Advertisement

ಗೋಳಿಯಂಗಡಿ: ವಾಹನಗಳ ವೇಗಕ್ಕೆ ಬ್ರೇಕ್‌ ಹಾಕಲು ಬೇಕು ಸರ್ಕಲ್‌

06:05 AM Jul 07, 2018 | |

ಸಿದ್ದಾಪುರ: ಕುಂದಾಪುರ ತಾಲೂಕಿನ ಪ್ರಮುಖ ಪೇಟೆಗಳಲ್ಲಿ ಗೋಳಿಯಂಗಡಿ ಪೇಟೆ ಕೂಡ ಒಂದು. ಈ ಪೇಟೆಯಲ್ಲಿ ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿ ಹಾದುಹೋಗಿದೆ. ಪೇಟೆಯಲ್ಲಿ ಈ ಹೆದ್ದಾರಿಗೆ ಪ್ರಮುಖ ಜಿ. ಪಂ. ರಸ್ತೆಗಳು ಕೂಡ ಬಂದು ಸೇರುತ್ತವೆ. ಇದರ ಪರಿಣಾಮ ಪೇಟೆಯಲ್ಲಿ ವಾಹನಗಳ ಸಂದಣಿ ಕೂಡ ಹೆಚ್ಚುತ್ತಿದೆ. ಪೇಟೆಯಲ್ಲಿ ಸರ್ಕಲ್‌ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಗಳಾಗಿದ್ದು ಅಪಘಾತಗಳಿಗೂ ಕಾರಣವಾಗಿದೆ. 

Advertisement

ಜಂಕ್ಷನ್‌ ಪ್ರದೇಶ
ಬೈಂದೂರು- ವಿರಾಜಪೇಟೆ ರಾಜ್ಯ ಹೆದ್ದಾರಿಯ ಕೊಲ್ಲೂರು, ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ, ಆಗುಂಬೆ, ಮಂದಾರ್ತಿ, ಉಡುಪಿ, ಕುಂದಾಪುರ, ಹೆಬ್ರಿ, ಸಿದ್ದಾಪುರ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್‌ ಗೋಳಿಯಂಗಡಿ. ಇಲ್ಲಿ ಸರ್ಕಲ್‌ ಹಾಗೂ ಹಂಪ್‌ ವ್ಯವಸ್ಥೆ ಇಲ್ಲ. ಪ್ರಮುಖ ವ್ಯಾಪಾರ ಕೇಂದ್ರವಾಗಿಯೂ ಗೋಳಿಯಂಗಡಿ ಬೆಳೆಯುತ್ತಿದೆ. ಸುತ್ತ ಹಲವು ಊರುಗಳು ಜನರು ನಿತ್ಯದ ಅಗತ್ಯಕ್ಕಾಗಿ ಈ ಪೇಟೆಯನ್ನೇ ಅವಲಂಬಿಸಿದ್ದಾರೆ.
  
ಸಂತೆ ದಿನ  ಹೆಚ್ಚಿನ ಭೀತಿ
ಇಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯೂ ಮುಖ್ಯ ವಾಗಿದ್ದು ಜನರೂ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ ವಾಹನಗಳು ವೇಗವಾಗಿ ಹೋಗುವುದರಿಂದ ಭೀತಿ ಯಿಂದಲೇ ಜನ ಸಂಚರಿಸಬೇಕಾಗುತ್ತದೆ.  

ಸಂಬಂಧಪಟ್ಟವರು ಗಮನ ಹರಿಸಿ
ಗೋಳಿಯಂಗಡಿ ಪೇಟೆಯಲ್ಲಿ ಹಂಪ್‌ ಹಾಗೂ ಸರ್ಕಲ್‌ ನಿರ್ಮಿಸುವ ಅಗತ್ಯ ಇದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜನ ನಿಬಿಡ ಪ್ರದೇಶ ಇದಾಗಿದ್ದು ಸಂಬಂಧಪಟ್ಟವರು ಗಮನ ಹರಿಸಬೇಕು. 
– ಚಂದ್ರಶೇಖರ್‌ ಶೆಟ್ಟಿ ಸೂರೊYàಳಿ,
ಸದಸ್ಯರು ತಾ. ಪಂ. ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next