Advertisement

ಗೋಣಿಕೊಪ್ಪ:  ಕಸ ವಿಲೇವಾರಿ ಸಮಸ್ಯೆಗೆ ಕೊನೆಗೂ ಮುಕ್ತಿ

02:21 PM Mar 17, 2017 | Team Udayavani |

ಗೋಣಿಕೊಪ್ಪ: ಪೊನ್ನಂಪೇಟೆ ಕುಂದ ರಸ್ತೆಯ ಸೀತಾ ಕಾಲನಿಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಿಸಿದ ಕಸ ವಿಲೇವಾರಿ ಘಟಕವನ್ನು ಶಾಸಕ ಕೆ.ಜಿ. ಬೋಪಯ್ಯ ಲೋಕಾರ್ಪಣೆಗೊಳಿಸುವ ಮೂಲಕ ಈ ಭರವಸೆ ದೊರೆತಿದೆ.

Advertisement

ಗೋಣಿಕೊಪ್ಪ, ಪೊನ್ನಂಪೇಟೆ, ಅರುವತ್ತೋಕ್ಲು ಪಂಚಾಯತ್‌ಗಳ ಜಂಟಿ ಅಶ್ರಯದಲ್ಲಿ ಕಸ ವಿಲೇವಾರಿ ಗೊಳಿಸಲು ಅರುವತ್ತೋಕ್ಲು ಗ್ರಾ.ಪಂ. ಅಧೀನದ ಸೀತಾ ಕಾಲನಿ ಸ್ಥಳವನ್ನು ಹಲವು ವರ್ಷಗಳ ಹಿಂದೆಯೇ ಗುರುತಿಸಲಾಗಿತ್ತು. ಕೆಲವು ಲೋಪದೋಷಗಳು ರಾಜಕೀಯ ಮೇಲುಕೀಳಾ ಟದಿಂದ ಕಾಮಗಾರಿ ಪ್ರಗತಿ ಕಾಣಲಿಲ್ಲ. ಇದೀಗ ಸ್ಥಳದಲ್ಲಿ ನೂತನ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುವ ಮೂಲಕ ಪಂಚಾಯ್ತಿಗೆ ಶಾಪವೆಂದೆ ಹೇಳಬಹುದಾದ ಸಮಸ್ಯೆ ಬಗೆಹರಿಯಬಹುದಾದ ನಿರೀಕ್ಷೆ ಹೊಂದಿದೆ. 

ಶಾಸಕರ ಮುಂದಾಳತ್ವದಲ್ಲಿ ಜಿ.ಪಂ. ಸದಸ್ಯರು, ತಾ.ಪಂ. ಅಧ್ಯಕ್ಷರು ಉಪಾ ಧ್ಯಕ್ಷರು ಸದಸ್ಯರು ಗ್ರಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು, ಅಭಿವೃದ್ಧಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಘಟಕಕ್ಕೆ ಚಾಲನೆ ನೀಡಲಾಗಿದೆ. ಅರುವತ್ತೋಕ್ಲು ಪಂಚಾಯತ್‌  ರೂ. 9.75 ಲಕ್ಷ  ಗೋಣಿಕೊಪ್ಪ ಪಂಚಾಯತ್‌  ರೂ. 14.30 ಲಕ್ಷ  ಮತ್ತು ಪೊನ್ನಂಪೇಟೆ ಪಂಚಾಯತ್‌ 25.50 ಲಕ್ಷದ ವೆಚ್ಚದಲ್ಲಿ ವಿವಿಧ ಅನುದಾನಗಳಲ್ಲಿ  ಅಂದಾಜು 50 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಾಣ ಕಾಮ ಗಾರಿ ನಡೆದಿದೆ. 

ನಿರ್ವಹಣೆಯನ್ನು ಮೂರು ಪಂಚಾಯತ್‌ಗಳು ಪಾರುಪತ್ತಿಕೆ ವಹಿಸಿಕೊಂಡಿವೆ. ಒಟ್ಟಿನಲ್ಲಿ ಮೂರು ಪಂಚಾಯತ್‌ನ  ಕಸ ವಿಲೇವಾರಿ ಸಮಸ್ಯೆ ಈ ಮೂಲಕ ಬಗೆಹರಿಯಲಿದೆ. 

ಶಾಸಕ ಕೆ.ಜಿ. ಬೋಪಯ್ಯ ಮಾತ ನಾಡಿ, ಕಸ ವಿಲೇವಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಬಳಸದಂತೆ ನಿಯಮ ಪಾಲಿಸಬೇಕು. ಮೂರು ಪಂಚಾಯತ್‌ ಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸಲು ಕಾಳಜಿ ವಹಿಸಬೇಕು ಎಂದು ತಿಳಿಸಿದರು.

Advertisement

ಜಿ.ಪಂ. ಸದಸ್ಯರಾದ ಸಿ.ಕೆ. ಬೋಪಣ್ಣ, ಶ್ರೀಜಾ ಸಾಜಿ, ಅಪ್ಪಡೇರಂಡ ಭವ್ಯ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್‌ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್‌ ಕುಮಾರ್‌, ಸದಸ್ಯರುಗಳಾದ ಆಶಾ ಪೂಣಚ್ಚ, ಕಾರ್ಯನಿರ್ವಹಣಾಧಿಕಾರಿ ಕಿರಣ್‌ ಪಡೆ°àಕರ್‌, ಗೋಣಿಕೊಪ್ಪಲು ಗ್ರಾ.ಪಂ. ಅಧ್ಯಕ್ಷರಾದ ಸೆಲ್ವಿ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೆರ ಸುಮಿತಾ ಗಣೇಶ್‌, ಗೋಣಿಕೊಪ್ಪ ಗ್ರಾ.ಪಂ. ಸದಸ್ಯರಾದ ರತಿ ಅಚ್ಚಪ್ಪ, ಬಿ.ಎನ್‌. ಪ್ರಕಾಶ್‌, ಸುರೇಶ್‌ ರೈ, ಪಿ.ಡಿ.ಒ ಚಂದ್ರಮೌಳಿ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರುಗಳಾದ ಜಯಲಕ್ಷ್ಮೀ, ಸುರೇಶ್‌, ಸುಮಂತ್‌, ಅರುವತ್ತೋಕ್ಲು ಗ್ರಾ.ಪಂ. ಸದಸ್ಯೆ ರೇವತಿ ಮೊದಲಾದ ವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next