Advertisement

ಸುವರ್ಣ ಮಹೋತ್ಸವ: 11 ದಿನ ಸಾಂಸ್ಕೃತಿಕ ವೈಭವ

12:25 PM Sep 24, 2018 | Team Udayavani |

ಹುಮನಾಬಾದ: ಸಾರ್ವಜನಿಕ ಗಣೇಶ ಉತ್ಸವ ಆಚರಣೆ ತಿಳಿದುಕೊಂಡಷ್ಟು ಸರಳವಲ್ಲ. ಆದರೆ ಹಳೆ ಅಡತ್‌ ಬಜಾರ ಗಣೇಶ ಉತ್ಸವ ಸಮಿತಿ 49ವರ್ಷ ಅತ್ಯಂತ ಯಶಸ್ವಿಯಾಗಿ ಆಚರಿಸಿ, ಈ ಬಾರಿ ಸುವರ್ಣಮಹೋತ್ಸವ ಆಚರಿಸಿದೆ ಎಂದು ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಆರ್‌. ಗಾದಾ ಹೇಳಿದರು.

Advertisement

ಪಟ್ಟಣದ ಹಳೆ ಅಡತ್‌ ಬಜಾರ ಗಣೇಶ ಉತ್ಸವ ಸಮಿತಿಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಸುವರ್ಣ ಮಹೋತ್ಸವ ಪ್ರಯುಕ್ತ 11 ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ಬೌದ್ಧಿಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ನಡೆಸಲಾಗಿದ್ದು, ಈ ರೀತಿ ಹಿಂದೆಂದೂ ನಡೆದಿಲ್ಲ. ಭವಿಷ್ಯದಲ್ಲೂ ನಡೆಯುವುದು ಕಷ್ಟಸಾಧ್ಯ ಎಂದರು. 

ಮಾಜಿ ಶಾಸಕ ಸುಭಾಷ ಕಲ್ಲೂರ ಮಾತನಾಡಿ, ಹಣ ಗಳಿಕೆಯೊಂದೇ ಬದುಕಿನ ಮೂಲ ಉದ್ದೇಶ ಎಂದು ಭಾವಿಸಿರುವ ಪ್ರಸ್ತುತ ದಿನಮಾನದಲ್ಲಿ ಸ್ವಕಾರ್ಯದ ಜೊತೆಗೆ ಸ್ವಾಮಿ ಕಾರ್ಯ ಎಂಬಂತೆ, ವ್ಯವಹಾರದೊಂದಿಗೆ ಭಾರತೀಯ ಪರಂಪರೆ ಉಳಿಸಿಕೊಂಡು ಬರುತ್ತಿರುವ ಗಣೇಶ ಸಮಿತಿ ಪದಾಧಿಕಾರಿಗಳ ಕಾರ್ಯ ಪ್ರಶಂಸನೀಯ. 23
ಸದಸ್ಯರು ನೂರಾರು ಒತ್ತಡಗಳ ಮಧ್ಯದಲ್ಲೂ ಅತ್ಯಂತ ಭಕ್ತಿಭಾವದಿಂದ 11 ದಿನಗಳನ್ನು ಇದಕ್ಕಾಗಿ ಮೀಸಲಿಟ್ಟಿದ್ದು ತ್ಯಾಗವೇ ಸರಿ ಎಂದರು.

ಕರ್ನಾಟಕ ಆರ್ಯ ಪ್ರತಿನಿಧಿ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ಸುಭಾಷ ಅಷ್ಠಿಕರ್‌ ಮಾತನಾಡಿ, ಹಳೆ ಅಡತ್‌ ಬಜಾರ ಗಣೇಶ ಸಮಿತಿ ಪದಾಧಿಕಾರಿಗಳು 11ದಿನಗಳ ಕಾಲ ಕಾಟಾಚಾರದ ಗಣೇಶೋತ್ಸವ ಆಚರಿಸದೇ ವೈವಿಧ್ಯಮಯ
ಕಾರ್ಯಕ್ರಮ ಹಮ್ಮಿಕೊಂಡು ಕಲಾಸಕ್ತರಿಗೆ ರಸದೌತಣ ಉಣಬಡಿಸುವ ಮಹತ್ವದ ಕಾರ್ಯ ಮಾಡಿದ್ದಾರೆ ಎಂದು ಬಣ್ಣಿಸಿದರು.

ಬಿಜೆಪಿ ಮುಖಂಡ ಬಸವರಾಜ ಆರ್ಯ, ಪುರಸಭೆ ಮುಖ್ಯಾಧಿಕಾರಿ ಅಶೋಕ ಚನ್ನಕೋಟೆ, ಹಳೆ ಅಡತ್‌ ಗಣೇಶ ಸಮಿತಿ ಉಪಾಧ್ಯಕ್ಷ ಚಂದ್ರಕಾಂತ ಶಂಕರಶಟ್ಟಿ, ಸಮಿತಿ ಪ್ರಧಾನ ಕಾರ್ಯದರ್ಶಿ ದತ್ತಕುಮಾರ ಚಿದ್ರಿ, ಸಹ ಕಾರ್ಯದರ್ಶಿ ನಾಗಭೂಷಣ ವಿಭೂತಿ, ಕೋಶಾಧ್ಯಕ್ಷ ಪ್ರೇಮಕುಮಾರ ಜಾಜಿ ವೇದಿಕೆಯಲ್ಲಿದ್ದರು. ರಾಜಶ್ರೀ ಜಾಜಿ, ಮಹಾನಂದಾ ಮಾಡಗಿ ಪ್ರಾರ್ಥಿಸಿದರು. ಸುಭಾಷ ಭಗೋಜಿ ಸ್ವಾಗತಿಸಿದರು. ಸಾರಿಕಾ ಗಂಗಾ ನಿರೂಪಿಸಿದರು.
ಅಶೋಕ ಡಿ.ಜಾಜಿ ವಂದಿಸಿದರು.

Advertisement

ಇದಕ್ಕೂ ಮುನ್ನ ಸಮಿತಿ ಮಹಿಳಾ ಪದಾಧಿಕಾರಿಗಳಾದ ಲಕ್ಷ್ಮೀ ಡಿ.ಚಿದ್ರಿ, ರೇಖಾ ಆರ್‌.ಸಜ್ಜನಶಟ್ಟಿ, ರೇಣುಕಾ ಎಸ್‌.ಭಗೋಜಿ, ವೀಣಾ ಎನ್‌.ಉದಗೀರೆ ಮೊದಲಾದವರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ
ಮುನ್ನ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಉತ್ಸವ ಯಶಸ್ವಿಗೆ ಕಾರಣಾದ ಪತ್ರಕರ್ತರು, ಪೊಲೀಸ್‌, ಪುರಸಭೆ, ಜೆಸ್ಕಾಂ ಮತ್ತಿತರ ಇಲಾಖೆ ಪ್ರತನಿಧಿಗಳನ್ನು ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next