Advertisement

Madhya Pradesh: ಟ್ರೈನಿ ಸೇನಾಧಿಕಾರಿ ಮೇಲೆ ಹಲ್ಲೆ, ಯುವತಿ ಮೇಲೆ ಅ*ತ್ಯಾಚಾರ- ಇಬ್ಬರ ಬಂಧನ

12:59 PM Sep 12, 2024 | Team Udayavani |

ಭೋಪಾಲ್(ಮಧ್ಯಪ್ರದೇಶ): ಪಿಕ್‌ ನಿಕ್‌ ಗೆ ತೆರಳಿದ್ದ ಸಂದರ್ಭದಲ್ಲಿ ಇಬ್ಬರು ಟ್ರೈನಿ ಸೇನಾ ಅಧಿಕಾರಿಗಳ ಮೇಲೆ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಅವರ ಗೆಳೆತಿಯೊಬ್ಬಳ ಮೇಲೆ ಗನ್‌ ಪಾಯಿಂಟ್‌ ಮೂಲಕ ಬೆದರಿಸಿ ಅ*ತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ನಡೆದಿದೆ.

Advertisement

ಮಂಗಳವಾರ ತಡರಾತ್ರಿ ಗುಂಪಿನೊಂದಿಗೆ ಬಂದು ದರೋಡೆ ಮಾಡುವ ಉದ್ದೇಶದಿಂದ ದಾಳಿ ನಡೆಸಿದ್ದರು ಎಂದು ವರದಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಅದರಲ್ಲೊಬ್ಬ ಕ್ರಿಮಿನಲ್‌ ಹಿನ್ನಲೆ ಹೊಂದಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂದೋರ್‌ ಸಮೀಪದ ಮೌ ಸೇನಾ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಅಧಿಕಾರಿಗಳು, ತಮ್ಮ ಗೆಳೆತಿಯರೊಡನೆ ಛೋಟಿ ಜಾಮ್‌ ಪ್ರದೇಶಕ್ಕೆ ತೆರಳಿದ್ದರು. ತಡರಾತ್ರಿ ವೇಳೆ ಸುಮಾರು ಎಂಟು ಜನರ ತಂಡ ಪಿಸ್ತೂಲ್‌, ಚೂರಿ ಹಾಗೂ ಬಡಿಗೆಯೊಂದಿಗೆ ಸುತ್ತುವರಿದು ಟ್ರೈನಿ ಅಧಿಕಾರಿಗೆ ಥಳಿಸಿದ್ದರು. ನಂತರ ಅಧಿಕಾರಿಯ ಗೆಳತಿಯಲ್ಲಿದ್ದ ಹಣ, ಮೊಬೈಲ್‌ ದೋಚಿ ಆಕೆಯ ಮೇಲೆ ಸಾಮೂಹಿಕವಾಗಿ ಅ*ತ್ಯಾಚಾರ ಎಸಗಿದ್ದರು ಎಂದು ವರದಿ ವಿವರಿಸಿದೆ.

ದರೋಡೆಕೋರರು ಒಬ್ಬ ಅಧಿಕಾರಿ ಮತ್ತು ಯುವತಿಯನ್ನು ಒತ್ತೆಯಾಳುಗಳನ್ನಾಗಿ ಮಾಡಿ, ಮತ್ತೊಬ್ಬ ಅಧಿಕಾರಿ ಮತ್ತು ಯುವತಿ ಬಳಿ ಹತ್ತು ಲಕ್ಷ ರೂಪಾಯಿ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು.

Advertisement

ಇದರಿಂದ ಗೊಂದಲಕ್ಕೊಳಗಾದ ಅಧಿಕಾರಿ ಆರ್ಮಿ ಕಾಲೇಜಿಗೆ ಬಂದು ತನ್ನ ಕಮಾಂಡಿಂಗ್‌ ಅಧಿಕಾರಿಗೆ ಮಾಹಿತಿ ನೀಡಿದ್ದು, ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಸೇನಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ವೇಳೆ ದಾಳಿಕೋರರು ಪರಾರಿಯಾಗಿದ್ದರು. ನಂತರ ಶೋಧ ಕಾರ್ಯದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಗಾಯಗೊಂಡ ಆರ್ಮಿ ಅಧಿಕಾರಿಗಳನ್ನು ಮೌ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಿದ್ದು, ಚಿಕಿತ್ಸೆ ನೀಡಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಒಬ್ಬ ಯುವತಿ ಮೇಲೆ ಅ*ತ್ಯಾಚಾರ ನಡೆದಿರುವುದು ಖಚಿತವಾಗಿರುವುದಾಗಿ ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next