Advertisement
ಇದು ವಿದೇಶದಲ್ಲಿ ಚಳಿಗಾಲ ಆರಂಭ ವಾಗುವುದಕ್ಕೆ ಮುನ್ನ ನಡೆದ ಒಂದು ಕಥೆ. ಪುಟ್ಟ ಪಕ್ಷಿಯೊಂದು ಚಳಿ ಕಾಲಿಡುವುದಕ್ಕೆ ಮುನ್ನವೇ ಬೆಚ್ಚಗಿನ ಪ್ರದೇಶಕ್ಕೆ ವಲಸೆ ಹೋಗಬೇಕಿತ್ತು. ವಾತಾವರಣವನ್ನು ಸ್ವಲ್ಪ ಹೆಚ್ಚು ಕಾಲ ಆಸ್ವಾದಿಸುತ್ತ ಅಲ್ಲೇ ಉಳಿಯಿ ತದು. ಅಷ್ಟರಲ್ಲಿ ಚಳಿ ಆರಂಭವಾಗಿಯೇ ಬಿಟ್ಟಿತು, ಮಂಜು ಬೀಳಲಾರಂಭವಾಯಿತು. ಹಕ್ಕಿ ಸ್ವಲ್ಪ ದೂರ ಹಾರುವಷ್ಟರಲ್ಲಿ ಮರಗಟ್ಟಿ ಕೆಳಕ್ಕೆ ಬಿದ್ದುಬಿಟ್ಟಿತು.
Related Articles
Advertisement
ನಾವೂ ಹಲವರಿಗೆ ಗೆಳೆಯರಾಗಿರುತ್ತೇವೆ. ಅವರ ದುರ್ಗುಣಗಳನ್ನು ಸದಾ ಎತ್ತಿ ತೋರಿಸಬೇಕು ಎಂಬುದು ಇದರರ್ಥವಲ್ಲ. ಆದರೆ ಗೆಳೆಯರ ನಡುವೆ, ಜನರ ದೃಷ್ಟಿಯಲ್ಲಿ ಕೆಟ್ಟವರಾಗಲು ನಾವು ಸದಾ ಸಿದ್ಧರಾಗಿರ ಬೇಕು, ಆ ಧೈರ್ಯ ನಮಗಿರಬೇಕು. ನಾವು ಎಲ್ಲರಿಗೂ ಎಲ್ಲ ಕಾಲಗಳಲ್ಲಿಯೂ ಒಳ್ಳೆಯ ವರಾಗಿಯೇ ಇರಲು ಸಾಧ್ಯವಿಲ್ಲ. ಎಲ್ಲರಿಗೂ ಸಂತೋಷವಾಗುವ ಹಾಗೆ ಇರಬೇಕಾದರೆ ಎಷ್ಟೋ ಅಸಂತೋಷಗಳನ್ನು ನಾವು ನುಂಗಿ ಕೊಳ್ಳಬೇಕಾಗುತ್ತದೆ. ಕೊನೆಗೆ ನಾವು ಅಸಂತೋಷಗಳ ಮೂಟೆ ಆಗಬೇಕಾದೀತು.
ನಮ್ಮ ಗೆಳೆಯನ ಹುಳುಕನ್ನು ಹೇಳಿಯೂ ಆತನನ್ನು ಪ್ರೀತಿಸುವ, ಆತನಿಗಾಗಿ ಸಹಾನು ಭೂತಿ ಹೊಂದುವ ಧೈರ್ಯ ನಮ್ಮಲ್ಲಿರಬೇಕು. ಅದುವೇ ನಿಜವಾದ ಗೆಳೆತನ. “ನಿನ್ನ ಬೆನ್ನನ್ನು ನಾನು, ನನ್ನ ಬೆನ್ನನ್ನು ನೀನು ತಟ್ಟು’ ಎಂಬಂಥದ್ದು ನೈಜ ಸ್ನೇಹವಲ್ಲ.
ಸ್ನೇಹಿತರಾದ ಮೂವರು ಅರಸರು ತಮ್ಮ ತಮ್ಮ ಸೈನ್ಯ ತುಕಡಿಗಳ ಜತೆಗೆ ಪ್ರವಾಸ ಹೊರಟಿದ್ದರು. ಮಾರ್ಗ ಮಧ್ಯೆ ತಮ್ಮ ಯೋಧರ ನಿಷ್ಠೆ, ಧೈರ್ಯಗಳ ಮಾತು ಬಂತು. ಒಂದನೇ ರಾಜ, “ನನ್ನ ಸೈನಿಕರು ಈ ಬೆಟ್ಟದ ಮೇಲಿಂದ ಹಾರು ಎಂದರೂ ಹಿಂದೆ ಮುಂದೆ ನೋಡದೆ ಹಾರುತ್ತಾರೆ’ ಎಂದ. ಪರೀಕ್ಷೆಗಾಗಿ ಹಾಗೆ ಆದೇಶಿಸಿದಾಗ ಅವನ ಯೋಧ ಹಾಗೆಯೇ ಮಾಡಿದ. ಎರಡನೆಯ ವನದೂ ಅದೇ ಕಥೆ. ಮೂರನೆಯ ರಾಜ ಮಾತ್ರ ಮೌನವಾಗಿದ್ದ. ಉಳಿದಿಬ್ಬರು ಕುಟುಕಿದಾಗ ಆತನೂ ತನ್ನ ಸೈನಿಕರ ಲ್ಲೊಬ್ಬನನ್ನು ಕರೆದು ಬೆಟ್ಟದ ಮೇಲಿಂದ ಹಾರುವಂತೆ ಆದೇಶಿಸಿದ.
ಆಗ ಆ ಸೈನಿಕ, “ದೊರೆಯೇ, ನೀವು ಈ ದಿನವೂ ಅಮಲು ಪದಾರ್ಥ ಸೇವಿಸಿದ ಹಾಗಿದೆ. ಕ್ಷಮಿಸಿ, ಇಲ್ಲಿಂದ ಹಾರಲಾರೆ, ಹಾರಿದರೆ ನಿಷ್ಠಾವಂತ ಯೋಧನೊಬ್ಬನನ್ನು ನೀವು ಕಳೆದುಕೊಳ್ಳುತ್ತೀರಿ’ ಎಂದ.
ಧೈರ್ಯ, ಕೆಚ್ಚು ಎಂದರೆ ಇದು. ಗೆಳೆತನ, ಅಧಿಕಾರಿ- ದುಡಿಮೆಗಾರ, ಮಾಲಕ- ನೌಕರ ತಂದೆ- ಮಕ್ಕಳು… ಹೀಗೆ ಎಲ್ಲ ಬಗೆಯ ಸಂಬಂಧಗಳಲ್ಲೂ ಇರಬೇಕಾದಂಥದ್ದು.
( ಸಾರ ಸಂಗ್ರಹ)