ಗೋಲ್ಡನ್‌ಸ್ಟಾರ್ ಗಣೇಶ್ ಖುಷಿಯಾಗಿದ್ದಾರೆ. ಬರೀ ಖುಷಿ ಯಲ್ಲ, ಸಖತ್ ಖುಷಿ. ಇಷ್ಟು ಹೇಳಿದ ಮೇಲೆ ಅವರ ಖುಷಿಗೆಕಾರಣ ಕೂಡಾ “ಸಖತ್’ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಗಣೇಶ್ ನಾಯಕರಾಗಿ ನಟಿಸಿರುವ “ಸಖತ್’ ಚಿತ್ರ ಈಗ25ನೇ ದಿನದತ್ತ ಮುನ್ನುಗ್ಗುತ್ತಿದೆ.
ಸಿನಿಮಾ ನೋಡಿದ ಪ್ರೇಕ್ಷಕರು ಇಷ್ಟಪಡುವ ಮೂಲಕ ಚಿತ್ರಕ್ಕೆ ಪ್ರೇಕ್ಷಕರಕೊರತೆಕಾಡಿಲ್ಲ. ಇದರೊಂದಿಗೆ ಗಣಿ-ಸುನಿ ಕಾಂಬಿನೇಶನ್ ಮತ್ತೂಮ್ಮೆ ವರ್ಕ್ ಆಗಿದೆ ಎಂಬ ಮಾತು ಚಿತ್ರರಂಗದಲ್ಲಿಕೇಳಿಬರುತ್ತಿದೆ. ಈ ಹಿಂದೆ ಗಣೇಶ್ ಹಾಗೂ ಸುನಿ ಸೇರಿಕೊಂಡು “ಚಮಕ್’ ಎಂಬ ಚಿತ್ರ ಮಾಡಿದ್ದರು. ಆ ಚಿತ್ರಕೂಡಾ ಹಿಟ್ ಆಗಿತ್ತು.
ಈಗ “ಸಖತ್’ ಕೂಡಾ ಹಿಟ್‌ಲಿಸ್ಟ್ ಸೇರಿದಂತಾಗಿದೆ. ಚಿತ್ರದ ಬಗ್ಗೆ ಮಾತನಾಡುವ ಗಣೇಶ್, “ಸಿನಿಮಾ ಈಗ25ನೇ ದಿನದತ್ತ ಸಾಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಒಳ್ಳೆಯ ಸಿನಿಮಾಗಳನ್ನು ನಮ್ಮ ಜನ ಯಾವತ್ತೂಕೈ ಬಿಟ್ಟಿಲ್ಲ.
ಇದನ್ನೂ ಓದಿ:2021 : ಕೋವಿಡ್ ನಡುವೆಯೂ ಶತಕದ ಗಡಿ ದಾಟಿದ ಕನ್ನಡ ಸಿನಿಮಾಗಳು
ಆ ವಿಶ್ವಾಸದಲ್ಲೇ ನಾನಿದ್ದೆ. ಅದು ನಿಜವಾಗಿದೆ. ಆದರೆ,ಕೊರೊನಾ, ಮಲ್ಟಿಪ್ಲೆಕ್ಸ್‌ಗಳಲ್ಲಿ ಸರ್ಟಿಫಿಕೆಟ್ ತೋರಿಸಬೇಕು.. ಈ ತರಹದ ಕ್ರಮಗಳಿಂದಾಗಿ ಸ್ವಲ್ಪ ಭಯವಾಗಿತ್ತು. ಆದರೆ, “ಸಖತ್’ ಒಂದೊಳ್ಳೆಯ ಗೆಲುವು ತಂದುಕೊಟ್ಟಿದೆ’ ಎನ್ನುವುದು ಅವರ ಮಾತು. ಗಣೇಶ್ ಈ ಚಿತ್ರದಲ್ಲಿ ಅಂಧನ ಪಾತ್ರದಲ್ಲಿ ನಟಿಸಿದ್ದರು.
ಚಿತ್ರದಲ್ಲಿ ಸಸ್ಪೆನ್ಸ್ ಅಂಶದ ಜೊತೆಗೆ ಸಾಕಷ್ಟುಕಾಮಿಡಿ ಅಂಶಗಳುಕೂಡಾ ಇವೆ. ಇದೇ ಕಾರಣದಿಂದ ಚಿತ್ರ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರವನ್ನುಕೆವಿಎನ್ ಸಂಸ್ಥೆ ನಿರ್ಮಿಸಿದೆ. “ಚಿತ್ರ ನಮಗೆ ಬಿಝಿನೆಸ್ ವಿಚಾರದಲ್ಲೂ ತೃಪ್ತಿ ನೀಡಿದೆ. ನಾವು ಖುಷಿಯಾಗಿದ್ದೇವೆ’ ಎನ್ನುವುದುಕೆವಿಎನ್ ಸಂಸ್ಥೆಯ ಸುಪ್ರೀತ್ ಮಾತು.