕಳಿಸಲು ಸಾಧ್ಯವಿಲ್ಲ ಎಂದರು.
ವಿಪತ್ತು ನಿರ್ವಹಣೆ ಕೆಲಸ ವಿಳಂಬ ಸಲ್ಲ: ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ 2020-21ನೇ ಸಾಲಿನ ನೆರೆ ಹಾವಳಿಯ ಕಾಮಗಾರಿಗಳು ಇನ್ನು ಪ್ರಗತಿಯಲ್ಲಿರುವುದಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿ, ರಸ್ತೆ, ಶಾಲೆ, ಸೇತುವೆ ದುರಸ್ತಿಗೆ ವಿಪತದರು ನಿರ್ವಹಣೆಯಲ್ಲಿ 1-2 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಮಳೆಗಾಲ ಹೋಗಿ ಮತ್ತೆ ಮಳೆಗಾಲ ಬಂದರೂ ಕೆಲಸ ಇನ್ನು ಮುಗಿಯಲ್ಲ ಎಂದರೆ ಏನರ್ಥ. ನೀಡಲಾದ ಅನುದಾನ ಉದ್ದೇಶ ಈಡೇರುತ್ತಾ ಎಂದು ಡಿ.ಸಿ.ಗಳನ್ನು ಪ್ರಶ್ನಿಸಿದರು. ಕಲಬುರಗಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ 2020-21ರಲ್ಲಿ 640 ಕೆಲಸ ಕೈಗೆತ್ತಿಕೊಂಡಿದ್ದು, ಇದರಲ್ಲಿ 514 ಮುಕ್ತಾಯವಾಗಿದ್ದು, 132 ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಂದಿನ 15 ದಿನದಲ್ಲಿ ಮುಗಿಸುವುದಾಗಿ ಸಚಿವರಿಗೆ ತಿಳಿಸಿದರು. ಒಟ್ಟಾರೆಯಾಗಿ ಹಳೇ ವರ್ಷದ ವಿಪತ್ತು ನಿರ್ವಹಣೆ ಕೆಲಸಗಳನ್ನು ಮತ್ತು ಕೊಪ್ಪಳ, ಯಾದಗಿರಿಯಲ್ಲಿ ಕೋವಿಡ್ ನಿರ್ವಹಣೆಯ ಬಾಕಿ ಅನುದಾನ ಮುಂದಿನ 10 ದಿನದಲ್ಲಿ ಖರ್ಚು ಮಾಡಿ ಇಲ್ಲ ಸರ್ಕಾರಕ್ಕೆ ಅನುದಾನ ಅಧ್ಯರ್ಪಿಸಿ ಎಂದು ಡಿ.ಸಿ.ಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.