Advertisement

ಸಚ್ಚಾರಿತ್ರ್ಯಾದಿಂದ ಸೌಭಾಗ್ಯ ಪ್ರಾಪ್ತಿ

12:18 PM Aug 21, 2018 | |

ಕಲಬುರಗಿ: ಸೌಭಾಗ್ಯ ಪಡೆಯಬೇಕು ಎಂಬ ಅಪೇಕ್ಷೆಯಿರುವ ಮಾನವರು ಸೌಶೀಲ್ಯ ಪಡೆಯಬೇಕು. ಗುಣವಂತರಾಗಬೇಕು. ಬಹು ಮುಖ್ಯವಾಗಿ ಧರ್ಮಾನುಷ್ಠಾನ ಮಾಡಬೇಕು. ಸಕಲರ ಸಮೃದ್ಧಿ ಬಯಸಬೇಕು. ಧರ್ಮ ಬೇಡ, ಗುಣವಂತಿಕೆ ಬೇಡ, ಸೌಭಾಗ್ಯ, ಸಮೃದ್ಧಿಗಳು ನಮ್ಮಲ್ಲಿ ಇರಲಿ ಎಂದು ಬಯಸಿದರೆ ಅದು ಈಡೇರುವುದಿಲ್ಲ ಎಂದು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಹೇಳಿದರು.

Advertisement

ಚಾತುರ್ಮಾಸ್ಯ ಅಂಗವಾಗಿ ಎನ್‌.ವಿ. ಸಂಸ್ಥೆಯ ಶ್ರೀ ಸತ್ಯಪ್ರಮೋದ ಸಭಾಮಂಟಪದಲ್ಲಿ ಪ್ರವಚನ ನೀಡಿದ ಶ್ರೀಗಳು, ಸಂಪತ್ತು ಅಂದರೆ ದುಡ್ಡು ಮಾತ್ರವಲ್ಲ. ಲಕ್ಷ್ಮೀ ಅಂದರೆ ದುಡ್ಡು ಅಂತ ತಪ್ಪು ತಿಳಿದಿದ್ದಾರೆ. ಲಕ್ಷ್ಮೀ ಕೇವಲ ಸಂಪತ್ತಿನ ದೇವತೆಯಲ್ಲ. ಅಧಿಕಾರ, ಸಂಪತ್ತು, ದ್ರವ್ಯ, ಧನ, ಧೈರ್ಯ, ಸೌಂದರ್ಯ, ಕೀರ್ತಿ, ವಿಜಯ, ಕ್ಷಮಾಗುಣ, ಪ್ರೀತಿ, ವಿಶ್ವಾಸ, ಉತ್ತಮ ಚಾರಿತ್ರ್ಯಾ, ಗುಣಗಳು ಮಹಾಲಲಕ್ಷ್ಮೀ ಅನುಗ್ರಹದಿಂದ ಬರುವಂಥವು.

ಅನ್ಯಾಯ, ವಂಚನೆ, ಲಂಚ, ಮೋಸ, ಇನ್ನೊಬ್ಬರ ಕುತ್ತಿಗೆ ಕತ್ತರಿಸಿ ತಂದ ಸಂಪತ್ತು ನೆಮ್ಮದಿ ನೀಡುವುದಿಲ್ಲ. ಭಾರಿ ಸಂಪತ್ತು ಬಂತು ಅಂತ ಮೊದಲು ಅನಿಸುತ್ತದೆ. ಮನುಷ್ಯ ಮೊದಲು ಅಧರ್ಮದಿಂದ ಬೆಳೆಯುತ್ತಾನೆ. ಉಚ್ಚಾಯ ಆಗುತ್ತದೆ. ಇನ್ನು ತನ್ನ ಕೈಹಿಡಿಯೋರೇ ಇಲ್ಲ ಅಂತ ಅಂದುಕೊಳ್ಳುತ್ತಾನೆ. ಆದರೆ ಒಂದು ಸಲ ದೇವರು ಹೊಡೆತ ಕೊಡುತ್ತಾನೆ. ಆಗ ಬೇರು ಸಮೇತ ಕಿತ್ತುಹೋಗುತ್ತಾನೆ. ಹಾಗಾಗಿ ಅಧರ್ಮದಿಂದ ಸಂಪತ್ತು ಗಳಿಸಬಾರದು.

ಗುರುಗಳು, ಹಿರಿಯರು, ಬಂಧುಗಳು, ಅತಿಥಿಗಳನ್ನು ಗೌರವದಿಂದ ನೋಡಿಕೊಳ್ಳಬೇಕು. ಇವುಗಳೇ ಸಂಪತ್ತಿನ ಮೂಲಗಳು. ನಮ್ಮ ಆದರಾತಿಥ್ಯಗಳಿಂದ ಸಂಪ್ರೀತರಾಗುವ ಅವರೆಲ್ಲರ ಆಸೆ, ಶುಭಾಕಾಂಕ್ಷೆಗಳನ್ನು ಭಗವಂತ ನೆರವೇರಿಸಿ ಆಶೀರ್ವದಿಸುತ್ತಾನೆ. ಇಲ್ಲದಿದ್ದಲ್ಲಿ ಅವರ ಶಾಪವನ್ನೂ ಸತ್ಯವಾಗಿಸುತ್ತಾನೆ. ಹಾಗಾಗಿ ಮನುಷ್ಯ ಎಚ್ಚರದಿಂದ ಇರಬೇಕು. ಗುರುಗಳ ಸೇವೆ ಮಾಡಬೇಕು. ಮನೆಯನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಶುದ್ಧ ಚಾರಿತ್ರ್ಯಾ, ಬ್ರಹ್ಮಚರ್ಯದಿಂದ ಜೀವನ ನಡೆಸಬೇಕು ಎಂದು ವಿವರಣೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next