Advertisement

ಗೋಲ್ಡನ್‌ ವೀಸಾ ಮುಂದುವರಿಕೆ

06:00 AM Dec 13, 2018 | Team Udayavani |

ಲಂಡನ್‌: ಶ್ರೀಮಂತರಿಗೆ ನೀಡಲಾಗುವ ಗೋಲ್ಡನ್‌ ವೀಸಾ ಯೋಜನೆಯನ್ನು ಯುನೈಟೆಡ್‌ ಕಿಂಗ್‌ಡಮ್‌ ಸರ್ಕಾರ ಮುಂದುವರಿಸಲು ನಿರ್ಧರಿಸಿದೆ. ಕಳೆದ ವಾರವಷ್ಟೇ ಇದನ್ನು ರದ್ದುಗೊಳಿಸುವುದಾಗಿ ಸರ್ಕಾರ ಹೇಳಿತ್ತು. ಭಾರತ ಸೇರಿದಂತೆ ಇತರ ದೇಶಗಳಿಂದ ಯುನೈಟೆಡ್‌ ಕಿಂಗ್‌ಡಮ್‌ಗೆ ಆಗಮಿಸುವ ಶ್ರೀಮಂತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಈ ಗೋಲ್ಡನ್‌ ವೀಸಾ ಯೋಜನೆಯನ್ನು 2015ರಲ್ಲಿ ಆರಂಭಿಸಲಾಗಿತ್ತು. ಆದರೆ ಹಣ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಳಿಸಲು ನಿರ್ಧರಿಸಿತ್ತು. ಈಗ ಪುನಃ ಅನುಮೋದಿಸಿದ್ದರಿಂದ ಇಂಗ್ಲೆಂಡ್‌ನ‌ಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಕೇಳಿಬಂದಿದೆ. ಆದರೆ ಈ ಪ್ರಕ್ರಿಯೆಯನ್ನು ರದ್ದುಗೊಳಿಸದೇ, ಸುಧಾರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಯುನೈಟೆಡ್‌ ಕಿಂಗ್‌ಡಮ್‌ನ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next