ಕಲಬುರಗಿ: ಮಧ್ಯಪ್ರದೇಶದಲ್ಲಿನ ರೈತರ ಮೇಲೆ ನಡೆಸಲಾದ ಗೋಲಿಬಾರ ಖಂಡಿಸಿ ಕಾಂಗ್ರೆಸ್ ಯುವ ಘಟಕದ ನೇತೃತ್ವದಲ್ಲಿ ಶನಿವಾರ ರೈಲು ತಡೆದು ಪ್ರತಿಭಟಿಸಲಾಯಿತು.
ಮಧ್ಯಪ್ರದೇಶದ ಮಂದಸೌರ ಜಿಲ್ಲೆಯ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸರು ಸ್ವೇಚ್ಚೆಯಿಂದ ಗೋಲಿಬಾರು ಮಾಡುವ ಮೂಲಕ ರೈತರನ್ನು ನಿರ್ದಯವಾಗಿ ಹತ್ಯೆ ಮಾಡಿರುವುದು ಇಡೀ ದೇಶವೇ ತಲೆ ತಗ್ಗಿಸುವ ಪ್ರಕರಣ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಹಣಿಯುವ ಮುಖಾಂತರ ಹೋರಾಟಗಳನ್ನೇ ಹತ್ತಿಕ್ಕುವ ಕುಂತಂತ್ರ ಇದರಲ್ಲಿ ಅಡಗಿದೆ ಎಂದು ಆರೋಪಿಸಿದ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು, ರೈತರು ತಮ್ಮ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ದೊರಕಬೇಕೆಂಬುದು ನ್ಯಾಯಸಮ್ಮತ ಬೇಡಿಕೆಯಾಗಿದೆ.
ಆದರೆ ಗೋಲಿಬಾರ್ ನಡೆಸಿರುವುದು ದಬ್ಟಾಳಿಕೆಯಾಗಿದೆ ಎಂದು ಆರೋಪಿಸಿದರು. ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಈರಣ್ಣ ಝಳಕಿ, ಮುಖಂಡರಾದ ಮಜರ್ ಅಲ್ಲಮಖಾನ್, ಲಿಂಗರಾಜ ತಾರಫೈಲ್, ವಿಜಯ ಬೆಳಮಗಿ, ಶಿವು ಹೊನಗುಂಟಿ,
-ಶೇಖ್ ಬಬು, ಅಶೋಕ, ಪ್ರಕಾಶ ಜಮಾದಾರ, ಮಲ್ಲಿಕಾರ್ಜುನ ಬೂದಿಹಾಳ, ಯೂನಿಸ್ ಅಲಿ, ಹಣಮಂತ ಚೂರಿ, ಶರಣು ಡೋಣಗಾಂವ, ಭೀಮಾ ಜಲವಾದ, ಶರಣು ವಾರದ ನಾಲವಾರ, ಪ್ರಶಾಂತ ಪಾಟೀಲ ಮಾಹೂರ, ಅಮರ ಶಿರವಾಳ, ಶಕೀಲ್ ಸಿಂದಗಿ, ಭವಾನಿ ದರ್ಗಿ, ವಿದ್ಯಾರ್ಥಿ ಘಟಕದ ಅಧ್ಯಕ್ಷ ವಿಶಾಲ ಪಾಟೀಲ ಹಾಗೂ ಮುಂತಾದವರಿದ್ದರು.