Advertisement

ಕೌಶಲಾಭಿವೃದ್ಧಿಯಿಂದ ಉತ್ತಮ ಭವಿಷ್ಯ: ಪ್ರಮೋದ್‌

03:45 AM Jul 02, 2017 | Team Udayavani |

ಉಡುಪಿ: ಯುವಜನತೆ ವಿದ್ಯಾಭ್ಯಾಸದ ಜತೆಗೆ ಕೌಶಲಗಳನ್ನು ವೃದ್ಧಿಗೊಳಿಸುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಉಡುಪಿ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಸಂಜೀವಿನಿ – ಕೆಎಸ್‌ಆರ್‌ಎಲ್‌ಪಿಎಸ್‌, ರಾಜೀವ್‌ ಗಾಂಧಿ ಚೈತನ್ಯ ಯೋಜನೆ, ಡಿಡಿಯು-ಜಿಕೆವೈ ಆಶ್ರಯದಲ್ಲಿ ನಡೆದ ಗ್ರಾಮೀಣ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಡಿಡಿಯು-ಜಿಕೆವೈ ಮತ್ತು ಆರ್‌ಜಿಸಿವೈ ಯೋಜನೆಯಡಿ ಅಭ್ಯರ್ಥಿಗಳ ಒಗ್ಗೂಡಿಸುವಿಕೆ, ಆಯ್ಕೆ ಮತ್ತು ಉದ್ಯೋಗ ಕಲ್ಪಿಸಲು ತಾಲೂಕು ಮಟ್ಟದ ಕೌಶಲ ತರಬೇತಿ ಮಾಹಿತಿ ಮೇಳದಲ್ಲಿ ಮಾತನಾಡಿದರು.

6 ಕೋ.ರೂ. ಮೀಸಲು
ಕ್ರೀಡಾ ಇಲಾಖೆಯಲ್ಲಿ ಯುವಜನತೆಗೆ ಕೌಶಲ ತರಬೇತಿ ನೀಡಲು 6 ಕೋ.ರೂ. ಮೀಸಲಿಟ್ಟಿದೆ. ಯುವ ಜನತೆ ಉತ್ತಮ ಅಂಕಗಳೊಂದಿಗೆ ಕೌಶಲ ಅಭಿವೃದ್ಧಿಯನ್ನೂ ಸಹ ರೂಢಿಸಿಕೊಳ್ಳಬೇಕು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ಯುವಜನತೆ ಕೀಳರಿಮೆ ಬಿಟ್ಟು ಸಾಮಾಜಿಕ ಜಾಲತಾಣಗಳ ಮೂಲಕಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ಪಡೆದು ಕೌಶಲ ಅಭಿವೃದ್ಧಿಪಡಿಸಿ ಕೊಳ್ಳಬೇಕು ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಕೌಶಲಾಭಿ ವೃದ್ಧಿ ಕೇಂದ್ರ ತೆರೆಯಲು ಈಗಾಗಲೇ ಸ್ಥಳ ನಿಗದಿಯಾಗಿದ್ದು, ಆ ಮೂಲಕ ಯುವಕರಿಗೆ ಅಗತ್ಯ ಕೌಶಲ ತರಬೇತಿ ನೀಡಿ, ಕಂಪೆನಿಗಳನ್ನು ಆಹ್ವಾನಿಸಿ, ಉದ್ಯೋಗಾವಕಾಶ ಒದಗಿಸಲಾಗುವುದು. ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮ ಸಂಪೂರ್ಣ ಉಚಿತವಾಗಿದೆ ಎಂದು ಸಚಿವ ಪ್ರಮೋದ್‌ ಹೇಳಿದರು.

ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ತಾ.ಪಂ. ಸದಸ್ಯೆ ಡಾ| ಸುನೀತಾ, ಜಿ.ಪಂ. ಯೋಜನಾ ನಿರ್ದೇಶಕಿ ನಯನಾ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ರುಡ್‌ಸೆಟ್‌ನ ಕರುಣಾಕರ್‌ ಜೈನ್‌ ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next