Advertisement
ಗರಿಗೆದರಿದ ವ್ಯಾಪಾರಸುಮಾರು ಎರಡು ವರ್ಷದಿಂದ ಉಡುಪಿ, ಮಣಿಪಾಲ ಸೇರಿದಂತೆ ಆಯ್ದ ಪ್ರದೇಶದಲ್ಲಿ ತರಕಾರಿಯನ್ನು ಬೆಳೆಗಾರರ ಸೊಸೈಟಿ ನೇತೃತ್ವದಲ್ಲಿ ವಾಹನಗಳ ಮೂಲಕ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಆಷ್ಟಾಗಿ ಲಾಭವಿರಲಿಲ್ಲ. ಕೋವಿಡ್ 19 ಭೀತಿಯಿಂದ ವಾಹನ ಸಂಚಾರ ಹಾಗೂ ಜನ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಮಾಂಸಾಹಾರಿಗಳು ಸಹ ತರಕಾರಿ ಕಡೆಗೆ ಮೊರೆ ಹೋಗಿದ್ದಾರೆ. ಈಗ ಬೇಡಿಕೆ ಹೆಚ್ಚಾಗು¤ದೆ. ಕೆಲವೇ ಸಮಯದಲ್ಲಿ ಖಾಲಿಯಾಗುತ್ತಿದೆ ಎಂದು ಬೆನಗಲ್ ತರಕಾರಿ ಬೆಳಗಾರರ ಸಂಘದ ಕಾರ್ಯದರ್ಶಿ ನಾಗಾರಾಜ್ ಉಳಿತ್ತಾಯ ತಿಳಿಸಿದರು.
ನಮ್ಮಲ್ಲಿ ಬಸಲೆ, ಹರಿವೆ ತರಕಾರಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಸಲಾಗುತ್ತದೆ. ಕಳೆದ ವರ್ಷ ಬೆಳೆದ ಈ ಸೊಪ್ಪು ತರಕಾರಿ ಕೇವಲ ಮನೆ ಅಡುಗೆ ಹಾಗೂ ನೆರೆ ಮನೆಯವರಿಗೆ ನೀಡಿದೆ. ಉಳಿದ ಸೊಪ್ಪು ತಿನ್ನಲು ಸಾಧ್ಯವಾಗದೆ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ನೀಡಿದೆ. ಮೊನ್ನೆ ತನಕ ಸೊಪ್ಪು ತರಕಾರಿ ಕೇಳದ ಜನರು ಇದೀಗ ಮುಗಿಬಿದ್ದು ಖರೀದಿಸುತ್ತಿದ್ದಾರೆ. ತೊಂಡೆಕಾಯಿ, ಬೆಂಡೆಕಾಯಿ ಸಹ ಬೆಳೆಸಿ
ದ್ದೇನೆ. ಬೇಡಿಕೆ ಪೂರೈಸುವಷ್ಟು ಇಳುವರಿ ಇಲ್ಲ. ದೂರದೂರದಿಂದ ಬಂದು ಖರೀದಿ ಸುತ್ತಿರುವುದು ನೋಡಿದರೆ ತರಕಾರಿ ಬೆಳೆಸಬೇಕು ಎನ್ನುವ ಹಂಬಲ ಹೆಚ್ಚಿದೆ ಎಂದು ಕೃಷಿಕ ಭಾಸ್ಕರ್ ತಿಳಿಸಿದರು. ತಾಜಾ ತರಕಾರಿ
ಪ್ರಸ್ತುತ ಸ್ಥಳೀಯವಾಗಿ ಸಿಗುವ ತರಕಾರಿಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದೇವೆ. ಇದು ಕಡಿಮೆ ಬೆಲೆಯಲ್ಲಿ ಸಿಗುವುದರ ಜತೆಗೆ ತಾಜಾವಾಗಿರುವುದರಿಂದ ರುಚಿ ಚೆನ್ನಾಗಿರುತ್ತದೆ. ಜತೆಗೆ ಮನೆ ಬಾಗಿಲಿಗೆ ವಾಹನದಲ್ಲಿ ಬರುವ ಅಗತ್ಯ ವಸ್ತುಗಳು ಅಂಗಡಿಗಳಿಗಿಂತ ಕಡಿಮೆ ದರದಲ್ಲಿ ಸಿಗುತ್ತಿದೆ.
-ಸಂಪಾ ನಾಯಕ್, ಬ್ರಹ್ಮಾವರ ನಿವಾಸಿ.