Advertisement

ಬಾಳೆಲೆಯಿಂದ ಬಾಳು ಬಂಗಾರ

03:12 PM Jan 24, 2018 | |

ಜೀವನ ವಿಧಾನ ಬದಲಾದಂತೆಲ್ಲ ಮನೆಯಲ್ಲಿ ನಾವು ಬಳಸುವ ವಸ್ತುಗಳಲ್ಲಿಯೂ ಕೂಡ ಅಷ್ಟೇ ಬದಲಾವಣೆಯನ್ನು ತಂದುಕೊಂಡಿದ್ದೇವೆ. ವಿಷಯಕ್ಕೆ ಬಂದಾಗ ವಿವಿಧ ಚಿತ್ತಾರದ, ವೈವಿಧ್ಯಮಯವಾದ ಹಾಗೂ ವಿವಿಧ ಲೋಹದ ಪಾತ್ರೆಗಳನ್ನು ನಾವಿಂದು ಬಳಸುತ್ತಿದ್ದೇವೆ. ಆದರೆ, ನಿಸರ್ಗದತ್ತವಾಗಿ ದೊರೆಯುವ ಬಾಳೆಎಲೆ ಮಾತ್ರ ಎಲ್ಲ ವೈಭೋಗವನ್ನು ಮೀರಿಸುವಂಥದ್ದು.  ಬಾಳೆಎಲೆಯ ಊಟ ಈ ಕೆಳಗಿನಂತೆ ಬಹಳ ಉಪಯುಕ್ತವಾಗಿವೆ. 

Advertisement

-ಬಾಳೆಎಲೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಅಂಶವಿರುತ್ತದೆ. ಇದು ವಿಶೇಷವಾಗಿ ಫ್ರೀ ರ್ಯಾಡಿಕಲ್‌ ಎಂಬ ಜೈವಿಕ ರಾಸಾಯನಿಕಗಳನ್ನು ಕೊಲ್ಲುವ ಮೂಲಕ ಕ್ಯಾನ್ಸರ್‌ ರೋಗವನ್ನು ತಡೆಗಟ್ಟುತ್ತದೆ.

-ಬಾಳೆ ಎಲೆಯ ಮೇಲ್ಪದರದಲ್ಲಿ ನೈಸರ್ಗಿಕವಾದ ಕ್ಯಾಟೆಚಿನ್‌ ಗ್ಯಾಲೆಟ್‌ ಎಂಬ ಪಾಲಿಫಿನಾಲ್‌ ಅಂಶ ಆವರಿಸಿರುತ್ತದೆ. ಬಿಸಿಯಾದ ಆ ಹಾರವನ್ನು ಇದರ ಮೇಲೆ ಹಾಕಿದಾಗ ಇದು ಆಹಾರದೊಂದಿಗೆ ಹೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

-ಬಾಳೆಎಲೆಯ ಊಟದಿಂದ ದೇಹ ತಂಪುಗೊಳ್ಳುತ್ತದೆ. ಊಟದ ಪದಾರ್ಥದ ಮೂಲಕ ನಮ್ಮ ದೇಹಕ್ಕೆ ಉಂಟಾಗಬಹುದಾದ ಕೃತಕ ಉಷ್ಣತೆಯನ್ನು ಬಾಳೆ ಎಲೆ ತಂಪು ಮಾಡುತ್ತದೆ.

-ವಯಸ್ಸಾದಂತೆಲ್ಲ ಕೂದಲುಗಳು ಬೆಳ್ಳಗಾಗುವುದು ಸಹಜ. ಆದರೆ ಸಣ್ಣವಯಸ್ಸಿನಲ್ಲಿಯೇ ಬಿಳಿಕೂದಲು ಸಮಸ್ಯೆ ಕಾಣಿಸಿಕೊಳ್ಳುವುದು ಪೋಷಕಾಂಶಗಳ ಕೊರತೆಯ ಸಂಕೇತ. ಬಾಳೆಎಲೆಯಲ್ಲಿ ಇಂತಹ ಪೋಷಕಾಂಶಗಳು ದಟ್ಟವಾಗಿದ್ದು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ.

Advertisement

-ಬಾಳೆಎಲೆಗೆ ತಂಗಿನ ಎಣ್ಣೆಯನ್ನು ಲೇಪಿಸಿ ಸುಕ್ಕುಗಟ್ಟಿದ ಚರ್ಮಕ್ಕೆ ಸುತ್ತಿದರೆ ಚರ್ಮ ಹೊಳಪುಗೊಳ್ಳುತ್ತದೆ.

-ಮಣ್ಣಿನ ಅಥವಾ ಲೋಹದ ಪಾತ್ರೆಯಲ್ಲಿ ಊಟ ಮಾಡುವುದರಿಂದ ಕೆಲಸವು ಸೂಕ್ಷ್ಮ ಮಾರ್ಜಕದ ಕಣಗಳು ದೇಹ ಸೇರುವ ಅಪಾಯವಿರುತ್ತದೆ. ಆದರೆ ಬಾಳೆ ಎಲೆಯ ಊಟ ಈ ಸಮಸ್ಯೆಯನ್ನು ತಡೆಗಟ್ಟುತ್ತದೆ.

-ಬಾಳೆಎಲೆಯಲ್ಲಿ ವಿಟಮಿನ್‌ “ಡಿ’ ಅಂಶ ವಿಪುಲವಾಗಿರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಆದ್ದರಿಂದಲೇ ಹಸುಗೂಸನ್ನು ಶುಂಠಿ ಎಲೆ ಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಒಡ್ಡುತ್ತಾರೆ. ಇದರಿಂದ ಹಸುಗೂಸಿನ ದೇಹದಲ್ಲಿ “ಡಿ’ ವಿಟಮಿನ್‌ ಅಂಶ ಹೆಚ್ಚಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next