Advertisement

ಬೆಳ್ಳಿ ಗೆದ್ದ ಭಾರತಕ್ಕೆ “ಚಿನ್ನ’ದ ಗೌರವ

01:58 AM Jul 21, 2019 | Team Udayavani |

ಹೊಸದಿಲ್ಲಿ: ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಬಹ್ರೈನ್‌ನ ಕೆಮಿ ಅದೆಕೋಯಾ ಅವರಿಗೆ ಆ್ಯತ್ಲೆಟಿಕ್ಸ್‌ ಇಂಟಿಗ್ರಿಟಿ ಯೂನಿಟ್‌ (ಎಐಯು) ನಾಲ್ಕು ವರ್ಷಗಳ ನಿಷೇಧ ಹೇರಿದ ಕಾರಣ ಭಾರತ ತಂಡ ಏಶ್ಯನ್‌ ಗೇಮ್ಸ್‌ 4/400 ಮೀ. ಮಿಕ್ಸೆಡ್‌ ರಿಲೇಯಲ್ಲಿ ಚಿನ್ನದ ಗೌರವಕ್ಕೆ ಪಾತ್ರವಾಗುವ ಸಾಧ್ಯತೆಯಿದೆ.

Advertisement

ಜಕಾರ್ತಾದಲ್ಲಿ ಕಳೆದ ವರ್ಷ ನಡೆದ ಏಶ್ಯನ್‌ ಗೇಮ್ಸ್‌ನ 4/400 ಮೀ. ಮಿಕ್ಸೆಡ್‌ ರಿಲೇಯಲ್ಲಿ ಮೊಹಮ್ಮದ್‌ ಅನಾಸ್‌, ಹಿಮಾ ದಾಸ್‌, ಅರೋಕಿಯಾ ರಾಜೀವ್‌ ಮತ್ತು ಎಂ.ಆರ್‌. ಪೂವಮ್ಮ ಅವರನ್ನು ಒಳಗೊಂಡ ಭಾರತೀಯ ಮಿಕ್ಸೆಡ್‌ ರಿಲೇ ತಂಡ ಬೆಳ್ಳಿ ಪದಕ ಜಯಿಸಿತ್ತು. ಇದೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಬಹ್ರೈನ್‌ ತಂಡದ ಸದಸ್ಯೆ ಅದೆಕೋಯಾ ಇದೀಗ ನಿಷೇಧಕ್ಕೆ ಒಳಗಾದ ಕಾರಣ ಚಿನ್ನದ ಪದಕ ಭಾರತದ ಪಾಲಾಗಲಿದೆ.

2018ರ ಆಗಸ್ಟ್‌ 24ರಿಂದ ನ. 26ರ ವರೆಗೆ ಅದೆಕೋಯಾ ಭಾಗವಹಿ ಸಿದ ಸ್ಪರ್ಧೆಗಳ ಫ‌ಲಿತಾಂಶಗಳನ್ನು ಅನರ್ಹಗೊಳಿಸಲಾಗಿದೆ ಎಂದು ಎಐಯು ತಿಳಿಸಿದೆ.

ಅನು ರಾಘವನ್‌ಗೆ ಕಂಚು
ಏಶ್ಯನ್‌ ಗೇಮ್ಸ್‌ನಲ್ಲಿ ಅದೆ ಕೋಯಾ 400 ಮೀ. ಹರ್ಡಲ್ಸ್‌ನಲ್ಲೂ ಚಿನ್ನದ ಪದಕ ಜಯಿಸಿದ್ದರು. ಹೀಗಾಗಿ ಈ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತದ ಅನು ರಾಘವನ್‌ ಕಂಚಿನ ಪದಕ ಪಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next