Advertisement

ಕೋವಿಡ್ ಸಂದರ್ಭದ ಸೇವೆಗಾಗಿ ಬಂಟ್ವಾಳದ ಬಶೀರ್ ಅವರಿಗೆ ಯುಎಇ ಗೋಲ್ಡನ್‌ ವೀಸಾ ಗೌರವ

06:33 PM Nov 23, 2020 | sudhir |

ಬಂಟ್ವಾಳ: ಯುನೈಟೆಡ್ ಸ್ಟೇಟ್ಸ್ ಎಮಿರೇಟ್ಸ್ (ಯುಎಇ) ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ ‘ಗೋಲ್ಡನ್ ವೀಸಾ’ ವನ್ನು ದುಬಾಯಿಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ಜನರಲ್ ಮ್ಯಾನೇಜರ್ ಬಂಟ್ವಾಳದ ಬಶೀರ್ ಹಾಗೂ ಅವರ ಕುಟುಂಬಕ್ಕೆ ನೀಡಿದೆ.

Advertisement

ಕೊರೋನ ಸಂಧರ್ಭದಲ್ಲಿ ಯುಎಇಯಲ್ಲಿ ಮಾಡಿದ ಅಸಾಮಾನ್ಯ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರಕಾರವು ಬಶೀರ್ ಅವರಿಗೆ ಗೋಲ್ಡನ್ ವೀಸಾ ನೀಡುವ ಮೂಲಕ ಪುರಸ್ಕರಿಸಿದೆ.

ಬಂಟ್ವಾಳದ ಕೆಳಗಿನ ಪೇಟೆ ನಿವಾಸಿ ಅಬೂಬಕ್ಕರ್ ಅವರ ಪುತ್ರ ಬಶೀರ್ ಅವರು ಕಳೆದ 27 ವರ್ಷಗಳಿಂದ ಯುಎಇಯಲ್ಲಿ ಸೇವೆಯಲ್ಲಿದ್ದಾರೆ. ಗೋಲ್ಡನ್ ವೀಸಾವು ಯುಎಇಯಲ್ಲಿ ಹತ್ತು ವರ್ಷಗಳ ವಾಸ್ತವ್ಯಕ್ಕೆ ಅವಕಾಶ ನೀಡುವ ವೀಸಾ ಇದಾಗಿದ್ದು, ಬಶೀರ್ ಜತೆಗೆ ಅವರ ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಈ ಗೋಲ್ಡನ್ ವೀಸಾ ಲಭಿಸಿದೆ.

ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಜಾರಿಯಾಗಲಿದೆ ‘ಗೋ ಸೆಸ್’ ‌! ಗೋ ಸಂಪುಟ ಸಭೆಯಲ್ಲಿ ತೀರ್ಮಾನ

Advertisement

ಕೊರೋನ ಸಂದರ್ಭದಲ್ಲಿ ಬಶೀರ್ ಬಂಟ್ವಾಳ್ ನೇತೃತ್ವದಲ್ಲಿ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ವತಿಯಿಂದ ಯುಎಇಯಾದ್ಯಂತ ಮಾಡಿರುವ ಮಾನವೀಯ ಸೇವೆ ಅಲ್ಲಿನ ಸರಕಾರದ ಅಭಿನಂದನೆಗೆ ಪಾತ್ರವಾಗಿತ್ತು. ಸಂಕಷ್ಟದಲ್ಲಿದ್ದ ಅನಿವಾಸಿ ಭಾರತೀಯರಿಗೆ ದಿನನಿತ್ಯ ಸಿದ್ಧ ಆಹಾರ, ಆಹಾರ ಸಾಮಗ್ರಿಗಳ ಕಿಟ್, ಆರೋಗ್ಯ ತಪಾಸಣೆ, ವಸತಿ ರಹಿತರಿಗೆ ವಸತಿ ವ್ಯವಸ್ಥೆ, ಊರಿಗೆ ಮರಳುವವರಿಗೆ ವಿವಿಧ ಸವಲತ್ತುಗಳನ್ನು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next