Advertisement
ಅಂದ ಹಾಗೆ; ನಮ್ಮ ಪ್ರವಾಸೋದ್ಯಮ ಸ್ನಾತಕೋತ್ತರ ವಿಭಾಗದಿಂದ ತೆರಳಿದ್ದ ಉತ್ತರ ಭಾರತದ ಪ್ರವಾಸ ನಿಜವಾಗಿಯೂ ಅಮೋಘ ಎಂದರೆ ತಪ್ಪಾಗದು. ಚಿಕ್ಕ ವಯಸ್ಸಿನಲ್ಲಿ ಪ್ರವಾಸ ಹೋದಾಗಲೆಲ್ಲ “ಮಕ್ಕಳೇ ಅಲ್ಲಿ ಹೋಗಬೇಡಿ, ನಮ್ಮ ಕೈಬಿಡಬೇಡಿ ಎಂಬೆಲ್ಲ ಕಟ್ಟಳೆಗಳಿಗೆ ವಿಧೇಯರಾಗಿರಬೇಕಾಗಿತ್ತು. ಆದರೆ ಈಗ ಆಗಿಲ್ಲ. ನಾವು ಬೆಳೆದು ನಿಂತ ಎಳೆಯರ ಬಳಗದ ಪರ್ಯಟನೆಯಲ್ಲಿ ಸಿಗೋ ಮಜಾನೇ ಬೇರೆ.
ಅಂದು ರಾತ್ರಿ ಊಟ ಮಾಡುವಾಗ ಸಮಯ 8.30. ನಾವೇನೋ ಉತ್ತರಾಖಂಡ ಶೈಲಿಯ ಊಟ ಇರಬಹುದು, ಎಲ್ಲಿ ಹೊಸ ಊಟ ಮಾಡಿ ಆರೋಗ್ಯ ಕೆಟ್ಟು ಹೋಗಬಹುದೋ ಅನ್ನುವ ಅಳುಕಿನಲ್ಲೆ ಊಟಕ್ಕೆ ಸಾಲು ನಿಂತಿದ್ದೆವು. ಘಮಘಮ ಕೋಳಿ ಸಾರು, ಜೀರಾ ರೈಸ್, ಕೋಸಂಬರಿ; ವ್ಹಾ! ರುಚಿ ಅಪ್ಪಟ ನಮ್ಮೂರು, ನಮ್ಮನೆ.
Related Articles
ಮರುದಿನದ ಪಯಣ ಮಸ್ಸೂರಿಯ ಕೆಂಪ್ಟಿ ಜಲಪಾತದತ್ತ. ಅಲ್ಲಿಯ ರಕ್ತ ಹೆಪ್ಪುಗಟ್ಟಬಲ್ಲ ನೀರಲ್ಲಿ ಸ್ವಲ್ಪ ನೀರಾಟ, ದೋಣಿ ವಿಹಾರ ನಡೆಸಿ, ಹತ್ತಿರದ ಪ್ರಕಾಶೇಶ್ವರ ಮಂದಿರಕ್ಕೂ ಭೇಟಿ ನೀಡಿದೆವು. ಅಲ್ಲಿಗೆ ಅಂದಿನ ಪ್ರವಾಸ ಮುಗಿಸಿ, ಮರುದಿನ ನಾವು ತೆರಳಿ ದ್ದು ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಕೇಂದ್ರಕ್ಕೆ, ಅಲ್ಲಿಯ ವೈವಿಧ್ಯ ನೋಡಿದ ಮೇಲೆ, ನಮ್ಮ ಪಯಣ ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ನತ್ತ ತೆರಳಿತು. ಅಲ್ಲಿ ರಿವರ್ ರಾಫ್ಟಿಂಗ್ ಮಜಾ ತಗೊಂಡು, ರಾಮ್ ಝೂಲಾ, ಲಕ್ಷ್ಮ¾ಣ್ ಝೂಲಾದ ಸೌಂದರ್ಯ ಕಣ್ತುಂಬಿಕೊಂಡೆವು. ಅಂದು ಸಂಜೆ ಅಲ್ಲಿ ಗಂಗಾರತಿಯ ಭಕ್ತಿ ಪರವಶತೆಯಲ್ಲಿ ಮಿಂದೆದ್ದಿದ್ದವು. “ಜೈ ಗಂಗೇ ಮಾತಾ’ ಹಾಡು ಈಗಲೂ ಗುನುಗುನಿಸುತ್ತಿದೆ ನಿರ್ಲಿಪ್ತವಾಗಿ. ಮರುದಿನ ಜಿಮ್ ಕಾರ್ಬೆಟ್ ತೆರಳಿದೆವು. ಐದು ಗಂಟೆಗಳ ದೀರ್ಘ ಪಯಣದ ಅನಂತರ, ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ತಲುಪಿದ್ದೆವು. ಅಲ್ಲಿ ಜೀಪ್ ಸಫಾರಿಯ ಮಜಾತಗೊಂಡು, ಕಾರ್ಬೆಟ್ ಕಾಡಿನಲ್ಲಿ ಸುತ್ತಾಟ ನಡೆಸಿದೆವು. ಅಂದು ರಾತ್ರಿ ನಮ್ಮ ಪಯಣ ಆಗ್ರಾದತ್ತ.
Advertisement
ದಿಲ್ ಚುರಾಯಾ ದಿಲ್ಲಿರಾಜಧಾನಿ ದಿಲ್ಲಿಯಲ್ಲೆಲ್ಲ ಅಂದು ಅಮೇರಿಕದ ರಾಷ್ಟ್ರಾಧ್ಯಕ್ಷರನ್ನು ಸ್ವಾಗತಿಸುವ ಫಲಕಗಳು ಕಾಣಿಸುತ್ತಿದ್ದವು. ಕೂಲ್‌ಕೂಲ್ ದಿಲ್ಲಿಯಲ್ಲಿ ಬೆಳಗಿನ ಜಾವ ನಾವು ಬಿರ್ಲಾ ಮಂರ್ದಿ, ಮೊಘಲ್ ಗಾರ್ಡನ್ ಭೇಟಿ ನೀಡಿ ದೆವು. ಅಲ್ಲಿಂದ ಕೆಂಪು ಕೋಟೆಗೆ ಧಾವಿಸಿದೆವು. ಕೆಂಪು ಕಲ್ಲಿನ ಕೋಟೆ, ಭಾರತದ ಪ್ರಧಾನಿ ಘನ ಭಾಷಣ ಮಾಡುವ ತಾಣವೂ ಹೌದು. ಸುಮಾರು ಮಧ್ಯಾಹ್ನದ ಹೊತ್ತಿಗೆ ಗಾಂಧಿ ಸಮಾಧಿಯಾದ ರಾಜ್‌ಘಾಟ್‌ಗೆ ಭೇಟಿ ನೀಡಿದೆವು. ಸಂಜೆಯ ವೇಳೆಗೆ ಅಕ್ಷರ ಧಾಮ ದೇಗುಲ ಸಂದರ್ಶಿಸಿದೆವು. ಅಲ್ಲಿ ಹೊತ್ತು ಕಳೆದಾಗ ಅಂದಿನ ಪ್ರವಾಸ ಮುಗಿದಿತ್ತು.
ನಮ್ಮ 14 ದಿನಗಳ ಪ್ರವಾಸದ ಕೊನೆಯ ದಿನ ದಿಲ್ಲಿಯ ಕುತುಬ್ ಮಿನಾರ್, ಲೋಟಸ್ ಟೆಂಪಲ್, ಇಂಡಿಯಾ ಗೇಟ್‌ನ ವಿಹಂಗಮ ನೋಟ ಕಂಡೆವು. ದಿಲ್ಲಿಯಲ್ಲಿದ್ದ ಪ್ರತಿರಾತ್ರಿಯೂ ಕರೋಲಾಬಾಗ್‌ನಲ್ಲಿ ತರಹೇವಾರಿ ಶಾಪಿಂಗ್ ಮಾಡಿದ್ದೆವು. ಮರುದಿನ ನಮ್ಮ ಪಯಣ ದಿಲ್ಲಿಯಿಂದ ಮಂಗಳೂರಿಗೆ ಬರುವ ರೈಲಿಗೆ ನಿಗದಿಯಾಗಿತ್ತು. ಅಷ್ಟಕ್ಕೂ ನಮ್ಮ ಪ್ರವಾಸ ಪಕ್ಕಾ ಯೋಜಿತ ಅನ್ನುವುದಕ್ಕೆ ಸಾಕ್ಷಿ ನಾವು ದಿಲ್ಲಿಯಿಂದ ಹೊರಡುವ ಮರುದಿನವೇ ಅಲ್ಲಿ ಗಲಭೆ ಉಂಟಾಗಿ, ಸಂಚಾರವೆೆಲ್ಲ ಅಸ್ತವ್ಯಸ್ತವಾಗಿತ್ತು. ಅದಲ್ಲದೆ ನಾವು ತಾಜ್‌ಹಲ್ ಭೇಟಿಯ ಎರಡು ದಿನಗಳ ಅನಂತರ ಟ್ರಂಪ್ ಭೇಟಿ ನಿಗದಿ ಆಗಿತ್ತು. ಹೀಗೆ ಸುದೀರ್ಘ ಪ್ರವಾಸ ಕ್ರಮಬದ್ಧ ಯೋಜನೆಯಿಂದ ಮರೆಯಲಾಗದ ಅನುಭವ ನೀಡಿದ್ದಂತೂ ಸುಳ್ಳಲ್ಲ. ಅಗ್ರಗಣ್ಯ ಆಗ್ರಾ
ಬೆಳಗ್ಗಿನ ಜಾವ ಹತ್ತು ಗಂಟೆಗೆ ಹೊರಟು, ಆಗ್ರಾ ಕೋಟೆಯನ್ನು ಕಾಣಲು ತೆರಳಿದೆವು. ಕೋಟೆಯ ಇನ್ನೊಂದು ಮಗ್ಗುಲಿನಿಂದ ತಾಜ್‌ಹಲ್ ಚಿಕ್ಕದಾಗಿ ತೋರುತ್ತಿತ್ತು. ಅಲ್ಲಿಂದ ವಿಶ್ವದ ಅದ್ಭುತಗಳಲ್ಲಿ ಒಂದಾದ ಅಮರ ಪ್ರೇಮ ಸೌಧ ತಾಜ್‌ಮಹಲ್‌ಗೆ ತೆರಳಿದೆವು. ಯಮುನಾ ತೀರದ ಅದ್ಭುತ ಅಮೃತಶಿಲೆಯ ಸೌಧ ಸಾವಿರಾರು ಪ್ರವಾಸಿಗರಿಂದ ಗಿಜಿಗಿಡುತ್ತಿತ್ತು. ಅಲ್ಲಿ ಸುತ್ತಾಡಿ, ಸೆಲ್ಫಿ, ಫೋಟೋಶೂಟ್ ನಡೆಸಿ ರಾತ್ರಿ ಹೋಟೆಲ್‌ನಲ್ಲಿ ತಂಗಿದೆವು. ಮರುದಿನ ಮೊಘಲ್ ಚಕ್ರವರ್ತಿ ಅಕºರ್‌ನ ಸಮಾಧಿ ಸಿಕಂದರ್‌ಗೆ ತೆರಳಿದೆವು. ಅಲ್ಲಿ ಸ್ವಲ್ಪ ಹೊತ್ತು ಕಳೆದು, ನಮ್ಮ ಪಯಣ ಸಾಗಿದ್ದು ಕೃಷ್ಣ ಜನ್ಮಸ್ಥಳ ಮಥುರಾಗೆ.
“ಮಥುರಾಪತಿ ಸದನ ಮಧುಸೂದನ’ ಅಂತಾ ಯೇಸುದಾಸ್‌ರ ಕಂಠದಲ್ಲಿ ಹಾಡು ಕೇಳಿದ್ದ ನಾವು ಮಥುರೆಯ ಬೆಡಗು ನೋಡುವ ಹುರುಪಿನಲ್ಲಿ¨ªೆವು. ನಾವು ತಲುಪುವ ಹೊತ್ತಿಗೆ ದೇವಾಲಯ ಮುಚ್ಚಿತ್ತು ಲ್ಲಿ ಸಿಹಿಯಾದ ರಸ್ಮಲಾಯಿ ಮತ್ತು ಪೇಡಾ ಕೊಂಡು ಹಿಂದಿರುಗಿದಾಗ, ನಮ್ಮ ಪಯಣ ದಿಲ್ಲಿಯತ್ತ ಮುಖಮಾಡಿತ್ತು.
ಸುಭಾಸ್ ಮಂಚಿ , ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ