Advertisement

ಶುಭ ಶುಕ್ರವಾರ: ವಿಶೇಷ ಪ್ರಾರ್ಥನೆ

09:38 PM Apr 19, 2019 | Lakshmi GovindaRaju |

ದೇವನಹಳ್ಳಿ: ನಗರದ ಪರ್ವತಪುರ ಬ್ಯಾಪ್ಟಿಸ್ಟ್‌ ಚರ್ಚ್‌ನಲ್ಲಿ ಶುಭ ಶುಕ್ರವಾರ(ಗುಡ್‌ಫ್ರೈಡೆ)ದ ಅಂಗವಾಗಿ ಕೈಸ್ತ ಸಮುದಾಯದವರು ಏಸುಕ್ರಿಸ್ತನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ಚರ್ಚ್‌ ಪಾದ್ರಿ ಫಾದರ್‌ ಜೆ.ಡಿ.ಎನುಷ್‌, ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವನ್ನು ನೆನಪಿಸುವ ಸಂದರ್ಭ ಇದಾಗಿದೆ.

ಈಸ್ಟರ್‌ ಭಾನುವಾರದ ಹಿಂದಿನ ಶುಕ್ರವಾರದಂದು ಪಸ್ಟಾಲ್‌ ಟ್ರೈದುಮ್ನ ಭಾಗವಾಗಿ ಪವಿತ್ರ ವಾರದ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ ಮತ್ತು ಪಾಸೋವರ್ನ ಯಹೂದಿ ಆಚರಣೆಯೊಂದಿಗೆ ಇದು ಸಹಜವಾಗಿರಬಹುದು.

ಇದು ಪವಿತ್ರ ಶುಕ್ರವಾರ, ದೊಡ್ಡ ಶುಕ್ರವಾರ ಮತ್ತು ಕಪ್ಪು ಶುಕ್ರವಾರ ಎಂದು ಕೂಡ ಕರೆಯಲ್ಪಡುತ್ತದೆ ಎಂದು ಹೇಳಿದರು.

ಯೇಸು ದೇವ ಮಾನವ: ಪ್ರತಿಯೊಬ್ಬರೂ ಶಾಂತಿ, ಸಮಾಧಾನ ಹಾಗೂ ಲೋಕಕಲ್ಯಾಣಕ್ಕಾಗಿ ಲೋಕಕ್ಕೆ ಬೆಳಕಾದ ಯೇಸುಕ್ರಿಸ್ತನಲ್ಲಿ ಪ್ರಾರ್ಥನೆ ಸಲ್ಲಿಸಬೇಕು. ಏಸುಕ್ರಿಸ್ತ ಮಾನವನಾಗಿ ಭೂಮಿಗೆ ಬಂದು ಜನರ ಕಷ್ಟ, ಕಾರ್ಪಣ್ಯಗಳನ್ನು ನೋಡಿದ್ದಾರೆ.

Advertisement

ಜನರ ಕಷ್ಟ, ಕಾರ್ಪಣ್ಯಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿಯೇ ಸ್ಮರಿಸುತ್ತಿದ್ದೇವೆ. ಕ್ರಿಸ್ತ ಒಂದು ಜಾತಿಯವರಲ್ಲ. ಏಸುಕ್ರಿಸ್ತ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಜನರ ನೋವು, ನಲಿವುಗಳ ಪರಿಹಾರಕ್ಕೆ ಅವತರಿಸಿದ ದೇವ ಮಾನವರಾಗಿದ್ದಾರೆ ಎಂದರು.

ಉತ್ತಮ ಮಳೆ ಕರುಣಿಸಲಿ: ಏಸು ಪ್ರಭು ಇಲ್ಲಿನ ಬರಗಾಲವನ್ನು ಹೋಗಲಾಡಿಸಿ, ಉತ್ತಮ ಮಳೆ ಕರುಣಿಸಿ ರೈತರು ಸಮೃದ್ಧ ಜೀವನ ನಡೆಸುವಂತಾಗಲಿ. ನೆನ್ನೆ ಅಷ್ಟೇ ಶಾಂತಿಯುತ ಮತದಾನ ಆಗಿರುವುದರಿಂದ ಮುಂದೆ ಸುಭದ್ರ ಸರ್ಕಾರ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚರ್ಚ್‌ನ ಅಮೇರಿಕಾದ ಜಾಜ್‌ ದುಬಿಕ್ಷಾ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾದಿಗಳು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next