Advertisement

1001 ಸುಮಂಗಲಿಯರಿಗೆ ಸ್ವರ್ಣಗೌರಿ ಬಾಗಿನ ಅರ್ಪಣೆ

12:30 PM Aug 23, 2017 | Team Udayavani |

ಮೈಸೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಜಗನ್ಮೋಹನ ಅರಮನೆಯಲ್ಲಿ 1001 ಸುಮಂಗಲಿಯರಿಗೆ ಸ್ವರ್ಣಗೌರಿ ಬಾಗಿನ ಸಮರ್ಪಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶ್ರೀ ಅಭಯಂ ಧಾರ್ಮಿಕ ದ್ವಿಮಾಸ ಪತ್ರಿಕೆ, ಸೈಕಲ್‌ ಬ್ರ್ಯಾಂಡ್‌ ಅಗರಬತ್ತಿ ಹಾಗೂ ಸಿರಿ ವಾಹಿನಿಯ ಸಹಯೋಗದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಭಂಡಾರಕೇರಿ ಮಠದ ವಿದ್ಯೆàಶತೀರ್ಥ ಶ್ರೀಪಾದಂಗಳವರು 1001 ಸುಮಂಗಲಿಯರಿಗೆ ಬಾಗಿನ ವಿತರಿಸಿ ಆಶೀರ್ವದಿಸಿದರು.

Advertisement

ದಾಂಪತ್ಯ ಸಂತೋಷವಾಗಿರಲಿ: ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್‌ ಮಾತನಾಡಿ, ವಿವಾಹಿತ ಮಹಿಳೆಯರಿಗೆ ಗೌರಿ ಹಬ್ಬದಂದು ಬಾಗಿನ ನೀಡುವುದು ಅತ್ಯಂತ ಶ್ರೇಷ್ಠ ಸಂಪ್ರದಾಯವಾಗಿದೆ. ಇದರಿಂದ ಅವರ ದಾಂಪತ್ಯ ಜೀವನ ಸಂತೋಷದಿಂದ ಕೂಡಿರಲಿದ್ದು, ಬಾಗಿನ ಸ್ವೀಕರಿಸಿದ ಮಹಿಳೆಯರನ್ನು ದೇವತೆಯ ಸ್ವರೂಪದಲ್ಲಿ ಕಾಣಬೇಕಿದೆ.

ಸುಮಂಗಲಿಯರ ಆಶೀರ್ವಾದ ಸಿಕ್ಕರೆ ಕೋಟಿ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ ಎಂದರು. ಸಮಾಜ ಸೇವಕ ಕೆ.ರಘುರಾಂ ಮಾತನಾಡಿ, ಬಾಗಿನ ಅರ್ಪಿಸುವುದು ಪುಣ್ಯದ ಕಾರ್ಯವಾಗಿದ್ದು, ಈ ಬಾರಿ ತಾಯಿ ಗೌರಿಯ ಆಶೀರ್ವಾದದಿಂದ ರಾಜ್ಯಕ್ಕೆ ಒಳ್ಳೆಯದಾಗಲಿ. ಇಂದಿನ ಸಮಾಜದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಂಗೀಪುರ ನಂಬಿ ಮಠದ ಇಳೈ ಆಳ್ವಾರ್‌ ಸ್ವಾಮೀಜಿ, ಮೈಸೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಲ್ಯಾಕ್‌ ಕಾರ್ಖಾನೆ ನಿರ್ದೇಶಕ ಹುಯಿಲಾಳು ರಾಮಸ್ವಾಮಿ, ಕಲಾವಿದರ ಸಂಘದ ಕಾರ್ಯಾಧ್ಯಕ್ಷ ಎಂ.ಬಸವೇಗೌಡ, ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next