Advertisement

ಗೋಲಗುಂಬಜ್ ಮೇಲಿಂದ ಜಿಗಿದು ಬೆಂಗಳೂರಿನ ಯುವತಿ ಆತ್ಮಹತ್ಯೆ: ಕಾರಣ ನಿಗೂಢ

11:02 PM Dec 21, 2022 | Team Udayavani |

ವಿಜಯಪುರ: ನಗರದಲ್ಲಿರುವ ವಿಶ್ವವಿಖ್ಯಾತ ಐತಿಹಾಸಿಕ ಗೋಲಗುಂಬಜ ಮೇಲಿಂದ ಹಾರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸಂಜೆ ಜರುಗಿದೆ.

Advertisement

ಬೆಂಗಳೂರು ಮೂಲದ ಸೌಂದರ್ಯ ಎಂಬ 19 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡವಳು ಎಂದು ಪ್ರಾಥಮಿಕ ಮಾಹಿತಿ ತಿಳಿಸಿವೆ. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದಿರುವ ಈ ಘಟನೆಯ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸ್ ತನಿಖೆಯಿಂದಷ್ಟೇ ಘಟನೆಯ ನೈಜ ಕಾರಣ ಹೊರ ಬರಬೇಕಿದೆ.

ಸುದ್ದಿ ತಿಳಿದು ಗೋಲಗುಂಬಜ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ: ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ 9 ಮಂದಿ ಪೊಲೀಸರಿಗೆ ಜೀವಾವಧಿ

Advertisement

Udayavani is now on Telegram. Click here to join our channel and stay updated with the latest news.

Next