Advertisement
ಒಂದು ದಿನ ತೋಟದ ಕೆಲಸಗಾರರು ಯಾರೂ ಬರಲಿಲ್ಲ. ಆ ದಿನವೇ ಹೂಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಬೇಕಾಗಿತ್ತು. ಹೀಗಾಗಿ ರಾಮದಾಸ ಮತ್ತು ಅವನ ಪತ್ನಿ ಇಬ್ಬರೇ ಹೂಗಳನ್ನು ಕೊಯ್ಯುವ ಕೆಲಸ ಮಾಡಬೇಕಾಗಿತ್ತು. ರಾಮದಾಸನ ಪತ್ನಿ ಹೂವುಗಳನ್ನು ತನಗೆ ಇಷ್ಟ ಬಂದ ಹಾಗೆ ಕೊಯ್ಯುತ್ತಿದ್ದಳು. ಇದರಿಂದ ಕೆಲವು ಹೂಗಳ ದಳಗಳು ಉದುರಿ ಹೋದವು. ಅದನ್ನು ಕಂಡ ರಾಮದಾಸ ಬಹಳ ಕೋಪದಿಂದ “ಹೂವುಗಳನ್ನು ಏಕೆ ಹಾಗೆ ಕೊಯ್ಯುತ್ತಿರುವೆ? ಹೂವುಗಳು ತುಂಬಾ ನಾಜೂಕಾಗಿರುತ್ತವೆ. ಅವುಗಳನ್ನು ತುಂಬಾ ಜಾಗರೂಕತೆಯಿಂದ ಕೊಯ್ಯಬೇಕು. ನಮಗೆ ಇಷ್ಟ ಬಂದ ಹಾಗೆ ಕೊಯ್ಯುತ್ತಿದ್ದರೆ ಅವು ಹಾಳಾಗುತ್ತವೆ’ ಎಂದು ಗದರಿಸಿದನು. ಆಗ ಅವನ ಪತ್ನಿ “ಹೂಗಳಿಗೆ ಈ ರೀತಿಯಾಗಿ ಹೇಳುತ್ತಿದ್ದೀರಲ್ಲ, ಅದೇ ರೀತಿ ಮಕ್ಕಳು ಕೂಡಾ ಹೂವಿನಂತೆಯೇ ತುಂಬಾ ನಾಜೂಕಾಗಿರುತ್ತಾರಲ್ಲವೆ? ಅವರೊಂದಿಗೆ ನೀವು ಮೃದುವಾಗಿ ವರ್ತಿಸುತ್ತಿದ್ದೀರಾ? ಎಂದಾದರೂ ಮಕ್ಕಳೊಂದಿಗೆ ಪ್ರೀತಿಯಿಂದ ಮಾತನಾಡಿದ್ದೀರ?’ ಎಂದು ರಾಮದಾಸನನ್ನೇ ಪ್ರಶ್ನಿಸಿದಳು. ಪತ್ನಿಯ ಮಾತು ಕೇಳಿ ರಾಮದಾಸನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವನು “ಮಕ್ಕಳೊಂದಿಗೆ ಆ ರೀತಿಯಾಗಿ ನಡೆದುಕೊಂಡಿದ್ದಕ್ಕೆ ನಾನು ಕ್ಷಮೆ ಕೋರುತ್ತೇನೆ, ಇನ್ನು ಮುಂದೆ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ’ ಎಂದು ಪತ್ನಿಗೆ ಮಾತುಕೊಟ್ಟನು. ಪತಿಯ ವರ್ತನೆಯಲ್ಲಿ ಬದಲಾವಣೆ ಬಂದಿದ್ದಕ್ಕೆ ಪತ್ನಿ ತುಂಬಾ ಸಂತೋಷಪಟ್ಟಳು. ತಂದೆಯಲ್ಲಿ ಬದಲಾವಣೆಯನ್ನು ಕಂಡು ಮಕ್ಕಳಿಗೂ ಖುಷಿಯಾಯಿತು.