ಜು. 6ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಫೋರಂ ಆಫ್ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಆಯೋಜಿಸಿದ ಯೂನಿಯನ್ ಬಜೆಟ್-2019 ವಿಶ್ಲೇಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಬಜೆಟ್ ವಿಶ್ಲೇಷಣಾ ಕಾರ್ಯಕ್ರಮವನ್ನು ಫೋರಂ ಆಫ್ ಮುಂಬಯಿ ಬಂಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್‌ನ ಹಲವು ವರ್ಷಗಳಿಂದ ಆಯೋಜಿಸುತ್ತಾ ಬರುತ್ತಿದ್ದು, ಇದಕ್ಕೆ ನಮಗೆ ಬಂಟರ ಸಂಘ ಮುಂಬಯಿ, ಆಹಾರ್ ಮುಂಬಯಿ ಹಾಗೂ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅà ಸಂಸ್ಥೆಗಳ ಸಂಪೂರ್ಣ ಸಹಕಾರ ನೀಡುತ್ತಾ ಬಂದಿವೆ. ದೇಶದ ಅರ್ಥವ್ಯವಸ್ಥೆಯ ಹಿಂಜರಿತದಿಂದ ಕಾಪಾಡಿಕೊಳ್ಳಲು ಇದು ಉತ್ತಮ ಬಜೆಟ್ ಆಗಿದ್ದು, ನಿರುದ್ಯೋಗ, ಬರಗಾಲ, ಕೃಷಿ ಇನ್ನಿತರ ಕ್ಷೇತ್ರಗಳಿಗೆ ಭರವಸೆಯನ್ನು ಹುಟ್ಟಿಸಲಾಗಿದೆ. ಪ್ರತೀ ವರ್ಷ ಬಜೆಟ್ ವಿಶ್ಲೇಷಣ ಕಾರ್ಯಕ್ರಮಕ್ಕೆ ಆರ್ಥಿಕ
ತಜ್ಞರನ್ನು ಆಹ್ವಾನಿಸಿ ಅರ್ಥಪೂರ್ಣ ಉಪನ್ಯಾಸವನ್ನು ನೀಡಿ ಎಲ್ಲರಿಗೂ ಸಹಕರಿಸಲಾಗುತ್ತಿದೆ. ನಮ್ಮ ಇಂತಹ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರ ಸದಾಯಿರಲಿ ಎಂದು ನುಡಿದರು.
Advertisement
ಪ್ರಾರಂಭದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ಮಾತನಾಡಿ, ಫೋರಂ ಆಫ್ ಬಂಟ್ಸ್ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯು ಆಯೋಜಿಸಿದ ಈ ಬಜೆಟ್ ವಿಶ್ಲೇಷಣೆ ಕಾರ್ಯಕ್ರಮವು ಸಮಾಜದ ಉದ್ಯಮಿಗಳಿಗೆ ಹಾಗೂ ಹೊಟೇಲಿಗರಿಗೆ ಅನುಕೂಲವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಬಜೆಟ್ ಬಗ್ಗೆ ನಮ್ಮಲ್ಲಿರುವ ಹಲವಾರು ಗೊಂದಲಗಳನ್ನು ನಿವಾ ರಿಸಲು ಸಾಧ್ಯವಾಗುತ್ತದೆ. ಇಂತಹ ಸಮಾಜಪರ ಕಾರ್ಯಕ್ರಮಗಳಿಗೆ ಬಂಟರ ಸಂಘದ ಪ್ರೋತ್ಸಾಹ, ಸಹಕಾರ ಸದಾಯಿದೆ ಎಂದು ಹೇಳಿ ಶುಭಹಾ ರೈಸಿದರು.
Related Articles
Advertisement
ಬಂಟರ ಸಂಘ ಮುಂಬಯಿ, ಆಹಾರ್ ಹಾಗೂ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಸ್ ಜಂಟಿ ಆಯೋಜನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸಮಾಜ ಬಾಂಧವರು, ತುಳು-ಕನ್ನಡಿಗರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ:ಸುಭಾಶ್ ಶಿರಿಯಾ